ಭದ್ರಾವತಿ ನಗರಸಭೆ ವ್ಯಾಪ್ತಿಯ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಮಂಗಳವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
- ಎಚ್.ಸಿ. ದಾಸೇಗೌಡರಿಂದ ಅನ್ನಸಂತರ್ಪಣೆ, ಕೆ.ಲಕ್ಷ್ಮಣ ಸ್ವಾಮಿ ಕುಟುಂಬದಿಂದ ಹೂವಿನ ಅಲಂಕಾರ ಸೇವೆ
- - -ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರಸಭೆ ವ್ಯಾಪ್ತಿಯ ಹುತ್ತಾ ಕಾಲೋನಿ ಶ್ರೀ ವೀರಾಂಜನೇಯ ಸ್ವಾಮಿ ರಥೋತ್ಸವ ಮಂಗಳವಾರ ಮಧ್ಯಾಹ್ನ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.ಬೆಳಗ್ಗೆ ಗಣಪತಿ ಪೂಜೆ, ಪುಣ್ಯಾಹ, ಪ್ರಧಾನ ಹೋಮ, ರಥಶುದ್ಧಿ, ಮಧ್ಯಾಹ್ನ ಬಲಿಪೂರ್ವಕ ಶ್ರೀ ಸ್ವಾಮಿಯ ರಥೋತ್ಸವ ನಡೆಯಿತು. ದೇವಸ್ಥಾನ ಮುಂಭಾಗ ಧಾರ್ಮಿಕ ಆಚರಣೆಗಳೊಂದಿಗೆ ಅಲಂಕೃತಗೊಂಡ ಬೃಹತ್ ರಥದಲ್ಲಿ ಶ್ರೀ ವೀರಾಂಜನೇಯ ಸ್ವಾಮಿ ಪ್ರತಿಷ್ಠಾಪನೆಯೊಂದಿಗೆ ರಥೋತ್ಸವ ಆರಂಭಗೊಂಡಿತು. ಭಕ್ತರು ಸ್ವಾಮಿಗೆ ಜಯಘೋಷಗಳನ್ನು ಹಾಕಿದರು. ಮಹಿಳಾ ಮಂಡಳಿ ಸದಸ್ಯರಿಂದ ಭಜನೆ ನಡೆಯಿತು. ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣು, ಉತ್ತುತ್ತಿ ಎಸೆದು ಭಕ್ತಿ ಮೆರೆದರು.
ಪ್ರತಿ ವರ್ಷದಂತೆ ಈ ಬಾರಿಯೂ ರಥವು ಸರ್ ಎಂ.ವಿ. ಆಟೋ ನಿಲ್ದಾಣದವರೆಗೂ ಸಾಗಿತು. ಹಿರಿಯ ಕಾಂಗ್ರೆಸ್ ಮುಖಂಡ ಎಚ್.ಸಿ. ದಾಸೇಗೌಡ ಅವರಿಂದ ಅನ್ನಸಂತರ್ಪಣೆ ಹಾಗೂ ಕೆ.ಲಕ್ಷ್ಮಣ ಸ್ವಾಮಿ ಕುಟುಂಬದವರಿಂದ ಹೂವಿನ ಅಲಂಕಾರ ಏರ್ಪಡಿಸಲಾಗಿತ್ತು. ಕೆಲವು ಭಕ್ತರಿಂದ ಪಾನಕ, ಕೋಸಂಬರಿ, ಮಜ್ಜಿಗೆ ವಿತರಣೆ ಸೇವೆ ನಡೆಯಿತು.ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಕಂಚಿಬಾಗಿಲು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಪವನ್‌ಕುಮಾರ್ ಉಡುಪ ಸೇರಿದಂತೆ ಇನ್ನಿತರ ಅರ್ಚಕರು ಉಪಸ್ಥಿತರಿದ್ದರು.
ಸಮುದಾಯ ಭವನ (ಚಂದ್ರಾಲಯ) ಸಮಿತಿ ಟ್ರಸ್ಟ್ ಗೌರವ ಅಧ್ಯಕ್ಷರಾದ ಶಾರದ ಅಪ್ಪಾಜಿ, ಅಧ್ಯಕ್ಷ ಕೆ.ಕರಿಯಪ್ಪ, ಪ್ರಧಾನ ಕಾರ್ಯದರ್ಶಿ ಎಚ್. ಶ್ರೀ ಶ್ರೀರಾಮ, ಕಾರ್ಯದರ್ಶಿ ಮನೋಜ್ ಕುಮಾರ್, ಖಜಾಂಚಿ ಎ.ಟಿ. ರವಿ, ಟ್ರಸ್ಟಿಗಳಾದ ಕೆ.ಈರಣ್ಣ, ಎಚ್.ಎನ್. ಕೃಷ್ಣೇಗೌಡ, ಟಿ.ಕೃಷ್ಣನ್, ಎನ್.ರಾಮಕೃಷ್ಣ, ಎಂ.ಎನ್. ರಾಮಯ್ಯ, ಮಾರುತಿ, ಟಿ.ನಾರಾಯಣ, ಬಿ.ಎಲ್. ನಾಗಭೂಷಣ, ವಿ.ಚಂದ್ರ, ವಿವಿಧ ಸಂಘ ಸಂಸ್ಥೆಗಳ ಪ್ರಮುಖರಾದ ಬಿ.ಜೆ. ರಾಮಲಿಂಗಯ್ಯ, ಸಿದ್ದಲಿಂಗಯ್ಯ, ತಿಮ್ಮೇಗೌಡ, ಶಿವಾಜಿ ರಾವ್ ಗಾಯಕ್ವಾಡ್, ವಿಶ್ವ ಹಿಂದೂ ಪರಿಷದ್, ಭಜರಂಗದಳ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡರು, ಕಾರ್ಯಕರ್ತರು, ಜನ್ನಾಪುರ, ಜಿಂಕ್ ಲೈನ್, ಹುತ್ತಾ ಕಾಲೋನಿ, ನ್ಯೂಟೌನ್, ವಿದ್ಯಾಮಂದಿರ, ಆಂಜನೇಯ ಅಗ್ರಹಾರ ಸೇರಿದಂತೆ ವಿವಿಧೆಡೆಗಳಿಂದ ಭಕ್ತರು ಪಾಲ್ಗೊಂಡಿದ್ದರು.- - -
-ಡಿ೨-ಬಿಡಿವಿಟಟಿ, -ಡಿ೨-ಬಿಡಿವಿಟಿ(ಎ) ಮತ್ತು (ಬಿ):ಭದ್ರಾವತಿ ನಗರಸಭೆ ವ್ಯಾಪ್ತಿಯ ಹುತ್ತಾ ಕಾಲೋನಿಯಲ್ಲಿ ಮಂಗಳವಾರ ಮಧ್ಯಾಹ್ನ ಶ್ರೀ ವೀರಾಂಜನೇಯ ಸ್ವಾಮಿ ದೇಗುಲದಲ್ಲಿ ಉತ್ಸವ ಮೂರ್ತಿಯನ್ನು ದೇವಸ್ಥಾನ ಪ್ರಾಂಗಣದಲ್ಲಿ ಪ್ರದಕ್ಷಿಣೆ ಬಳಕ ಅದ್ಧೂರಿ ರಥೋತ್ಸವ ನಡೆಸಲಾಯಿತು.