ಶಿಶುಪಾಲನಾ ಕೇಂದ್ರ ಸ್ಥಗಿತಗೊಳಿಸುವ ಕಾಂಗ್ರೆಸ್‌ ಸರ್ಕಾರ ಕ್ರಮ ಸರಿಯಲ್ಲ

| Published : Dec 02 2023, 12:45 AM IST

ಶಿಶುಪಾಲನಾ ಕೇಂದ್ರ ಸ್ಥಗಿತಗೊಳಿಸುವ ಕಾಂಗ್ರೆಸ್‌ ಸರ್ಕಾರ ಕ್ರಮ ಸರಿಯಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಅಧಿಕಾರಿಗಳು ಯಾವ ಕಾರ್ಡ್‌ಗಳು ಸರಿ ಇವೆ ಎನ್ನುತ್ತಿದ್ದಾರೆ. ಅಧಿಕಾರಿಗಳೇನು ಅನುಕಂಪ ಇದೆ. ಆದರೆ ಮಂತ್ರಿಗಳಿಗೆ ಏಕೆ ಇಲ್ಲ. ಒಂದು ವೇಳೆ ಬೋಗಸ್‌ ಕಾರ್ಡ್‌ ಇದ್ದರೆ, ಭ್ರಷ್ಟಚಾರ ನಡೆದಿದ್ದರೆ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಯಾರೋ ಮಾಡಿದ ತಪ್ಪಿಗೆ ಮಕ್ಕಳಿಗೆ ಯಾಕೆ ಶಿಕ್ಷೆ ಕೊಡಬೇಕು. ಅವರಗೆ ಒಂದು ತುತ್ತು ಅನ್ನ ಹಾಕಲು ಈ ಸರ್ಕಾರಕ್ಕೆ ಆಗಲ್ವ ಎಂದು ಪ್ರಶ್ನಿಸಿದರು.

ಶಿವಮೊಗ್ಗ: ಕಟ್ಟಡ ಕಾರ್ಮಿಕರ ಮಕ್ಕಳ ಲಾಲನೆ ಪಾಲನೆಗಾಗಿ ರಾಜ್ಯದಲ್ಲಿ ತೆರೆದಿರುವ ಶಿಶುಪಾಲನಾ ಕೇಂದ್ರಗಳಿಗೆ ಎಳ್ಳುನೀರು ಬಿಡಲು ಕಾಂಗ್ರೆಸ್‌ ಸರ್ಕಾರ ಹೊರಟಿರುವುದು ಸರಿಯಲ್ಲ ಶಾಸಕ ಎಸ್‌.ಎನ್‌. ಚನ್ನಬಸಪ್ಪ ದೂರಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಶಿಶುಪಾಲನಾ ಕೇಂದ್ರಗಳನ್ನು ಪನರ್‌ ಆರಂಭಿಸಲು ಕಾರ್ಯಾದೇಶ ನೀಡಬೇಕಾಗಿದ್ದ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯು, ಈ ಕೇಂದ್ರಗಳಿಗೆ ಬರುತ್ತಿರುವ ಮಕ್ಕಳು ಕಟ್ಟಡ ಕಾರ್ಮಿಕರ ಮಕ್ಕಳಲ್ಲ, ಲೇಬರ್‌ ಕಾರ್ಡ್‌ ಬೋಗಸ್‌ ಆಗಿದೆ. ಹೀಗಾಗಿ, ಈ ಕೇಂದ್ರಗಳನ್ನು ಸ್ಥಗಿತಗೊಳಿಸಬೇಕೆಂದು ಮೌಖಿಕವಾಗಿ ಸೂಚಿಸಿದೆ. ಇದರಿಂದ ಇಲ್ಲಿಗೆ ಬರುತ್ತಿದ್ದ ಸಾವಿರಾರು ಮಕ್ಕಳ ಭವಿಷ್ಯ ಡೋಲಾಯಮಾನ ಆಗಲಿದೆ ಎಂದು ಆಪಾದಿಸಿದರು.

