ಸಾರಾಂಶ
ಬೇಲೂರು: ತಾಲೂಕಿನ ಅರೇಹಳ್ಳಿ ಪಟ್ಟಣದ ಮಲಸಾವರ, ಸಕಲೇಶಪುರ ಹಾಗೂ ಉದೆವಾರ ರಸ್ತೆಯ ವಿವಿಧ ಸ್ಥಳಗಳಲ್ಲಿ ಬಿಸಾಡುತ್ತಿದ್ದ ವಿವಿಧ ಬಗೆಯ ಚಾಕೋಲೆಟ್‌ಗಳು ರಸ್ತೆಯಲ್ಲಿ ತಿರುಗಾಡುತ್ತಿದ್ದ ತೋಟದ ಕೂಲಿ ಕಾರ್ಮಿಕರಿಗೆ ಸಿಕ್ಕಿದ್ದು ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ಈ ಬಗ್ಗೆ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಚಾಕೋಲೆಟ್ ಕಂಪೆನಿಯ ಸಿಬ್ಬಂದಿ ವರ್ಗದವರು ಸ್ಥಳಕ್ಕೆ ಆಗಮಿಸಿ ಖುದ್ದು ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ವಿವಿಧ ಸ್ಥಳಗಳಲ್ಲಿ ದೊರೆತಿರುವ ಎಲ್ಲಾ ಚಾಕೋಲೆಟ್ ನಮ್ಮ ಬ್ರಾಂಡಿನದ್ದೆ. ಆದರೆ ಬಿಸಾಡಲು ಮೂಲ ಕಾರಣವೇನು ಎಂದು ಗೊತ್ತಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು. ಕಳೆದೆರಡು ದಿನಗಳಿಂದ ಮಾಧ್ಯಮಗಳಲ್ಲಿ ವರದಿಯಾದ ಚಾಕೋಲೆಟ್‌ಗಳನ್ನು ರಸ್ತೆ ಬದಿಯಲ್ಲಿ ಬಿಸಾಡಿರುವುದು ದೃಢವಾಗಿದ್ದು, ಅವುಗಳಲ್ಲೆವು ನಮ್ಮ ಡೂಬಿ ಕಂಪೆನಿಯಾದಾಗಿದೆ. ಈ ನಮ್ಮ ಡೂಬಿ ಕಂಪೆನಿಯ ಚಾಕೋಲೆಟ್ ಉತ್ಪನ್ನಗಳು ದೇಶ ವಿದೇಶಗಳಲ್ಲಿ ಹೆಚ್ಚೆಚ್ಚು ಮಾರಾಟವಾಗುತ್ತಿದ್ದು ಇದೀಗ ನಮ್ಮ ಜಿಲ್ಲೆಯಲ್ಲೂ ಸಹ ಉತ್ತಮ ಮಾರುಕಟ್ಟೆ ದೊರೆತಿದೆ ಎಂದರು.ಮಾರ್ಕೆಟಿಂಗ್ ವ್ಯವಸ್ಥೆಯಲ್ಲಿ ಉತ್ತಮ ಫಲಿತಾಂಶ ನೀಡಿದ್ದು, ಎಲ್ಲಿಯೂ ಬಿಸಾಡದೆ ಅರೇಹಳ್ಳಿಯಲ್ಲಿ ಮಾತ್ರ ಬಿಸಾಡಿರುವುದನ್ನು ಗಮನಿಸಿದರೆ ಚಾಕೋಲೆಟ್‌ನ ಮಾರುಕಟ್ಟೆಯ ಉತ್ತಮ ಫಲಿತಾಂಶವನ್ನು ಸಹಿಸದೇ ಮಾರುಕಟ್ಟೆಯನ್ನು ಹಾಳುಮಾಡುವ ದುರುದ್ದೇಶದಿಂದ ಕೆಲವರು ಹುನ್ನಾರ ನಡೆಸುತ್ತಿರಬಹುದು ಎಂದೆನಿಸುತ್ತದೆ. ಯಾಕೆಂದರೆ ಇಲ್ಲಿ ಬಹುಮುಖ್ಯವಾಗಿ ನಾನು ಮೂಲತಃ ಇದೆ ಅರೇಹಳ್ಳಿ ಗ್ರಾಮದವನು. ಯಾವುದಕ್ಕೂ ತನಿಖೆಯಲ್ಲಿ ಸತ್ಯ ತಿಳಿದುಬರಲಿದೆ ಕಾದು ನೋಡೋಣ ಎಂದು ಚಾಕೋಲೆಟ್ ಕಂಪೆನಿಯ ಸಿಬ್ಬಂದಿಯೋರ್ವರು ಹೇಳಿದರು.
;Resize=(128,128))
;Resize=(128,128))
;Resize=(128,128))
;Resize=(128,128))