ಸಾರಾಂಶ
ಯಲಬುರ್ಗಾ ಕಾಂಗ್ರೆಸ್ ಕಚೇರಿಯಲ್ಲಿ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರ ಜಯಂತಿ ಆಚರಿಸಲಾಯಿತು.
ಯಲಬುರ್ಗಾ: ದೇಶದಲ್ಲಿ ಶಿಕ್ಷಣ ಕಾಂತ್ರಿ ಮೂಡಿಸಿದ ಸಾವಿತ್ರಿಬಾಯಿ ಫುಲೆ ಅವರ ಕೊಡುಗೆ ಅಪಾರವಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಕೆರಿಬಸಪ್ಪ ನಿಡಗುಂದಿ ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ದೇಶದ ಮೊದಲ ಶಿಕ್ಷಕಿ ಸಾವಿತ್ರಿಬಾಯಿ ಫುಲೆಯವರ ಜಯಂತಿ ನಿಮಿತ್ತ ಶುಕ್ರವಾರ ಅವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು.ದೇಶದ ಮೊದಲ ಶಿಕ್ಷಕಿಯಾಗಿ ಅಕ್ಷರದ ಅರಿವನ್ನು ಮೂಡಿಸಿದ ಮಹಾನ್ ತಾಯಿ. ಅವರ ತತ್ವಾದರ್ಶವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಕಾರ್ಯಾಧ್ಯಕ್ಷ ಡಾ. ಶಿವನಗೌಡ ದಾನರೆಡ್ಡಿ ಹಾಗೂ ವಕ್ತಾರ ಆನಂದ ಉಳ್ಳಾಗಡ್ಡಿ ಮಾತನಾಡಿ, ದೇಶದ ಪ್ರತಿಯೊಬ್ಬರಿಗೂ ಅಕ್ಷರ ಕಲಿಸುವ ಕೆಲಸ ಮಾಡುವ ಮೂಲಕ ಶಿಕ್ಷಣದ ಮಹತ್ವವನ್ನು ಸಾರಿದ್ದಾರೆ. ಇಂತಹ ಶ್ರೇಷ್ಠ ಚಿಂತನೆಗಳ ವಿಚಾರಗಳನ್ನು ನಾವೆಲ್ಲರೂ ಪಾಲಿಸಬೇಕು ಎಂದು ಹೇಳಿದರು.ಈ ವೇಳೆಯಲ್ಲಿ ಕಾಂಗ್ರೆಸ್ ಮುಖಂಡರಾದ ಶರಣಪ್ಪ ಗಾಂಜಿ, ಈರಪ್ಪ ಕುಡಗುಂಟಿ, ಮಲ್ಲಿಕಾರ್ಜುನ ಜಕ್ಕಲಿ, ಹಂಪಯ್ಯಸ್ವಾಮಿ ಹಿರೇಮಠ, ಸಿದ್ದು ಪೋಲೀಸ್‌ಪಾಟೀಲ, ನಾಗರಾಜ ತಲ್ಲೂರು, ಸುರೇಶ್ ದಾನಕಾಯಿ, ಪುನೀತ್ ಕೊಪ್ಪಳ, ಸಂಗಮೇಶ ಚಿಕ್ಕಮ್ಯಾಗೇರಿ ಇದ್ದರು. ದೇಶದ ಪ್ರಥಮ ಶಿಕ್ಷಕಿ ಜನ್ಮ ದಿನಾಚರಣೆ
ಕಾರಟಗಿ: ಭಾರತ ದೇಶದ ಪ್ರಪ್ರಥಮ ಮಹಿಳಾ ಶಿಕ್ಷಕಿ, ಸಮಾಜ ಸುಧಾರಕಿಯಾದ ಸಾವಿತ್ರಿಬಾಯಿ ಪುಲೆ ಅವರ ಜನ್ಮದಿನವನ್ನು ಇಲ್ಲಿನ ಬಾಲಕಿಯರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಚರಿಸಲಾಯಿತು.ಶಾಲೆಯ ಮುಖ್ಯಗುರು ಬಸಯ್ಯ ಮಠ ಮಾತನಾಡಿ, ಸಾವಿತ್ರಿಬಾಯಿ ಪುಲೆ ಅವರು ಸ್ತ್ರೀಕುಲಕ್ಕೆ ರತ್ನವಾಗಿದ್ದು, ಅತ್ಯಂತ ಕಷ್ಟಕಾಲದಲ್ಲಿ ಮಹಿಳೆಯರ ಹಕ್ಕುಗಳಿಗಾಗಿ ಹೋರಾಟ ಮಾಡಿದ ಧೀರೆ ಎಂದರು.ರಾಜ್ಯ ಪ್ರಾಥಮಿಕ ಶಾಲಾ ಸಂಘದ ರಾಜ್ಯ ಉಪಾಧ್ಯಕ್ಷ ಅಮರೇಶ್ ಮೈಲಾಪುರ ಮಾತನಾಡಿ ಸಾಧನೆಯಿಂದ ನರನು ನಾರಾಯಣನಾಗುತ್ತಾನೆ ಎಂಬುದನ್ನು ಸಾಧಿಸಿ ತೋರಿಸಿದವರು ಸಾವಿತ್ರಿಬಾಯಿ ಫುಲೆ ಅವರು ಎಂದರು.ಇದಕ್ಕೂ ಮುನ್ನ ಸಾವಿತ್ರಿಬಾಯಿ ಫುಲೆ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕಿಯಾದ ಪ್ರಮೀಳಾದೇವಿ ಕಾವ್ಯ ಮತ್ತು ಸುರೇಶ್ ಇದ್ದರು.