ಹಂಪಿ ವೈಭವದ ಸ್ಫೂರ್ತಿಯಿಂದ ಬೆಂಗಳೂರು ನಗರ ನಿರ್ಮಾಣ

| Published : Jun 28 2024, 12:52 AM IST

ಹಂಪಿ ವೈಭವದ ಸ್ಫೂರ್ತಿಯಿಂದ ಬೆಂಗಳೂರು ನಗರ ನಿರ್ಮಾಣ
Share this Article
  • FB
  • TW
  • Linkdin
  • Email

ಸಾರಾಂಶ

ಮೊದಲನೆಯ ಕೆಂಪೇಗೌಡರು, ವಿಜಯ ನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೆಗಾರರಾಗಿದ್ದರು. ಆಗ ಹಂಪಿಯ ವೈಭವವನ್ನು ಕಂಡು ಬೆರಗಾಗಿ ಅದರ ಸ್ಫೂರ್ತಿಯಿಂದ ಬೆಂಗಳೂರು ನಗರವನ್ನು ನಿರ್ಮಿಸಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ಮೊದಲನೆಯ ಕೆಂಪೇಗೌಡರು, ವಿಜಯ ನಗರ ಸಾಮ್ರಾಜ್ಯದ ಸಾಮಂತ ರಾಜ್ಯವಾಗಿದ್ದ ಯಲಹಂಕ ನಾಡಿನ ಪಾಳೆಗಾರರಾಗಿದ್ದರು. ಆಗ ಹಂಪಿಯ ವೈಭವವನ್ನು ಕಂಡು ಬೆರಗಾಗಿ ಅದರ ಸ್ಫೂರ್ತಿಯಿಂದ ಬೆಂಗಳೂರು ನಗರವನ್ನು ನಿರ್ಮಿಸಿದರು ಎಂದು ಯಾದಗಿರಿ ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಅಭಿಪ್ರಾಯಪಟ್ಟರು. ನಗರದ ಕರವೇ ಕಾರ್ಯಾಲಯದಲ್ಲಿ ನಡೆದ ನಾಡಪ್ರಭು ಕೆಂಪೇಗೌಡರ 515ನೇ ಜಯಂತ್ಯುತ್ಸವ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಯುವ ಕೆಂಪರಾಯನು ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಗುರುಗಳ ಆದೇಶದಂತೆ ನಾಡಿನಾದ್ಯಂತ ಸಂಚರಿಸಿ ಲೋಕಾನುಭವ ಪಡೆದುಕೊಂಡರು. ಗುರುಕುಲದಲ್ಲಿದ್ದಾಗ ಕೆಂಪರಾಯರಿಗೆ ಏಕಾಂಬರಶಾಸ್ತ್ರಿ, ಗುರುನಂಜೇಶ, ಹೀಗೆ ಹಲವು ಪಂಡಿತರ ಗೆಳೆತನವಿತ್ತು. ಮುಂದೆ ಕೆಂಪೆರಾಯನು ಬೆಳೆದು ದೊಡ್ಡವನಾದಂತೆ ಕೆಂಪೇಗೌಡರೆಂಬ ಹೆಸರು ಬಂದಿತು ಎಂದರು.

ಕೆಂಪೇಗೌಡರ ಕನಸಿನ ಬೆಂಗಳೂರು ನಗರದ ನಿರ್ಮಾಣಕಾರ್ಯ 1537ರಲ್ಲಿ ಶುರುವಾಗುತ್ತದೆ. ಮೂಲತಃ ಕೃಷಿ ಕುಟುಂಬದಿಂದ ಬಂದಂತಹ ಕೆಂಪೇಗೌಡರು, ಹೋನನಾರು ಕಟ್ಟುವ ಆಚರಣೆಯಿಂದ ರಾಜಧಾನಿಯ ನಿಮಾರ್ಣಕಾರ್ಯ ಆರಂಭಿಸಿದರು ಎಂದರು.

ಕಾರ್ಯಕ್ರಮದಲ್ಲಿ ಯುವ ಘಟಕ ಅಧ್ಯಕ್ಷರಾದ ವಿಶ್ವರಾಧ್ಯ ದಿಮ್ಮೆ, ಸಂತೋಷ ನಿರ್ಮಲಕರ್, ಭೀಮರಾಯ ರಾಮಸಮುದ್ರ, ಶರಣಪ್ಪ ದಳಪತಿ, ಹಣಮಂತ ಖಾನಳ್ಳಿ, ಸುರೇಶ ಬೆಳಗುಂದಿ, ವಿಜಯ ರಾಠೋಡ, ನಾಗು ತಾಂಡೂಲ್ಕರ್, ಸಾಬು ನೀಲಹಳ್ಳಿ, ಕಾಶಿನಾಥ ನಾನೇಕ, ಅಬ್ದುಲ್ ರೀಯಾಜ್, ಹಣಮಂತ ನಾನೇಕ, ರಮೇಶ ಡಿ. ನಾಯಕ ಇತರರು ಭಾಗಿಯಾಗಿದ್ದರು.