ಸಂವಿಧಾನದಲ್ಲಿ ಸಮಾನತೆ, ಸಾಮಾಜಿಕ, ರಾಜಕೀಯ, ಆರ್ಥಿಕ, ಭ್ರಾತೃತ್ವ ಪದಗಳಿವೆ. ಎಲ್ಲರೂ ಯಾವುದರಿಂದಲೂ ವಂಚಿತರಾಗಬಾರದು ಎಂಬ ಕಾರಣಕ್ಕೆ ದೂರಾಲೋಚನೆಯಿಂದ ಸಮಾನ ಪ್ರಾತಿನಿಧ್ಯ ನೀಡಲಾಗಿದೆ.
ದಾಬಸ್‍ಪೇಟೆ: ಭಾರತೀಯ ಸಂವಿಧಾನ ಎಲ್ಲ ಕಾನೂನುಗಳ ತಾಯಿ ಬೇರು. ಅದು ಧರ್ಮ ಗ್ರಂಥವಲ್ಲ, ಸರ್ವರಿಗೂ, ಸರ್ವ ಕಾಲಕ್ಕೂ ಅನ್ವಯವಾಗುವ ಕಾನೂನು ಎಂದರೆ ಅದು ಸಂವಿಧಾನ ಮಾತ್ರ ಎಂದು ಎಸ್ ಆರ್ ಎಸ್ ಶಾಲೆಯ ಆಡಳಿತಾಧಿಕಾರಿ ರಿಶ್ವಂತ್ ರಾಮು ತಿಳಿಸಿದರು. ಪಟ್ಟಣದ ಎಸ್ ಆರ್ ಎಸ್ ವಿದ್ಯಾನಿಕೇತನ ಶಾಲೆಯಲ್ಲಿ ಸಂವಿಧಾನ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಸಂವಿಧಾನ ಪೀಠಿಕೆ ಬೋಧಿಸಿ ಮಾತನಾಡಿ, ಸಂವಿಧಾನದಲ್ಲಿ ಸಮಾನತೆ, ಸಾಮಾಜಿಕ, ರಾಜಕೀಯ, ಆರ್ಥಿಕ, ಭ್ರಾತೃತ್ವ ಪದಗಳಿವೆ. ಎಲ್ಲರೂ ಯಾವುದರಿಂದಲೂ ವಂಚಿತರಾಗಬಾರದು ಎಂಬ ಕಾರಣಕ್ಕೆ ದೂರಾಲೋಚನೆಯಿಂದ ಸಮಾನ ಪ್ರಾತಿನಿಧ್ಯ ನೀಡಲಾಗಿದೆ. ಕಾನೂನು ತತ್ವಗಳ ಜೊತೆಗೆ ಮಾನವೀಯ ಗುಣ ಬೆಳೆಸಿಕೊಂಡಾಗ ಸಂವಿಧಾನದ ತತ್ವ ತಿಳಿಯುತ್ತದೆ ಎಂದು ಹೇಳಿದರು.
ಮುಖ್ಯಶಿಕ್ಷಕಿ ಮೀನಾಕುಮಾರಿ ಮಾತನಾಡಿದರು.