ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರದೇಶದ ಕಾರ್ಮಿಕ ವರ್ಗವನ್ನು ಗುಲಾಮಗಿರಿಗೆ ನೂಕುವ ಕಾರ್ಮಿಕ ಸಂಹಿತೆಗಳನ್ನು ತಕ್ಷಣ ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಹಲವಾರು ಕಾರ್ಮಿಕ ಸಂಘಟನೆಗಳು ಬುಧವಾರ ನಗರದ ಪ್ರಧಾನ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದವು.ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ ಮಾತನಾಡಿ, ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯದ ನಂತರ ಕಾರ್ಮಿಕ ವರ್ಗವು ನಡೆಸಿದ ಹಲವಾರು ಸಮರಶೀಲ, ದಿಟ್ಟ ಹೋರಾಟದಿಂದಾಗಿ ದೇಶದಲ್ಲಿ ಕಾರ್ಮಿಕರಿಗೆ ಹಲವಾರು ಕಾನೂನಾತ್ಮಕ ರಕ್ಷಣೆಗಳನ್ನು ನೀಡಲಾಗಿತ್ತು ಎಂದರು.
ಕಾರ್ಮಿಕ ವಿರೋಧಿ ನೀತಿಗಳುಡಾ.ಅಂಬೇಡ್ಕರ್ ಕಾರ್ಮಿಕ ಸಚಿವರಾಗಿದ್ದಾಗ ಹಲವಾರು ಕಾನೂನು ಜಾರಿಗೊಳಿಸಿದ್ದರು. ಈ ಎಲ್ಲಾ ಕಾನೂನುಗಳನ್ನು ಇಂದಿನ ಕೇಂದ್ರ ಸರ್ಕಾರವು ರದ್ದುಪಡಿಸಿ ೨೦೧೯ ಮತ್ತು ೨೦೨೦ ರಲ್ಲಿ ಲೋಕಸಭೆಯಲ್ಲಿ ಯಾವುದೇ ಚರ್ಚೆ ಇಲ್ಲದೇ ಏಕಪಕ್ಷೀಯವಾಗಿ ೪ ಕಾರ್ಮಿಕ ಸಂಹಿತೆಗಳನ್ನು ಅನುಮೋಧನೆ ಪಡೆದುಕೊಂಡಿದೆ ಎಂದು ಆರೋಪಿಸಿದರು.ದೇಶದಲ್ಲಿ ಕಾಪ್ರೊರೇಟ್ ಕಂಪನಿಗಳು ಬಂಡವಾಳ ಹೂಡಲು ದೇಶದಲ್ಲಿರುವ ಕಾರ್ಮಿಕ ಕಾನೂನುಗಳನ್ನು ಸರಳೀಕರಣ ಮಾಡಬೇಕು ಎಂದು ಹೇಳಿ ಕಾರ್ಮಿಕ ಸಂಹಿತೆಗಳನ್ನು ಜಾರಿ ಮಾಡಲು ನಿರಂತರವಾಗಿ ಪ್ರಯತ್ನಿಸುತ್ತಿವೆ ಕೆಲಸದ ಅವಧಿ ೧೨ ಗಂಟೆ ತನಕ ಹೆಚ್ಚಿಸಲು, ಕಾರ್ಮಿಕರು ಅತ್ಯಂತ ಕಡಿಮೆ ವೇತನಕ್ಕೆ ಯಾವುದೇ ಸೌಲಭ್ಯಗಳು ಇಲ್ಲದೇ ಕಾಪ್ರೊರೇಟ್ ಕಂಪನಿಗಳಲ್ಲಿ ಗುಲಾಮರ ರೀತಿಯಲ್ಲಿ ದುಡಿಯುವ ಪರಿಸ್ಥಿತಿ ತರಲು ಕೇಂದ್ರ ಸರ್ಕಾರ ಹೊರಟಿರುವುದು ಖಂಡನೀಯ.ಕಾರ್ಮಿಕರ ವಜಾಗೆ ಅವಕಾಶ
ಕಾರ್ಮಿಕರು ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸಂಘಗಳನ್ನು ರಚಿಸಿಕೊಳ್ಳಲು ಇರುವ ಸಂವಿಧಾನಬದ್ದ ಹಕ್ಕನ್ನು ನಿರಾಕರಿಸಲಾಗಿದೆ. ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಕಾರ್ಮಿಕರು ಮುಷ್ಕರ ಮಾಡಿದರೆ ಸಂಘಟಿತ ಅಪರಾಧವೆಂದು ಜೈಲಿಗೆ ಹಾಕಲು ಈ ಸಂಹಿತೆಗಳನ್ನು ಅವಕಾಶ ನೀಡಲಿದೆ. ಆಡಳಿತ ಮಂಡಳಿಯೊಂದಿಗೆ ಸಮಸ್ಯೆಗಳ ಕುರಿತು ಚೌಕಾಸಿ ಮಾಡುವ ಹಕ್ಕನ್ನು ಕಸಿಯಲಾಗಿದೆ. ಜೊತೆಗೆ ಕಾರ್ಮಿಕರ ಮೇಲೆ ಆಡಳಿತ ಮಂಡಳಿಯು ಸಣ್ಣ ತಪ್ಪುಗಳಿಗೆ ಕೆಲಸದಿಂದ ಕಿತ್ತು ಹಾಕಲು ಅವಕಾಶ ಕೊಡಲಿದೆ ಎಂದು ದೂರಿದರು.ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ವಿಜಯಕೃಷ್ಣ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಟಿ.ಎಂ.ವೆಂಕಟೇಶ್, ಮುಖಂಡರಾದ ವಿ.ಮಂಜುಳ, ಎಂ.ಭೀಮರಾಜ್, ಎಸ್.ಆಶಾ, ಹರೀಶ್, ನಿಖಿಲ್, ವಿ.ವೆಂಕಟರಾಮೇಗೌಡ, ಎನ್.ಕಲ್ಪನಾ, ಲಕ್ಷ್ಮೀಕ್ಷಿ?ಮದೇವಮ್ಮ, ಹೊಗರಿ ನಾಗರಾಜಪ್ಪ, ಗದ್ದೆಕಣ್ಣೂರು ನಾರಾಯಣಪ್ಪ, ಆರೋಗ್ಯನಾಥನ್, ಶಿವರಾಜ್, ಮುನಿವೆಂಕಟಪ್ಪ, ಮೂರ್ತಿ, ಅಂಬರೀಶ್, ಪೃಥ್ವಿ, ರಮೇಶ್, ಅವಿನಾಶ್, ಜ್ಯೋತಿಕುಮಾರ್, ಸಂತೋಷ್ ಒಂಬರೆಡ್ಡಿ, ಶರತ್, ನಾರಾಯಣಸ್ವಾಮಿ, ಸುನೀಲ್, ಹೆಚ್.ವಿ.ನಿಕೀಲ್, ನಂದನ್‌ಕುಮಾರ್, ನಿಖಿಲ್, ಅರುಣ, ಶಿವಕುಮಾರ್, ಸೂರ್ಯ, ಮೇಘನಾ ಇದ್ದರು.