ಮಹಿಳಾ ಕಟ್ಟಡ ಕಾರ್ಮಿಕರು ಕೆಲಸಕ್ಕೆ ಹೋಗಿ, ವಾಪಸ್‌ ಬರುವವರೆಗೂ ಅವರ ಆರು ತಿಂಗಳಿಂದ ಆರು ವರ್ಷದವರೆಗಿನ ಮಕ್ಕಳನ್ನು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಲಾಲನೆ ಪಾಲನೆ ಮಾಡುವ ಉದ್ದೇಶದಿಂದ ಶಿಶುಪಾಲನಾ ಕೇಂದ್ರಗಳನ್ನು ಸ್ಥಾಪಿಸಲಾಗಿತ್ತು. ಆದರೆ, ಈಗಿನ ಕಾಂಗ್ರೆಸ್‌ ಸರ್ಕಾರ ರದ್ದು ಮಾಡಿರುವುದು ಕಾರ್ಮಿಕರಿಗೆ ಮಾಡಿದ ದ್ರೋಹವಾಗಿದೆ ಮಾಡಿದರೆ ಎಂದು ಆರೋಪಿಸಿದರು.

ಬೋಗಸ್ ಕಾರ್ಡ್‌ಗಳು ಇವೇ ಎಂಬ ಕಾರಣಕ್ಕಾಗಿ ಈ ಯೋಜನೆಯನ್ನು ರದ್ದು ಮಾಡಿದ್ದೇವೆ ಎಂದು ಸಚಿವರು ಹೇಳುತ್ತಿದ್ದಾರೆ. ಅಧಿಕಾರಿಗಳು ಯಾವ ಕಾರ್ಡ್‌ಗಳು ಸರಿ ಇವೆ ಎನ್ನುತ್ತಿದ್ದಾರೆ. ಅಧಿಕಾರಿಗಳೇನು ಅನುಕಂಪ ಇದೆ. ಆದರೆ ಮಂತ್ರಿಗಳಿಗೆ ಏಕೆ ಇಲ್ಲ. ಒಂದು ವೇಳೆ ಬೋಗಸ್‌ ಕಾರ್ಡ್‌ ಇದ್ದರೆ, ಭ್ರಷ್ಟಚಾರ ನಡೆದಿದ್ದರೆ ಅಧಿಕಾರಗಳ ವಿರುದ್ಧ ಕ್ರಮ ಕೈಗೊಳ್ಳಲಿ. ಅದನ್ನು ಬಿಟ್ಟು ಯಾರೋ ಮಾಡಿದ ತಪ್ಪಿಗೆ ಮಕ್ಕಳಿಗೆ ಯಾಕೆ ಶಿಕ್ಷೆ ಕೊಡಬೇಕು. ಅವರಗೆ ಒಂದು ತುತ್ತು ಅನ್ನ ಹಾಕಲು ಈ ಸರ್ಕಾರಕ್ಕೆ ಆಗಲ್ವ ಎಂದು ಪ್ರಶ್ನಿಸಿದರು.

ಕಾರ್ಮಿಕ ಇಲಾಖೆ ಸಚಿವರ ನಿರ್ಧಾರ ಖಂಡನೀಯವಾಗಿದ್ದು ಕೂಡಲೇ ಮುಖ್ಯಮಂತ್ರಿಗಳು ಮಧ್ಯ ಪ್ರವೇಶ ಮಾಡಿ, ಮುಚ್ಚಿರುವ ಶಿಶುಪಾಲನಾ ಕೇಂದ್ರಗಳನ್ನು ಪುನಾರಂಭ ಮಾಡಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಜ್ಞಾನೇಶ್ವರ್, ಜಗದೀಶ್, ಬಾಲು ಮತ್ತಿತರರು ಇದ್ದರು.

- - - (-ಫೋಟೋ: ಚನ್ನಬಸಪ್ಪ, ಶಿವಮೊಗ್ಗ ಶಾಸಕ)