ತರೀಕೆರೆಭಾರತ ದೇಶದ ಅಭ್ಯುದಯಕ್ಕೆ ದೇಶವಾಶಿಗಳ ಕೊಡುಗೆ ಮತ್ತು ಸಹಕಾರ ಅತಿ ಮುಖ್ಯ ಎಂದು ಕನ್ನಡಶ್ರೀ ಬಿ.ಎಸ್.ಭಗವಾನ್ ಹೇಳಿದ್ದಾರೆ.
-ಮಾಜಿ ಸೈನಿಕರಿಂದ ಸ್ವದೇಶಿ ಬಳಸಿ-ದೇಶ ಬೆಳೆಸಿ ಜಾಗೃತಿ ಮೂಡಿಸಲು ಸೈಕಲ್ ಜಾಥಾಗೆ ಅದ್ಧೂರಿ ಸ್ವಾಗತ
ಕನ್ನಡಪ್ರಭ ವಾರ್ತೆ, ತರೀಕೆರೆಭಾರತ ದೇಶದ ಅಭ್ಯುದಯಕ್ಕೆ ದೇಶವಾಶಿಗಳ ಕೊಡುಗೆ ಮತ್ತು ಸಹಕಾರ ಅತಿ ಮುಖ್ಯ ಎಂದು ಕನ್ನಡಶ್ರೀ ಬಿ.ಎಸ್.ಭಗವಾನ್ ಹೇಳಿದ್ದಾರೆ.
ಬೆಂಗಳೂರು ಪರಿಪೂರ್ಣ ಸನಾತನ ಚಾರಿಟಬಲ್ ಟ್ರಸ್ಟ್ ನಿಂದ ರಾಜ್ಯದಾದ್ಯಂತ ಮಾಜಿ ಸೈನಿಕರಿಂದ ನಡೆದ ಸ್ವದೇಶಿ ಬಳಸಿ-ದೇಶ ಬೆಳೆಸಿ ಜಾಗೃತಿ ಮೂಡಿಸಲು ತರೀಕೆರೆ ಪಟ್ಟಣಕ್ಕೆ ಆಗಮಿಸಿದ ಸೈಕಲ್ ಜಾಥಾಕ್ಕೆ ಅದ್ಧೂರಿ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.ಭಾರತೀಯ ರಕ್ಷಣಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ವಿವಿಧ ಅಧಿಕಾರಿಗಳಿಂದ ದೇಶ ಸೇವೆಗಾಗಿ ಪರಿಪೂರ್ಣ ಸನಾತನ ಚಾರಿಟಬಲ್ ಟ್ರಸ್ಟ್ ರಚಿಸಿಕೊಂಡಿದ್ದು ಕನ್ನಡ ನಾಡಿನಾದ್ಯಂತ ಬ್ರಿಗೇಡಿಯರ್ ರವಿ ಮುನಿಸ್ವಾಮಿ ನೇತೃತ್ವದಲ್ಲಿ ಸೈಕಲ್ ನಲ್ಲಿ ಸಂಚರಿಸುವ ಮೂಲಕ ಸ್ವದೇಶಿ ಉತ್ಪನ್ನಗಳ ಬಳಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಹಾಗೂ ದೇಶಾಭಿಮಾನ, ತಾಯ್ನೆಲದ ಭಾಷಾಭಿಮಾನ ಮತ್ತು ಐಕ್ಯತೆ ಮೂಡಿಸಲು ಸೈಕಲ್ ಮೇಲೆ ಜಾಥ ಹೊರಟಿರುವುದು ಎಲ್ಲರಲ್ಲೂ ಅಭಿಮಾನ ಮೂಡಿಸುತ್ತದೆ. ಚಳಿ, ಗಾಳಿ, ಮಳೆ ಲೆಕ್ಕಿಸದೆ ದೇಶ ರಕ್ಷಣೆಯಲ್ಲಿ ತೊಡುಗಿರುವ ಯೋಧರ ಪರಿಚಯವನ್ನು ಇಂದಿನ ಮಕ್ಕಳಿಗೆ ತಿಳಿಸಬೇಕು. ಮಕ್ಕಳಲ್ಲಿ ದೇಶಾಭಿಮಾನ ಬೆಳೆಸಬೇಕು ಎಂದು ಹೇಳಿದರು.ಜನಚಿಂತನ ಸಂಸ್ಥೆ ಅದ್ಯಕ್ಷ ಎನ್.