ವೀರಶೈವ ಸಮಾಜದ ಸಂಘಟನೆಗೆ ದೇಶದ ಮಠಗಳ ಹಾಗೂ ಮಠಾಧೀಶರ ಕೊಡುಗೆ ಅಪಾರ, ಸ್ಮರಣೀಯ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಸಮಿತಿ ಉಪಾಧ್ಯಕ್ಷ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.

ಕನ್ನಡಪ್ರಭ ವಾರ್ತೆ ದೇವದುರ್ಗ

ವೀರಶೈವ ಸಮಾಜದ ಸಂಘಟನೆಗೆ ದೇಶದ ಮಠಗಳ ಹಾಗೂ ಮಠಾಧೀಶರ ಕೊಡುಗೆ ಅಪಾರ, ಸ್ಮರಣೀಯ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಜ್ಯ ಸಮಿತಿ ಉಪಾಧ್ಯಕ್ಷ, ಮಾಜಿ ಸಚಿವ ಅಮರೇಗೌಡ ಪಾಟೀಲ್ ಬಯ್ಯಾಪೂರ ಹೇಳಿದರು.

ಪಟ್ಟಣದ ಬಿಹೆಚ್ ಕಲ್ಯಾಣ ಮಂಟಪದಲ್ಲಿ ಮಹಾಸಭಾ ಜಿಲ್ಲಾ ಘಟಕದಿಂದ ಆಯೋಜಿಸಿದ್ದ ತ್ರೈಮಾಸಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸರ್ವ ಪಾಲು, ಸಮ ಬಾಳು, ಸಮಾನತೆ ಹಾಗೂ ಧಾರ್ಮಿಕ ಜಾಗೃತಿ ಉದ್ದೇಶಗಳಿಂದ ರಚನೆಗೊಂಡಿರುವ ಸಂಘಟನೆಯಾಗಿದ್ದು, ಸಮಾಜದಲ್ಲಿರುವ ಒಳಪಂಗಡಗಳ ಸಹಕಾರದಿಂದ ಮಹಾಸಭಾ ಒಗ್ಗಾಟಬೇಕಾಗಿದೆ. ಸದಸ್ಯರ ಸಂಖ್ಯೆ ಹೆಚ್ಚಿಸುವಲ್ಲಿ ಪ್ರಯತ್ನಗಳಾಗಬೇಕಾಗಿದೆ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿರ್ಜಾಪೂರ ಪ್ರಸ್ತಾವನೆಗೈದರು. ನಿಲೋಗಲ್ ಶ್ರೀ ಮಠಧ ಡಾ.ಪಂಚಾಕ್ಷರಿ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರ ಪಾಟೀಲ್ ಮಿಯ್ಯಾಪೂರ ಮಾತನಾಡಿದರು.

ಮಹಾಸಭೆ ಜಿಲ್ಲಾ ಘಟಕದ ಪದಾಧಿಕಾರಿಗಳಾದ ನೀಲಕಂಠೇಶ್ವರ ಸ್ವಾಮಿ ,ಸುಲೋಚನಾ ಆಲ್ಕೋಡ್, ಶಿವಯೋಗಿ ಪಾಟೀಲ್ ಜೋಳದಹೆಡ್ಗಿ, ಬಸವರಾಜಪ್ಪ,ಭಾನುಪ್ರಕಾಶ ಖೇಣೇದ್, ವೆಂಕಟರಾಯ ಗೌಡ ಬೆನಕನ್, ಡಾ.ಬಸವರಾಜ ಎಂ.ಪಾಟೀಲ್, ಬಂಡಿ ಲಿಂಗನಗೌಡ, ಶರಣಮ್ಮ ಕಾಮರೆಡ್ಡಿ, ಸೋಮನಾಥರೆಡ್ಡಿ ಪಾಟೀಲ್ ಗಣದಿನ್ನಿ, ಬಸವರಾಜ ಚಿತ್ರಾಲ, ನಿರ್ಮಲಾ ಬೆಣ್ಣಿ, ವೀರನಗೌಡ ಪುರತಿಪ್ಲಿ, ದೇವಿಂದ್ರಪ್ಪ ಗೌಡ, ಕಲ್ಲೂರ ಭೀಮರೆಡ್ಡಿ ಹಾಗೂ ತಾಲೂಕು ಘಟಕ ಅಧ್ಯಕ್ಷ ಶಿಖರೇಶ್ವರ ಪಾಟೀಲ್ ಜೋಳದಹೆಡ್ಗಿ ಉಪಸ್ಥಿತರಿದ್ದರು.

ಜಿಲ್ಲಾ ಮಹಿಳಾ ಘಟಕ, ಯುವ ಘಟಕ ಹಾಗೂ ಅರಕೇರಾ ತಾಲೂಕು ಘಟಕದ ಪದಾಧಿಕಾರಿಗಳಿಗೆ ಸನ್ಮಾನಿಸಿ, ನೇಮಕಾತಿ ಆದೇಶ ಪತ್ರಗಳನ್ನು ನೀಡಲಾಯಿತು. ನಿವೃತ್ತ ಪ್ರಾಧ್ಯಾಪಕ ಡಾ.ಪರಮೇಶ್ವರ ಸ್ವಾಮಿ ಸಾಲಿಮಠ, ಚನ್ನಬಸವ ಮಠದ ಗಬ್ಬೂರ ನಿರೂಪಿಸಿದರು.

----ಫೋಟೊ---

04ಕೆಪಿಡಿವಿಡಿ02:

ಪಟ್ಟಣದ ಬಿಎಚ್ ಕಲ್ಯಾಣ ಮಂಟಪದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ತ್ರೈಮಾಸಿಕ ಸಭೆ ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.