ದೇಶದ ಅಭಿವೃದ್ಧಿಗೆ ಎಂಜಿನಿಯರ್‌ಗಳ ಕೊಡುಗೆ ಅಪಾರ

| Published : Sep 21 2024, 02:05 AM IST

ಸಾರಾಂಶ

ಬೀದರ್‌ನ ಐ.ಎಂ.ಎ.ಹಾಲ್‌ನಲ್ಲಿ ನಡೆದ ಎಂಜಿನಿಯರ್‌ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಎಂಜಿನಿಯರ್‌ಗಳನ್ನು ಸನ್ಮಾನಿಸಲಾಯಿತು.

ಕನ್ನಡಪ್ರಭ ವಾರ್ತೆ ಬೀದರ್

ದೇಶದ ಅಭಿವೃದ್ಧಿಗೆ ಎಂಜಿನಿಯರ್‌ಗಳ ಕೊಡುಗೆ ಅಪಾರ ಎಂದು ರೋಟರಿ ಕ್ಲಬ್ ಬೀದರ್ ಅಧ್ಯಕ್ಷ ಸೋಮಶೇಖರ ಬಿ.ಪಾಟೀಲ ನುಡಿದರು.

ರೋಟರಿ ಕ್ಲಬ್ ಬೀದರ್ ವತಿಯಿಂದ ನಗರದ ಐ.ಎಂ.ಎ. ಹಾಲ್‌ನಲ್ಲಿ ಬುಧವಾರ ನಡೆದ ಎಂಜಿನಿಯರ್‌ಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜನರ ಜೀವನ ಮಟ್ಟ ಸುಧಾರಣೆಯಲ್ಲಿ ಎಂಜಿನಿಯರ್‌ಗಳ ಜ್ಞಾನ ಹಾಗೂ ಕೌಶಲದ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎಂಜಿನಿಯರ್‌ಗಳಾದ ಸುನೀಲಕುಮಾರ ಪ್ರಭಾ, ಹಾವಶೆಟ್ಟಿ ಪಾಟೀಲ, ಶಿವಶಂಕರ ಕಾಮಶೆಟ್ಟಿ, ರವೀಂದ್ರ ಮೂಲಗೆ, ರವಿಕಿರಣ ಪಬ್ಬ, ಮಚ್ಚೇಂದ್ರನಾಥ, ನಾಗಪ್ಪ ಪಾಟೀಲ, ಅಶೋಕ ವಂಗಪಲ್ಲಿ ಅವರನ್ನು ಸನ್ಮಾನಿಸಲಾಯಿತು.

ರೋಟೆರಿಯನ್ಸ್‌ಗಳಾದ ದತ್ತಾತ್ರಿ ಪಾಟೀಲ, ಭಗವಂತಪ್ಪ, ಅನಿಲ್ ಮಸೂದಿ, ಅನಿಲಕುಮಾರ ಬಿರಾದಾರ, ಸಂಗಮೇಶ ಗಾದಗಿ, ದಾದಾರಾವ್ ಕೋಳೆಕರ್, ಸುಧಾಕರ ಔರಾದ್ಕ ರ್, ಅಭಿನಯ ಗಾದಾ, ಡಾ.ವಿನೋದ ಸಾವಳಗಿ ಮತ್ತಿತರರು ಇದ್ದರು.

ಡಾ.ಸುರೇಶ ಪಾಟೀಲ ನಿರೂಪಿಸಿದರು. ಕ್ಲಬ್ ಕಾರ್ಯದರ್ಶಿ ಕೃಪಾಸಿಂಧು ಪಾಟೀಲ ವಂದಿಸಿದರು.