ದೇಶದ ಅಭಿವೃದ್ಧಿಗೆ ಪ್ರಜೆಗಳ ಕೊಡುಗೆ ಮುಖ್ಯ

| Published : Aug 17 2025, 01:42 AM IST

ಸಾರಾಂಶ

ಚನ್ನಪಟ್ಟಣ: ದೇಶ ಮತ್ತು ದೇಶಾಭಿಮಾನ ಎದೆಯೊಳಗಿದ್ದಾಗ ಮಾತ್ರ ಸ್ವಾತಂತ್ರ್ಯ ಎಂಬುದು ಪರಿಪೂರ್ಣ ಅರ್ಥ ಪಡೆಯುತ್ತದೆ. ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಪಾಲುದಾರಿಕೆಯೂ ಮುಖ್ಯ ಎಂದು ಚನ್ನಪಟ್ಟಣ ಜೆಎಂಎಫ್ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಯೋಗೇಶ್ ತಿಳಿಸಿದರು.

ಚನ್ನಪಟ್ಟಣ: ದೇಶ ಮತ್ತು ದೇಶಾಭಿಮಾನ ಎದೆಯೊಳಗಿದ್ದಾಗ ಮಾತ್ರ ಸ್ವಾತಂತ್ರ್ಯ ಎಂಬುದು ಪರಿಪೂರ್ಣ ಅರ್ಥ ಪಡೆಯುತ್ತದೆ. ದೇಶದ ಸರ್ವತೋಮುಖ ಬೆಳವಣಿಗೆಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯ ಪಾಲುದಾರಿಕೆಯೂ ಮುಖ್ಯ ಎಂದು ಚನ್ನಪಟ್ಟಣ ಜೆಎಂಎಫ್ ನ್ಯಾಯಾಲಯದ ಪ್ರಧಾನ ಸಿವಿಲ್ ನ್ಯಾಯಾಧೀಶ ಯೋಗೇಶ್ ತಿಳಿಸಿದರು.

ಪಟ್ಟಣದ ಕೋರ್ಟ್ ಮುಂಭಾಗದಲ್ಲಿ ರೋಟರಿ ಟಾಯ್ಸ್ ಸಿಟಿ ೭೯ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಆಶಾ ಕಾರ್ಯಕರ್ತೆಯರೊಂದಿಗೆ ಹಮ್ಮಿಕೊಂಡಿದ್ದ ೧ ಕಿ.ಮೀ. ಉದ್ದದ ತಿರಂಗಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾತಂತ್ರ್ಯ ದಿನಾಚರಣೆ ಏಕತೆ ಮತ್ತು ಸಹೋದರತ್ವದ ಸಂದೇಶ ಸಾರುತ್ತದೆ. ನಾವೆಲ್ಲರೂ ಒಟ್ಟಾಗಿ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದರು.

ನ್ಯಾ.ಸುರೇಶ್ ಮಾತನಾಡಿ, ಸ್ವಾತಂತ್ರ್ಯ ದಿನಾಚರಣೆ ಭಾರತೀಯರಿಗೆ ಮಹತ್ವದ ಹಬ್ಬ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಎಲ್ಲ ಮಹನೀಯರನ್ನು ಸ್ಮರಿಸಬೇಕು. ಅವರ ತ್ಯಾಗವನ್ನು ಗೌರವಿಸಬೇಕು. ನಾವು ನಮ್ಮ ದೇಶದ ಏಕತೆ ಮತ್ತು ಅಭಿವೃದ್ಧಿಗೆ ಬದ್ಧರಾಗಿರಬೇಕು ಎಂದರು.

ರೋಟರಿ ಟಾಯ್ಸ್ ಸಿಟಿ ಅಧ್ಯಕ್ಷ ರೋ.ಬಿ.ಎಂ.ನಾಗೇಶ್ ಮಾತನಾಡಿ, ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡವರಲ್ಲಿ ಕೆಲ ಮಹನೀಯರ ಇತಿಹಾಸ ಕುರಿತು ಜನರಿಗೆ ತಿಳಿಸುವ ಉದ್ದೇಶದಿಂದ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.

ಒಂದು ಕಿಲೋ ಮೀಟರ್ ಉದ್ದದ ತ್ರಿವರ್ಣಧ್ವಜದ ಮೆರವಣಿಗೆ ಕೋರ್ಟ್ ಆವರಣದಿಂದ ಪ್ರಾರಂಭಗೊಂಡು, ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಾಗಿ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ, ಸಾತನೂರು ವೃತ್ತ, ಡಿ.ಟಿ.ರಾಮು ವೃತ್ತ, ಎಂ.ಜಿ.ರಸ್ತೆಯ ಮೂಲಕ ಸಾಗಿ ಕೊಲ್ಲಾಪುರದಮ್ಮ ದೇವಸ್ಥಾನದ ಆವರಣದಲ್ಲಿ ಸಮಾಪ್ತಿಗೊಂಡಿತು. ಕಾರ್ಯದರ್ಶಿ ಸಂತೋಷ್ ಪಾಪಣ್ಣ, ವಕೀಲರ ಸಂಘದ ಅಧ್ಯಕ್ಷ ಟಿ.ವಿ.ಗಿರೀಶ್, ಬಮೂಲ್ ನಿರ್ದೇಶಕ ಎಸ್.ಲಿಂಗೇಶಕುಮಾರ್, ಲಯನ್ಸ್ ಸಂಸ್ಥೆಯ ವೆಂಕಟಸುಬ್ಬಾರೆಡ್ಡಿ, ರೋಟರಿಯ ಬೈ ಶ್ರೀನಿವಾಸ್, ಮಾಸ್ತಿಗೌಡ, ರಾಜೇಶ್, ಐಟಿಸಿ ರಘು, ಶೇಖರಲಾಡ್, ರಾಜೇಶ್ ಅಪ್ಪಗೆರೆ, ಮಹೇಶ್, ಮೋಹನಕುಮಾರ್, ಶ್ರೀನಿವಾಸ್, ವಿಜಯ್, ಸುಕೃತ್ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.ಪೊಟೋ೧೫ಸಿಪಿಟಿ೩:

೭೯ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರೋಟರಿ ಟಾಯ್ಸ್ ಸಿಟಿಯಿಂದ ಒಂದು ಕಿ.ಮಿ.ಉದ್ಧದ್ದ ತಿರಂಗಯಾತ್ರೆ ನಡೆಸಲಾಯಿತು.