ಸಾರಾಂಶ
ಕನ್ನಡಪ್ರಭ ವಾರ್ತೆ ಪರಶುರಾಂಪುರ
ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಮತ್ತು ಪತ್ರಿಕಾ ರಂಗಕ್ಕೆ ಸಂವಿಧಾನವೇ ಭದ್ರ ಬುನಾದಿ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಪರಶುರಾಂಪುರದಲ್ಲಿ ದಲಿತ ಸಂಘಟನೆಗಳು, ಮಾದಿಗ ನೌಕರರ ವರ್ಗ ಮತ್ತು ದಲಿತ ಭೀಮಾ ಯುವಕ ಸಂಘಟನೆಯ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಜಯಂತಿಯಲ್ಲಿ ಮಾತನಾಡಿದರು.
ಭಾರತ ಸೇರಿ ಇತರ ದೇಶಗಳಲ್ಲೂ ಅಂಬೇಡ್ಕರ್ ಜನ್ಮದಿನ ಆಚರಿಸಲಾಗುತ್ತದೆ ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯಲ್ಲಿ ಅಂಬೇಡ್ಕರ್ ಸಿದ್ಧಾಂತಗಳು ಪ್ರಚಲಿತವಾಗಿವೆ ಅವರು ಸಂವಿಧಾನವನ್ನು ಶೋಷಿತರಿಗೆ ಸೇರಿದಂತೆ ಎಲ್ಲರೂ ಸಮಾನತೆ ಮತ್ತು ಏಳಿಗೆಗೆ ಪೂರಕವಾಗಿ ರಚಿಸಿದ್ದಾರೆ ಎಂದರು.ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಇತರೆ ದೇಶಗಳಿಗೂ ಮಾದರಿಯಾಗಿದೆ ಇಲ್ಲಿ ಮಹಿಳೆಯರಿಗೆ ಸಮಾನ ಅವಕಾಶ, ಶಿಕ್ಷಣ, ಧಾರ್ಮಿಕ ಸಾಮಾಜಿಕ ಸಮಾನತೆ ಇದೆ ಅಂಬೇಡ್ಕರ್ ಹಾಕಿಕೊಟ್ಟ ಶಿಕ್ಷಣ ಸಂಘಟನೆ ಮತ್ತು ಹೋರಾಟದ ಮಾರ್ಗದಲ್ಲಿ ಸಾಗಿ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
ಉಪನ್ಯಾಸ ನೀಡಿದ ಕವಿ ಕೊರ್ಲಗುಂಟೆ ತಿಪ್ಪೇಸ್ವಾಮಿ, ಸಂವಿಧಾನ ಓದಿರುವವರು ಕಡಿಮೆ ಓದಿರುವವರು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಆಡಳಿತ ವರ್ಗದಿಂದ ಸಂವಿಧಾನದ ಆಶಯ ಈಡೇರುತ್ತಿಲ್ಲ ಭಾರತದ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.ಅಂಬೇಡ್ಕರ್ ಚಿಂತನೆಯಂತೆ ನಿರುದ್ಯೋಗಿಗಳಿಗೆ ಉದ್ಯೋಗ ದಕ್ಕಬೇಕು ದೇಶದ ಸಂಪನ್ಮೂಲ ಸಮಾನವಾಗಿ ಹಂಚಿಕೆಯಾಗಬೇಕು ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಆರ್ ರಂಗಸ್ವಾಮಿ, ವಕೀಲರಾದ ಪಿಒ ಪ್ರಕಾಶ್, ಉಪನ್ಯಾಸಕ ಪರಮೇಶ್ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಎಂ.ಆರ್.ರುದ್ರೇಶ್, ಸರೋಜಮ್ಮ, ಅನಿತಮ್ಮ, ಜಗಳೂರು ಸ್ವಾಮಿ, ಮೆಡಿಕಲ್ ಕೇಶವಣ್ಣ, ಬಿ ಗುಜ್ಜಾರಪ್ಪ, ಚೌಳೂರ್ ಪ್ರಕಾಶ, ಟಿ ಬಸವರಾಜು, ಪ್ರಸನ್ನ, ಬಿ ಆಂಜನೇಯ, ಬಿ ಬಾಬು,ರಮೇಶ್ ಗೌಡ, ನಾಗಭೂಷಣ, ಏಕೆ ದುರ್ಗಪ್ಪ, ಚನ್ನಪ್ಪ, ಎಚ್ ಶಿವಾನಂದ, ಶಿವಕುಮಾರ್ ಇದ್ದರು.