ವೀರಭದ್ರಪ್ಪ ಮಾತನಾಡಿ ಅನ್ನ ಕೊಡುವ ರೈತರು, ದೇಶ ಹಾಗೂ ಜನರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸೈನಿಕರ ಪಾತ್ರ ಅತ್ಯಂತ ಹಿರಿದಾಗಿದ್ದು ಹೆಮ್ಮೆ ಪಡುವಂತಾಗಿದೆ. ಸೇನಾ ನಿವೃತ್ತಿ ನಂತರವು ದೇಶದ ಬಗ್ಗೆ ಅತ್ಯಂತ ಪ್ರೀತಿ ಕಾಳಜಿ ಹೊಂದಿದ್ದು, ದೇಶದಲ್ಲಿ ಉತ್ಪನ್ನವಾಗುವ ಪದಾರ್ಥ ಬಳಸುವ ಮುಖೇನ ದುಡಿಯುವ ಕೈಗಳಿಗೆ ಉದ್ಯೋಗ ದೊರೆತು, ಮರುಬಳಕೆಗೆ ಅನುಕೂಲವಾಗುತ್ತದೆ ಎಂದ ಅವರು ಮಾಜಿ ಸೈನಿಕರ ದೇಶ ಸೇವೆಯನ್ನು ಪ್ರಶಂಸಿಸಿ ಜಾಥಾ ಯಶಸ್ವಿಯಾಗಲಿ ಎಂದು ಶುಭ ಕೋರಿದರು.ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ತರೀಕೆರೆ ಎನ್.ವೆಂಕಟೇಶ್ ಮಾತನಾಡಿ ಸ್ವದೇಶಿ ಬಳಸಿ ದೇಶ ಬೆಳಸಿ ಎಂಬ ಸೈಕಲ ಜಾಥಾದ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ.ನಾವು ಉತ್ಪನ್ನ ಮಾಡಿದ ವಸ್ತು ಗಳನ್ನು ನಾವು ಖರೀದಿಸಿ ಬಳಸಿದರೆ ನಮ್ಮ ಸಂಪತ್ತು ನಮ್ಮಲ್ಲೇ ಉಳಿಯುತ್ತದೆ. ಎಲ್ಲ ಮಾಜಿ ಸೈನಿಕರಿಗೆ ಕೃತಜ್ಞತೆ ಎಂದು ಹೇಳಿದರು.ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಿಲ್ಟ್ರಿ ಶ್ರೀನಿವಾಸ್ ಮಾತನಾಡಿ ದೇಶ ಎಂಬುದು ಸೈನಿಕರ ಪಾಲಿಗೆ ದೈವಸಮಾನ, ನಿಷ್ಠೆ, ಪ್ರಾಮಾಣಿಕತೆ ಸಮರ್ಪಣಾ ಭಾವದಿಂದ ಧೈರ್ಯಸ್ಥೈರ್ಯಗಳಿಂದ ಎರಗಬಹುದಾದ ಎಲ್ಲ ಬಗೆಯ ಆತಂಕಗಳನ್ನು ನಿಗ್ರಹಿಸುವ ಸಂಕಲ್ಪದಿಂದ ಸೇವೆ ಸಲ್ಲಿಸಿರುತ್ತಾರೆ. ಇದೇ ದೇಶಸೇವೆ ಮುಂದುವರಿಸಿ ಇಂದು ಸ್ವದೇಶಿ ಬಳಸಿ- ದೇಶ ಬೆಳೆಸಿ ಅರಿವು ಮೂಡಿಸುವ ಸೈಕಲ್ ಜಾಥಾ ಕೈಗೊಂಡಿರುವುದು ಶ್ಲಾಘನೀಯ. ಸೈಕಲ್ ಜಾಥಾ ಯಶಸ್ವಿಯಾಗಲಿ ಎಂದು ಶುಭ ಕೋರಿದರು.ಬ್ರಿಗೇಡಿಯರ್ ರವಿ ಮುನಿಸ್ವಾಮಿ, ಕರ್ನಲ್ ಕಂದಸ್ವಾಮಿ ಮತ್ತಿತರರು ಮಾತನಾಡಿದರು. ಸೈಕಲ್ ಜಾಥಾದಲ್ಲಿ ಪಾಲ್ಗೊಂಡಿದ್ದ ಮಾಜಿ ಸೈನಿಕರನ್ನು ಗೌರವಿಸಿ ಸನ್ಮಾನಿಸಲಾಯಿತು. ಮಾಜಿ ಸೈನಿಕರ ಸಂಘದ ಪದಾಧಿಕಾರಿಳು ಸದಸ್ಯರು, ಅರಿವು ವೇದಿಕೆ ಅಧ್ಯಕ್ಷ ಕೆ.ಎಸ್.ಶಿವಣ್ಣ ಮತ್ತಿತರರು ಭಾಗವಹಿಸಿದ್ದರು.
-31ಕೆಟಿಆರ್.ಕೆ.4ಃ ತರೀಕೆರೆ ಪಟ್ಟಣಕ್ಕೆ ಆಗಮಿಸಿದ ಮಾಜಿ ಸೈನಿಕರ ಸೈಕಲ್ ಜಾಥಾಕ್ಕೆ ಅದ್ಧೂರಿ ಸ್ವಾಗತ ಕೋರಲಾಯಿತು.