ಭಾರತ ಸಂವಿಧಾನ ದೇಶದ ಅದ್ಭುತ ಶಕ್ತಿ: ಶಾಸಕ ಕೃಷ್ಣನಾಯ್ಕ

| Published : Apr 15 2025, 12:55 AM IST

ಭಾರತ ಸಂವಿಧಾನ ದೇಶದ ಅದ್ಭುತ ಶಕ್ತಿ: ಶಾಸಕ ಕೃಷ್ಣನಾಯ್ಕ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ರಚಿಸಿದ ಸಂವಿಧಾನ ಈ ದೇಶದ ಅದ್ಭುತ ಶಕ್ತಿಯಾಗಿದೆ.

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ಸಂವಿಧಾನ ಶಿಲ್ಪಿ ಡಾ. ಬಿ.ಆರ್‌.ಅಂಬೇಡ್ಕರ್‌ ರಚಿಸಿದ ಸಂವಿಧಾನ ಈ ದೇಶದ ಅದ್ಭುತ ಶಕ್ತಿಯಾಗಿದ್ದು, ಯಾವುದೇ ರಾಜಕೀಯ ಹಿನ್ನೆಲೆ ಇಲ್ಲದೇ, ಗ್ರಾಮೀಣ ಪ್ರದೇಶದ ಸಾಮಾನ್ಯ ರೈತನ ಮಗನಾದ ನಾನು ಶಾಸಕನಾಗಲು ಸಂವಿಧಾನ ಕಾರಣವೇ ಕಾರಣ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು.

ಇಲ್ಲಿನ ತೇರು ಹನುಮಪ್ಪದ ಹತ್ತಿರದ ವೇದಿಕೆಯಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಜಯಂತಿ ಉದ್ಘಾಟಿಸಿ ಮಾತನಾಡಿದರು.

ಸಾಮಾಜಿಕ ಸಮಾನತೆಯ ಹರಿಕಾರರಾದ ಅಂಬೇಡ್ಕರ್ ಕೇವಲ ದಲಿತರು, ಹಿಂದುಳಿದ ಜನಾಂಗಕ್ಕೆ ಮಾತ್ರ ಮೀಸಲಾಗಿಲ್ಲ, ಬದಲಾಗಿ ಅವರು ಮನುಕುಲಕ್ಕೆ ಆದರ್ಶಪ್ರಾಯವಾಗಿದ್ದಾರೆ. ದೇಶದಲ್ಲಿ ಎಲ್ಲ ಧರ್ಮ, ಜಾತಿಯವರು ಐಕ್ಯತೆ, ಸಾಮರಸ್ಯದಿಂದ ಬದುಕಲು ಸಂವಿಧಾನದಲ್ಲಿ ಅವರು ಅಳವಡಿಸಿರುವ ಮೌಲ್ಯಗಳು ಕಾರಣವಾಗಿವೆ ಎಂದರು.

ದಲಿತ ಮುಖಂಡ ಕೆ.ಪುತ್ರೇಶ ಮಾತನಾಡಿ, ಪಟ್ಟಣದ ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಪ್ರತಿಮೆ, ದಶಕಗಳ ಕಾಲ ಜಾಲರಿಯಲ್ಲಿ ಇಟ್ಟಿದ್ದರು. ಅಂಬೇಡ್ಕರ್ ಪ್ರತಿಮೆಯನ್ನು ಬಂಧಮುಕ್ತಗೊಳಿಸಿ, ₹1 ಕೋಟಿ ವೆಚ್ಚದಲ್ಲಿ ಹೊಸ ಪ್ರತಿಮೆ ನಿರ್ಮಾಣಕ್ಕೆ ಯೋಜನೆ ರೂಪಿಸಿರುವ ಶಾಸಕರಿಗೆ ಸಮಾಜದ ಬೆಂಬಲ ಸದಾ ಇರುತ್ತದೆ ಎಂದರು.

ದಲಿತ ಮುಖಂಡ ಎಚ್.ಪೂಜಪ್ಪ, ಮಾಜಿ ಶಾಸಕ ನಂದಿಹಳ್ಳಿ ಹಾಲಪ್ಪ, ಸಮಾಜ ಕಲ್ಯಾಣಾಧಿಕಾರಿ ಆನಂದ ಡೊಳ್ಳಿನ, ಮುಖಂಡ ಕೆ.ಉಚ್ಚೆಂಗೆಪ್ಪ ಮಾತನಾಡಿದರು. ಉಪನ್ಯಾಸಕಿ ನಿರ್ಮಲ ಶಿವನಗುತ್ತಿ ಉಪನ್ಯಾಸ ನೀಡಿದರು.

ಪುರಸಭೆ ಅಧ್ಯಕ್ಷೆ ಗಂಟಿ ಜಮಾಲ್ ಬೀ, ತಹಸೀಲ್ದಾರ್ ಜಿ. ಸಂತೋಷಕುಮಾರ್, ತಾಪಂ ಇಒ ಎಂ. ಉಮೇಶ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗದ ಎಇಇ ಅಂಬೇಡ್ಕರ್ ಸನಗುಂದ, ಮುಖಂಡರಾದ ಎಂ.ಪರಮೇಶ್ವರಪ್ಪ, ಜೆ.ಶಿವರಾಜ, ಗುಡದಯ್ಯ, ಪಿ. ನಿಂಗಪ್ಪ, ಜೆ.ದುರುಗಮ್ಮ, ಪಿ.ವಿಜಯಕುಮಾರ್, ಶಿವಪುರ ಸುರೇಶ, ಶ್ರೀಧರನಾಯ್ಕ ಇತರರಿದ್ದರು.

ಎಚ್.ಚಂದ್ರಪ್ಪ, ಎಸ್.ನಿಂಗರಾಜ ಸಂಗಡಿಗರು ಕ್ರಾಂತಿಗೀತೆ ಹಾಡಿದರು.ಕಂಚಿನ ಪುತ್ಥಳಿ ಅನಾವರಣಗೊಳಿಸಲು ಯೋಜನೆ:

ಪಟ್ಟಣದ ಪೊಲೀಸ್‌ ಠಾಣೆಯ ಹತ್ತಿರದಲ್ಲಿರುವ ಡಾ. ಬಿ.ಆರ್‌. ಅಂಬೇಡ್ಕರ್ ಪ್ರತಿಮೆಯನ್ನು ಕಬ್ಬಿಣ ಜಾಲರಿ ಬಂಧ ಮುಕ್ತಗೊಳಿಸಿ, ಉತ್ತಮ ರೀತಿಯಲ್ಲಿ ಎತ್ತರದ ಕಂಚಿನ ಪುತ್ಥಳಿ ಅನಾವರಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು. ಪ್ರತಿಮೆ ಬಂಧಮುಕ್ತಗೊಳಿಸುವ ಸಂಕಲ್ಪದೊಂದಿಗೆ ನೀಲನಕ್ಷೆ ತಯಾರಿಸಿದ್ದೇನೆ ಎಂದರು.