ನಾಗರಿಕರಿಗೆ ಸಮಾನತೆ ಕಲ್ಪಿಸಿದ ಸಂವಿಧಾನ: ಸುಜು ತಿಮ್ಮಯ್ಯ

| Published : Nov 28 2024, 12:30 AM IST

ನಾಗರಿಕರಿಗೆ ಸಮಾನತೆ ಕಲ್ಪಿಸಿದ ಸಂವಿಧಾನ: ಸುಜು ತಿಮ್ಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಂವಿಧಾನ ಎಂದರೆ ಪ್ರಜಾಪ್ರಭುತ್ವ, ದೇಶದ ಆಡಳಿತದ ಮಾರ್ಗ ಸೂಚಿಯಾಗಿದ್ದು ಭಾರತದ ಸಂವಿಧಾನ ನಮಗೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾನತೆ ಕಲ್ಪಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ ಹೇಳಿದ್ದಾರೆ. ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 75ನೇ ಸಂವಿಧಾನ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಂವಿಧಾನ ಎಂದರೆ ಪ್ರಜಾಪ್ರಭುತ್ವ, ದೇಶದ ಆಡಳಿತದ ಮಾರ್ಗ ಸೂಚಿಯಾಗಿದ್ದು ಭಾರತದ ಸಂವಿಧಾನ ನಮಗೆ ಸಾಮಾಜಿಕವಾಗಿ ಶೈಕ್ಷಣಿಕವಾಗಿ, ಆರ್ಥಿಕವಾಗಿ ಸಮಾನತೆ ಕಲ್ಪಿಸಿದೆ ಎಂದು ಜಿಲ್ಲಾ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ಕೊಕ್ಕಲೆರ ಸುಜು ತಿಮ್ಮಯ್ಯ ಹೇಳಿದ್ದಾರೆ. ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ 75ನೇ ಸಂವಿಧಾನ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಂವಿಧಾನ ಸ್ವೀಕರಿಸಿದ ನ.26 ರಿಂದ ಸಂವಿಧಾನ ಜಾರಿಯಾದ ಜ.26 ರ ವರೆಗೆ ಸಾರ್ವಜನಿಕವಾಗಿ ಸಂವಿಧಾನದ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಕರೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಡಾ ಬಿ.ಆರ್ ಅಂಬೇಡ್ಕರ್ ಅವರು ಎರಡು ವರ್ಷ 11 ತಿಂಗಳು 17 ದಿನಗಳ ಕಾಲ ಅವಿರತ ಶ್ರಮವಹಿಸಿ ಸಂವಿಧಾನ ರಚಿಸಿದರು. ಸುಮಾರು 80 ಸಾವಿರ ಶಬ್ದಗಳನ್ನು ಒಳಗೊಂಡ 12 ಪರಿಚ್ಛೇದಗಳು,22 ಭಾಗಗಳು 395 ಅನುಚ್ಛೇದ ಗಳಿರುವ 476 ಪುಟಗಳಿರುವ ಸಂವಿಧಾನವನ್ನು 1949 ನ.26 ರಂದು ದೇಶಕ್ಕೆ ಸಮರ್ಪಿಸುವ ಮೂಲಕ ಭಾರತೀಯರು ಹೇಗೆ ಬದುಕಬೇಕು ಎಂಬುದನ್ನು ವಿವರಿಸಿದ್ದಾರೆ ಎಂದು ತಿಳಿಸಿದರು.

ಜಗತ್ತಿನ ದೊಡ್ಡಣ್ಣ ಎಂದು ಕರೆಯಲ್ಪಡುವ ಅಮೇರಿಕಾ ಸಂವಿಧಾನ ಜಾರಿಯಾದ 200 ವರ್ಷಗಳ ನಂತರ ಆ ದೇಶದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿತು. ಜಗತ್ತಿಗೇ ನಾಗಪಿಕತೆ ಕಲಿಸಿದವರು ಎನ್ನುವ ಇಂಗ್ಲೆಂಡ್ ದೇಶದಲ್ಲಿ ಸಂವಿಧಾನ ಜಾರಿಯಾದ 100 ವರ್ಷಗಳ ನಂತರ ಆ ದೇಶದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕನ್ನು ಕೊಡಲಾಯಿತು. ಆದರೆ ಭಾರತದ ಸಂವಿಧಾನ ಜಾರಿಯಾದ ದಿನವೇ ಭಾರತದಲ್ಲಿ ಮಹಿಳೆಯರಿಗೆ ಮತದಾನದ ಹಕ್ಕು ಸಿಕ್ಕಿದ್ದು ಈ ನಿಟ್ಟಿನಲ್ಲಿ ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಮತ್ತು ಉತ್ಕೃಷ್ಟ ಸಂವಿಧಾನ ನಮ್ಮ ಸಂವಿಧಾನ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್ ಮಾತನಾಡಿ ನಮ್ಮ ಸಂವಿಧಾನವು ಮಹಿಳೆಯರಿಗೆ ಎಲ್ಲಾ ಕ್ಷೇತ್ರದಲ್ಲಿ ಸಮಾನತೆ ನೀಡಿದೆ ಎಂದು ವಿವರಿಸಿದರು.

ಜಿಲ್ಲಾ ಕಾಂಗ್ರೆಸ್ ಹಿರಿಯ ಗೌರವ ಕಾರ್ಯದರ್ಶಿ ವಿ.ಪಿ.ಸುರೇಶ್, ಮಾಜಿ ಮೂಡಾ ಅಧ್ಯಕ್ಷ ಚುಮ್ಮಿ ದೇವಯ್ಯ, ಸೇವಾದಳ ಜಿಲ್ಲಾಧ್ಯಕ್ಷ ಕಾನೆ ಹಿತ್ಲು ಮೊಣ್ಣಪ್ಪ, ಸಾಮಾಜಿಕ ಜಾಲತಾಣದ ಜಿಲ್ಲಾ ಉಪಾಧ್ಯಕ್ಷ ನಿಶ್ಚಲ್ ದಂಬೆಕೋಡಿ , ಕಲೀಲ್ ಬಾಷ, ನಗರ ಸಭಾ ಸದಸ್ಯರಾದ ಮಂಡಿರ ಸದಾ ಮುದ್ದಪ್ಪ, ಯಾಕುಬ್, ಜಿ.ಸಿ.ಜಗದೀಶ್, ಮುದ್ದುರಾಜ್, ಮೂಡಾ ನಿರ್ದೇಶಕಿ ಮೀನಾಜ್ ಪ್ರವೀಣ್, ಪ್ರಮುಖರಾದ ಬೊಳ್ಳಿಯಂಡ ಗಣೇಶ್, ಮುಂಡಂಡ ಸುನೀಲ್ ನಂಜಪ್ಪ, ವಸಂತ್ ಭಟ್, ಪ್ರಕಾಶ್ ಆಚಾರ್ಯ, ಸ್ವರ್ಣಲತಾ

ಶಶಿ,ಪ್ರಮಾ ಲಿಂಗಪ್ಪ, ಲೀಲಾ ಶೇಷಮ್ಮ, ಕೆ.ಜಿ.ಪೀಟರ್, ರಾಜು, ರಿಯಾಜ್, ಸುಬ್ರಮಣಿ, ಮೋಹನ್ ಮೌರ್ಯ, ಮಹದೇವ್, ಸುರೇಶ್ ಕುಮಾರ್, ಸೈಮನ್, ಸದಾನಂದ ಬಂಗೇರ, ರಾಣಿ, ಉಷಾ ಸೇರಿದಂತೆ ಪ್ರಮುಖರು ಇದ್ದರು.