ಕನ್ನಡಪ್ರಭ ವಾರ್ತೆ ಜಮಖಂಡಿ ದೇಶದ ಪ್ರಗತಿ ಕೇವಲ ಸರ್ಕಾರದಿಂದ ಮಾತ್ರವೇ ಸಾಧ್ಯವಿಲ್ಲ. ದೇಶದಲ್ಲಿರುವ ಸೈನಿಕರು, ರೈತರು, ಶಿಕ್ಷಕರು, ವಿವಿಧ ವಲಯಗಳ ಕಾರ್ಮಿಕರು, ವಿಜ್ಞಾನಿಗಳು, ವಿವಿಧ ವೈದ್ಯರು ಮತ್ತು ವಿವಿಧ ಕ್ಷೇತ್ರಗಳಲ್ಲಿಯ ಉದ್ಯಮಿಗಳ ಶ್ರಮ, ಸಾಧನೆ ಮುಖ್ಯವಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಇವರೆಲ್ಲರ ಪಾತ್ರ ಬಹಳ ದೊಡ್ಡದಾಗಿದೆ ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ.ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.
ಕನ್ನಡಪ್ರಭ ವಾರ್ತೆ ಜಮಖಂಡಿ
ದೇಶದ ಪ್ರಗತಿ ಕೇವಲ ಸರ್ಕಾರದಿಂದ ಮಾತ್ರವೇ ಸಾಧ್ಯವಿಲ್ಲ. ದೇಶದಲ್ಲಿರುವ ಸೈನಿಕರು, ರೈತರು, ಶಿಕ್ಷಕರು, ವಿವಿಧ ವಲಯಗಳ ಕಾರ್ಮಿಕರು, ವಿಜ್ಞಾನಿಗಳು, ವಿವಿಧ ವೈದ್ಯರು ಮತ್ತು ವಿವಿಧ ಕ್ಷೇತ್ರಗಳಲ್ಲಿಯ ಉದ್ಯಮಿಗಳ ಶ್ರಮ, ಸಾಧನೆ ಮುಖ್ಯವಾಗಿದೆ. ರಾಷ್ಟ್ರ ನಿರ್ಮಾಣದಲ್ಲಿ ಇವರೆಲ್ಲರ ಪಾತ್ರ ಬಹಳ ದೊಡ್ಡದಾಗಿದ್ದು, ಅದರಲ್ಲಿ ವಿಶೇಷವಾಗಿ ಯೋಧರ ಮತ್ತು ರೈತರ ಕೊಡುಗೆ ಅಮೂಲ್ಯವಾಗಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಪೀಠದ ಡಾ.ವೀರ ಸೋಮೇಶ್ವರ ಜಗದ್ಗುರುಗಳು ಅಭಿಪ್ರಾಯಪಟ್ಟರು.ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಐದನೇ ದಿನದ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಮನುಷ್ಯ ಜೀವನದಲ್ಲಿ ದೊಡ್ಡ ಸ್ಥಾನವನ್ನು ಗಳಿಸುವುದು ಉತ್ತಮವಾದ ಸಂಗತಿ. ಆದರೆ, ಆ ಸ್ಥಾನವನ್ನು ತಲುಪುವಾಗ ಮಾನವೀಯತೆಯನ್ನು ಕಳೆದುಕೊಳ್ಳಬಾರದು. ಸಾಧನೆ ಎಂದರೆ ಕೇವಲ ಹಣ ಸಂಪಾದಿಸುವುದಲ್ಲ, ನಮ್ಮ ಗುರಿ ನಿರ್ಧರಿಸಿ ಶಿಸ್ತು, ಜ್ಞಾನ ಆತ್ಮವಿಶ್ವಾಸದ ಮೂಲಕ ಅದನ್ನು ಸಾಧಿಸುವುದೇ ನಿಜವಾದ ಸಾಧನೆ. ದೇಶದ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ಸೈನಿಕರ ಸೇವೆ ಎಂದಿಗೂ ಮರೆಯಲಾಗದು ಎಂದು ಸೈನಿಕರ ಸೇವೆಯನ್ನು ಸ್ಮರಿಸಿದರು.
ಪ್ರಶಸ್ತಿ: ಶಿವಮೊಗ್ಗ ಆಸರೆ ಟ್ರಸ್ಟ್ ಅಧ್ಯಕ್ಷ ಮತ್ತು ಡಿಟೆಕ್ಟಿವ್ ಮುಖ್ಯ ಸಂಪಾದಕ ಕೆ.ಎಂ.ಸತೀಶಗೌಡರ ಶ್ರಮ ಸಾಧನೆಗೆ ಸಾಧನ ಸಿರಿ ಪ್ರಶಸ್ತಿ ಪ್ರದಾನ ಮಾಡಿ ರಂಭಾಪುರಿ ಜಗದ್ಗುರುಗಳು ಶುಭ ಹಾರೈಸಿದರು. ಸಿದ್ಧರಬೆಟ್ಟ ಕ್ಷೇತ್ರದ ವೀರಭದ್ರ ಶಿವಾಚಾರ್ಯರು ಪ್ರಶಸ್ತಿ ವಾಚನ ಮಾಡಿದರು. ಶಾಸಕ ಜಗದೀಶ ಗುಡಗುಂಟಿ ಹಾಗೂ ಮುಖ್ಯ ಅತಿಥಿಗಳಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಮುಗುಗೇಶ ನಿರಾಣಿ, ಮಾಜಿ ಶಾಸಕರಾದ ಆನಂದ ನ್ಯಾಮಗೌಡ, ಮಲ್ಲಿಕಾರ್ಜುನ ಅಕ್ಕಿ ರಂಭಾಪುರಿ ಜಗದ್ಗುರುಗಳ ಆಶೀರ್ವಾದ ಪಡೆದರು.ನಜರ್ ಸಮರ್ಪಣೆ: ಸಮಾರಂಭದ ಕೊನೆಯ ಹಂತದಲ್ಲಿ ಶ್ರೀ ಶಿವಾಚಾರ್ಯರಿಂದ ಸಿಬ್ಬಂದಿ ವರ್ಗದವರಿಂದ ಮತ್ತು ಧರ್ಮಾಭಿಮಾನಿಗಳಿಂದ ಆಕರ್ಷಕ ನಜರ್(ಗೌರವ) ಸಮರ್ಪಣೆ ಜರುಗಿತು. ಮಳಲಿ ಸಂಸ್ಥಾನ ಮಠದ ಡಾ.ನಾಗಭೂಷಣ ಶಿವಾಚಾರ್ಯ ಸ್ವಾಮಿಗಳು ನಜರ್ ಕಾರ್ಯಕ್ರಮವನ್ನು ನಿರೂಪಿಸಿದರು.