ಸ್ನೇಹಿತರೆಲ್ಲ ಕೂಡಿ ಸಮಾಜಮುಖಿ ಸೇವೆ ಶ್ಲಾಘನೀಯ

| Published : Sep 03 2025, 01:02 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಅಮೀನಗಡ ಜಗತ್ತಿನಲ್ಲಿ ಏನು ಬೇಕಾದರೂ ದೊರೆಯಬಹುದು ಸೇವೆಯ ಭಾಗ್ಯ ದುರ್ಲಭ, ಅಮೀನಗಡದಲ್ಲಿ ಸಮಾನ ಮನಸ್ಕ ಸ್ನೇಹಿತರು ಒಂದಾಗಿ ಸಹಾಯಹಸ್ತಗಳು ಸ್ನೇಹ ಬಳಗವೆಂಬ ಸಂಘವನ್ನು ಕಟ್ಟಿ ಆ ಮೂಲಕ ಸಮಾಜದ ವಿವಿಧ ಸೇವೆ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಹೇಳಿದರು.

ಕನ್ನಡಪ್ರಭ ವಾರ್ತೆ ಅಮೀನಗಡ

ಜಗತ್ತಿನಲ್ಲಿ ಏನು ಬೇಕಾದರೂ ದೊರೆಯಬಹುದು ಸೇವೆಯ ಭಾಗ್ಯ ದುರ್ಲಭ, ಅಮೀನಗಡದಲ್ಲಿ ಸಮಾನ ಮನಸ್ಕ ಸ್ನೇಹಿತರು ಒಂದಾಗಿ ಸಹಾಯಹಸ್ತಗಳು ಸ್ನೇಹ ಬಳಗವೆಂಬ ಸಂಘವನ್ನು ಕಟ್ಟಿ ಆ ಮೂಲಕ ಸಮಾಜದ ವಿವಿಧ ಸೇವೆ ಮಾಡಲು ಮುಂದಾಗಿರುವುದು ಸ್ವಾಗತಾರ್ಹ ಎಂದು ಹುನಗುಂದ ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೇದಾರ ಹೇಳಿದರು.

ಪಟ್ಟಣದ ಪಿಎಂಶ್ರೀ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ.2ರಲ್ಲಿ ಅಮೀನಗಡದ ಸಹಾಯಹಸ್ತಗಳು ಸ್ನೇಹ ಬಳಗವೆಂಬ ನೂತನ ಸಂಘವನ್ನು ಉದ್ಘಾಟಿಸಿ ಮಾತನಾಡಿ, ನೂತನ ಸಂಘ ಪ್ರಾರಂಭದಲ್ಲೇ ಶಾಲೆಯ ನಲಿಕಲಿ ವಿಧ್ಯಾರ್ಥಿಗಳಿಗೆ ₹50 ಸಾವಿರ ಮೌಲ್ಯದ ಪೀಠೋಪಕರಣಗಳು ಹಾಗೂ ಸಮವಸ್ತ್ರ ಉಚಿತವಾಗಿ ನೀಡುವ ಮೂಲಕ ಸಹಾಯಹಸ್ತವನ್ನು ಚಾಚಿದ್ದು ಶ್ಲಾಘನೀಯ. ಸರಕಾರವೂ ನಮ್ಮ ಊರು ನಮ್ಮ ಶಾಲೆ ಅಭಿಯಾನದಡಿ ತಾವು ಕಲಿತ ಶಾಲೆಗೆ ತಮ್ಮ ಕೊಡುಗೆ ನೀಡುವ ಮೂಲಕ ಪ್ರತಿಯೊಬ್ಬರೂ ಸರಕಾರಿ ಶಾಲೆಗೆ ಸಹಕರಿಸಬೇಕು ಎಂಬ ಗುರಿಯನ್ನಿಟ್ಟುಕೊಂಡಿದ್ದು, ನಾನೂ ಹಾಗೂ ನಮ್ಮ ಸಿಬ್ಬಂದಿ ಕೂಡ ಕಲಿತ ಶಾಲೆಗೆ ಅಳಿಲುಸೇವೆ ಸಲ್ಲಿಸಿದ್ದೇವೆ ಎಂದು ಹೇಳಿದರು.

ಸ್ನೇಹಬಳಗದ ಜ್ಯೋತಿ ಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿ, ನಾವು 11 ಸ್ನೇಹಿತರು ಒಂದಾಗಿ ಪ್ರತಿದಿನ ₹10 ಸಂಗ್ರಹಿಸಿ ವರ್ಷಕ್ಕೊಮ್ಮೆ, ವಿವಿಧ ಕ್ಷೇತ್ರಗಳಲ್ಲಿರುವ ಮೂಲ ಸೌಲಭ್ಯಗಳಿಗೆ ಸಹಕಾರ ನೀಡಬೇಕೆಂದು ಉದ್ದೇಶಿಸಿದ್ದೇವೆ ಎಂದು ಹೇಳಿದರು. ಮುಖ್ಯಅತಿಥಿಗಳಾಗಿದ್ದ ಮುಖ್ಯಶಿಕ್ಷಕ ಎಂ.ಎಸ್.ಹರಗಬಲ್ಲ, ಅಮೀನಗಡ ಶಿಕ್ಷಣ ಸಂಯೋಜಕ ಎ.ಎಚ್.ಗೌಡರ, ಕಲ್ಯಾಣದ ಮಾತನಾಡಿದರು.

ಸ್ನೇಹಬಳಗದ ಅನೀಲ ಐಹೊಳ್ಳಿ, ಪರಶುರಾಮ ನಗನೂರ, ರಾಜೇಶ ಮನಗೂಳಿ, ಅಮರೇಶ ಕೋರಿ,ಶಿವಯ್ಯ ವಸ್ತ್ರದ, ಸಂಗಮೇಶ ನೇಗಲಿ, ಸಂಗಮೇಶ ಸೂಡಿ, ವಾಸಂತಿ ಮುಳ್ಳೂರ, ಬಂದುಶ್ರೀ ಗೌಡರ(ಆರಿ), ಜ್ಯೋತಿ ಮ.ಕಾಯಿ(ಕೋರಿ) ಮುಂತಾವರಿದ್ದರು. ಎಸ್‌ಡಿಎಂಸಿ ಅಧ್ಯಕ್ಷ ಮಹೇಶ ಅಧ್ಯಕ್ಷತೆ ವಹಿಸಿದ್ದರು. ವಾಸಂತಿ ಮುಳ್ಳೂರ(ಬಿಸಲದಿನ್ನಿ) ಅವರು ಪ್ರಾರ್ಥಿಸಿದರು. ರಾಜೇಶ ಮನಗೂಳಿ ಸ್ವಾಗತಿಸಿದರು. ಶಿಕ್ಷಕ ಮಲ್ಲಿಕಾರ್ಜುನ ಸಜ್ಜನ ನಿರೂಪಿಸಿ ವಂದಿಸಿದರು.