ಮಧುಗಿರಿ: ಸಂವಿಧಾನವು ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನತೆಯ ಭರವಸೆ ನೀಡಿದೆ‌ ಎಂದು ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದರು.

ಮಧುಗಿರಿ: ಸಂವಿಧಾನವು ಸಮಾಜದ ಎಲ್ಲ ವರ್ಗದ ಜನರಿಗೂ ಸಮಾನತೆಯ ಭರವಸೆ ನೀಡಿದೆ‌ ಎಂದು ಉಪವಿಭಾಗಾಧಿಕಾರಿ ಗೋಟೂರು ಶಿವಪ್ಪ ತಿಳಿಸಿದರು.

ಇಲ್ಲಿನ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ತಾಲೂಕು ಆಡಳಿತದಿಂದ ನಡೆದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದ ಅವರು, ಯಾರೂ ಯಾರಿಗಿಂತಲೂ ಕಡಿಮೆಯಿಲ್ಲ ಎಂಬ ಆತ್ಮಗೌರವದ ಬದುಕನ್ನು ಸಂವಿಧಾನ ಕಲ್ಪಿಸಿಕೊಟ್ಟಿದೆ. ಪ್ರತಿಯೊಬ್ಬರೂ ಸಂವಿಧಾನದ ಪೀಠಿಕೆಯನ್ನು ಓದಿ ಅದರ ಆಶಯಗಳನ್ನು ಅರ್ಥಮಾಡಿಕೊಳ್ಳಬೇಕು. ಸಂವಿಧಾನದ ಬಗ್ಗೆ ಹೆಮ್ಮೆ ಮತ್ತು ಗೌರವ ಹೊಂದಬೇಕು ಎಂದು ತಿಳಿಸಿದರು.

ತಹಶೀಲ್ದಾರ್ ಎಸ್.ಎ. ನಂದಿನಿ ಮಾತನಾಡಿ, ಸಂವಿಧಾನವು ಜೀವಂತ ಗ್ರಂಥವಾಗಿದ್ದು, ಆಡಳಿತ ವ್ಯವಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಮಾರ್ಗದರ್ಶನ ನೀಡುತ್ತದೆ ಎಂದರು.

ಉಪನ್ಯಾಸಕ ನಾಗರಾಜು, ವಕೀಲ ಐ.ಡಿ. ಹಳ್ಳಿಯ ಬಿ. ನರಸಿಂಹಮೂರ್ತಿ, ತಾ.ಪಂ.ಇಒ ಉತ್ತಮ್ ,ಜಗದೀಶ್ , ಶಶಿಕುಮಾರ್, ಮಂಜುನಾಥ್ , ದಿನೇಶ್ , ದೊಡ್ಡೇರಿ ಕಣಿಮಯ್ಯ , ಚಿಕ್ಕಮ್ಮ , ಮಹರಾಜು ,ಎಸ್.ಕೆ.ರಂಗನಾಥ್ , ಸಂಜೀವಯ್ಯ ಜಲಾಲ್ ಭಾಷಾ ಇದ್ದರು.