ದೇಶದ ಅಭಿವೃದ್ಧಿಗೆ ಸಹಕಾರ ರಂಗದ ಕೊಡುಗೆ ಅನನ್ಯ

| Published : Nov 22 2024, 01:17 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಸಂಕೇಶ್ವರ ದೇಶದ ಅಭಿವೃದ್ಧಿಗೆ ಸಹಕಾರ ರಂಗದ ಕೊಡುಗೆ ಅನನ್ಯವಾದದ್ದು. ರೈತರ ಬೆನ್ನೆಲುಬಾಗಿರುವ ಸಹಕಾರಿ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೆರೆಸಬಾರದು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಸಂಕೇಶ್ವರ

ದೇಶದ ಅಭಿವೃದ್ಧಿಗೆ ಸಹಕಾರ ರಂಗದ ಕೊಡುಗೆ ಅನನ್ಯವಾದದ್ದು. ರೈತರ ಬೆನ್ನೆಲುಬಾಗಿರುವ ಸಹಕಾರಿ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಬೆರೆಸಬಾರದು ಎಂದು ಮಾಜಿ ಸಂಸದ ರಮೇಶ ಕತ್ತಿ ಹೇಳಿದರು.

ಸಮೀಪದ ಅಮ್ಮಿನಭಾವಿ ಗ್ರಾಮದಲ್ಲಿ ಆತ್ಮನಿರ್ಭರ ಭಾರತ ಯೋಜನೆಯಡಿ ₹45 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮಲ್ಲಿಕಾರ್ಜುನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಉಗ್ರಾಣ ಹಾಗೂ ರೈತ ಸೇವಾ ಕೇಂದ್ರ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಕಾರಿ ಯೋಜನೆಗಳ ಸಮರ್ಪಕ ಲಾಭವನ್ನು ನೇರವಾಗಿ ರೈತರಿಗೆ ಒದಗಿಸುವ ಕೆಲಸ ಪಿಕೆಪಿಎಸ್‌ಗಳು ಮಾಡುತ್ತಿದ್ದು, ಅವುಗಳಿಂದ ರೈತರ ಕಲ್ಯಾಣದೊಟ್ಟಿಗೆ ಗ್ರಾಮಗಳು ಸುಧಾರಣೆಯಾಗುತ್ತಿವೆ. ಅಮ್ಮಿನಭಾವಿ ಭಾಗದ ಸಹಕಾರಿ ಕ್ಷೇತ್ರದ ಅಭಿವೃದ್ಧಿಯಲ್ಲಿ ಸಹಕಾರಿ ಧುರೀಣರಾಗಿದ್ದ ದಿ.ಮಲಗೌಡ ಪಾಟೀಲರ ಕೊಡುಗೆ ಅಪಾರವಾಗಿದೆ ಎಂದು ಸ್ಮರಿಸಿದರು.ಮಲ್ಲಿಕಾರ್ಜುನ ಅರ್ಬನ್ ಕೋ-ಆಪ್ ಸೊಸೈಟಿ ಅಧ್ಯಕ್ಷ ಪ್ರವೀಣ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು.

ಸಾನ್ನಿಧ್ಯ ವಹಿಸಿದ್ದ ನಿಡಸೋಸಿ ಜಗದ್ಗುರು ಶ್ರೀ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ಮಾತನಾಡಿ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಸಹಕಾರ ಸಂಸ್ಥೆಗಳು ಸಮಾಜಕ್ಕೆ ಬಹಮೂಲ್ಯ ಕೊಡುಗೆ ನೀಡುತ್ತ ಬಂದಿದ್ದು, ರೈತರ ಜೀವನಾಡಿ ಎಂದೇ ಕರೆಯಲ್ಪಡುವ ಪಿಕೆಪಿಎಸ್‌ಗಳು ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡುವ ಮೂಲಕ ರೈತರ ಆರ್ಥಿಕ ಸಬಲೀಕರಣಕ್ಕೆ ಬಲ ತುಂಬಿದೆ ಎಂದದು ಹೇಳಿದರು.

ಚಿಕ್ಕೋಡಿ ಜಗದ್ಗುರು ಸಂಪಾದನಾ ಚರಮೂರ್ತಿಮಠದ ಸಂಪಾದನ ಮಹಾಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಸ್ಥೆಯ ಸಂಸ್ಥಾಪಕದ ಸಿದಗೌಡ ಪಾಟೀಲ ಅಧ್ಯಕ್ಷತೆ ವಹಿಸಿದರು. ಹಿರಿಯ ಧುರೀಣಅಪ್ಪಾಸಾಹೇಬ ಶಿರಕೋಳಿ, ಬಿ ಎಸ್, ಸುಲ್ತಾನಪುರಿ, ದುರದುಂಡಿ ಪಾಟೀಲ, ಶಂಕರ ಹೆಗಡೆ, ,ಸುರೇಶ ಕುಲಕರ್ಣಿ, ಸಂಸ್ಥೆ ಅಧ್ಯಕ್ಷ ಪರಗೌಡ ಪಾಟೀಲ, ಉಪಾಧ್ಯಕ್ಷ ಮಹಾದೇವ ಮಗದುಮ್ಮ ಸದಸ್ಯರಾದ ಸಿದಗೌಡ ಪಾಟೀಲ, ಬಾಬು ಹುಣಚ್ಯಾಳಿ, ರಾವಸಾಹೇಬ ಪಾಟೀಲ, ಈರಪ್ಪ ಮಡಿವಾಳ, ವೀರಭದ್ರ ಥರಪಟ್ಟಿ, ಲಕ್ಷೀಬಾಯಿ ಥರಪಟ್ಟಿ, ಸೋನಕ್ಕಾ ಪಾಟೀಲ, ಶಿವಪ್ಪ ಶರ್ಮಾ ಹಾಗೂ ಬ್ಯಾಂಕ್ ಪ್ರತಿನಿಧಿ ಮಂಜುನಾಥ ಹಡಾಡಿ, ಸಲಹಾ ಸಮಿತಿ ಸದಸ್ಯ ನಿಂಗೌಡ ಪಾಟೀಲ ಮುಖ್ಯ ಕಾರ್ಯನಿರ್ವಾಹಕ ಮಹಾಂತೇಶ ಥರಪಟ್ಟಿ, ಶಿವಗೌಡ ಪಾಟೀಲ ಸೇರಿದಂತೆ ಇತರರು ಇದ್ದರು.