ಕಾಂಗ್ರೆಸ್‌ ಸರ್ಕಾರಕ್ಕೆ ಓಟಿನ ಮೂಲಕ ಪಾಠ ಕಲಿಸಬೇಕಿದೆ: ಬಸವಜಯ ಮೃತ್ಯುಂಜಯ ಶ್ರೀ

| Published : Jan 06 2025, 01:05 AM IST

ಕಾಂಗ್ರೆಸ್‌ ಸರ್ಕಾರಕ್ಕೆ ಓಟಿನ ಮೂಲಕ ಪಾಠ ಕಲಿಸಬೇಕಿದೆ: ಬಸವಜಯ ಮೃತ್ಯುಂಜಯ ಶ್ರೀ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ 2ಎ ಮೀಸಲಾತಿಯ ಹೋರಾಟ ಹತ್ತಿಕ್ಕಲು ಹೋರಾಟಗಾರರಿಗೆ ಕಾಂಗ್ರೆಸ್ ಸರ್ಕಾರ ಲಾಠಿ ಏಟು ಕೊಟ್ಟಿದೆ. ಆದರೆ ನಾವು ಮುಂದಿನ ದಿನಗಳಲ್ಲಿ ಓಟಿನ ಮೂಲಕ ಅವರಿಗೆ ತಕ್ಕಪಾಠ ಕಲಿಸಲು ಮುಂದಾಗಬೇಕಿದೆ.

ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮನ 202ನೇ ವಿಜಯೋತ್ಸವ, 247ನೇ ಜಯಂತ್ಯುತ್ಸವಕನ್ನಡಪ್ರಭ ವಾರ್ತೆ ಕುಷ್ಟಗಿ

ನಮ್ಮ 2ಎ ಮೀಸಲಾತಿಯ ಹೋರಾಟ ಹತ್ತಿಕ್ಕಲು ಹೋರಾಟಗಾರರಿಗೆ ಕಾಂಗ್ರೆಸ್ ಸರ್ಕಾರ ಲಾಠಿ ಏಟು ಕೊಟ್ಟಿದೆ. ಆದರೆ ನಾವು ಮುಂದಿನ ದಿನಗಳಲ್ಲಿ ಓಟಿನ ಮೂಲಕ ಅವರಿಗೆ ತಕ್ಕಪಾಠ ಕಲಿಸಲು ಮುಂದಾಗಬೇಕಿದೆ ಎಂದು ಕೂಡಲ ಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಶ್ರೀಗಳು ಹೇಳಿದರು.

ತಾಲೂಕಿನ ಕಡೇಕೊಪ್ಪ ಗ್ರಾಮದಲ್ಲಿ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ವತಿಯಿಂದ ವೀರಮಾತೆ ಕಿತ್ತೂರು ರಾಣಿ ಚೆನ್ನಮ್ಮನ 202ನೇ ವಿಜಯೋತ್ಸವ, 247ನೇ ಜಯಂತ್ಯುತ್ಸವದಲ್ಲಿ ಮಾತನಾಡಿದರು. ಇವರು ನಮ್ಮ ಹೋರಾಟಗಾರರಿಗೆ ಕೊಟ್ಟ ಲಾಠಿ ಏಟಿನಿಂದ ಶಾಂತಿಯಿಂದ ಮಾಡುತ್ತಿರುವ ಹೋರಾಟ ಕೈಬಿಟ್ಟು ಕ್ರಾಂತಿಯಿಂದ ನಮ್ಮ ಮೀಸಲಾತಿ ಹಕ್ಕನ್ನು ಪಡೆಯುವ ಬದಲಿಗೆ ಕಿತ್ತುಕೊಳ್ಳಬೇಕಿದೆ ಎಂದರು.

ಕಾಂಗ್ರೆಸ್ ಸರ್ಕಾರದಲ್ಲಿ ನಮ್ಮ ಸಮಾಜದ ಶಾಸಕರು ನಮ್ಮ ಪರವಾಗಿಲ್ಲ. ಅವರು ಕುರ್ಚಿಯ ಹಿಂದೆ ಬಿದ್ದಿದ್ದಾರೆ, ನಾವೆಲ್ಲ ಅವರನ್ನು ಕೈಬಿಟ್ಟು ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ಮುಖ್ಯಮಂತ್ರಿಗಳು ನಮ್ಮ ಸಮುದಾಯದವರ ಕ್ಷಮೆ ಕೇಳಲಿಲ್ಲ, ಹಲ್ಲೆ ಮಾಡಿರುವ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಿಲ್ಲ. ಆದ ಕಾರಣ ನಾವು ಕಾನೂನಿನ ಮೂಲಕ ನ್ಯಾಯ ಪಡೆದುಕೊಳ್ಳಬೇಕಾಗಿದೆ. ಸಂಕ್ರಮಣದ ನಂತರ ನಾನು ಹಳ್ಳಿ ಹಳ್ಳಿಗೂ ತೆರಳಿ ಪ್ರತಿಜ್ಞಾ ಕ್ರಾಂತಿ ಅಭಿಯಾನ ಮಾಡಲಿದ್ದು ಎಲ್ಲರೂ ಒಂದಾಗಿ ಸಂಘಟನೆ ಮುಂದಾಗಬೇಕು ಎಂದರು.

ನಿಲೋಗಿಯ ಸಿದ್ದಲಿಂಗ ಸ್ವಾಮೀಜಿ, ಸಮಾಜದ ಮುಖಂಡ ಕೆ. ಬಸವರಾಜ ಮಾತನಾಡಿದರು.

ನಾಗರತ್ನ ಬಾವಿಕಟ್ಟಿ ಉಪನ್ಯಾಸ ನೀಡಿದರು. ಈ ಸಂದರ್ಭ ಸಮಾಜದ ತಾಲೂಕು ಅಧ್ಯಕ್ಷ ದೇವೇಂದ್ರಪ್ಪ ಬಳೂಟಗಿ, ವೀರಶೈವ ಮಹಾಸಭಾದ ಜಿಲ್ಲಾ ಅಧ್ಯಕ್ಷ ಕಳಕನಗೌಡ, ಡಿ.ಎಸ್. ಕಂದಕೂರು, ಪ್ರಮುಖರಾದ ಶರಣಪ್ಪ ಜಿಗೇರಿ, ಚನ್ನಬಸಪ್ಪ ನಾಯಕವಾಡಿ, ಬಸವರಾಜ ಪಾಟೀಲ, ವೀರೇಶ ನಾಲತವಾಡ, ಸಂಗನಗೌಡ ಪಾಟೀಲ, ಬಸವರಾಜ ಹಳ್ಳೂರು, ದೇವರಾಜ ಹಾಲಸಮುದ್ರ, ಶಿವಪ್ಪ ಗೆಜ್ಜೆಲಗಟ್ಟಿ, ರಮೇಶ ಗಡಾದ, ಮಲಕಾಜಗೌಡ ಕಡೇಕೊಪ್ಪ, ಅಮರೇಗೌಡ ವಕೀಲರು, ಸಂಗನಗೌಡ ಪಾಟೀಲ್, ಸುರೇಶ ಕೌದಿ, ವಿಜಯಕುಮಾರ್ ಅಪ್ಪಾಜಿ, ನಿಂಗಪ್ಪ ಜಿಗೇರಿ ಸೇರಿದಂತೆ ಕಡೇಕೊಪ್ಪ ಗ್ರಾಮದ ಪಂಚಮಸಾಲಿ ಸಮಾಜದ ಮುಖಂಡರು, ಮಹಿಳೆಯರು ಇದ್ದರು.