ಹೊಸದುರ್ಗ ಇತಿಹಾಸಕ್ಕೆ ಮತ್ತೋಡು ಪಾಳೆಗಾರರ ಕೊಡುಗೆ ಅಪಾರ

| Published : Mar 17 2025, 12:33 AM IST

ಹೊಸದುರ್ಗ ಇತಿಹಾಸಕ್ಕೆ ಮತ್ತೋಡು ಪಾಳೆಗಾರರ ಕೊಡುಗೆ ಅಪಾರ
Share this Article
  • FB
  • TW
  • Linkdin
  • Email

ಸಾರಾಂಶ

ಮತ್ತೋಡು ಹೋಬಳಿ ಬಾಣದ ರಂಗನಾಥಸ್ವಾಮಿ ದೇವಾಲಯದಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಸ್ಮಾರಕ ಸ್ವಚ್ಛತೆ, ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮದಲ್ಲಿ ಡಾ.ನಾಗರಾಜ್ ಅಭಿಮತಕನ್ನಡಪ್ರಭ ವಾರ್ತೆ ಹೊಸದುರ್ಗ

ತಾಲೂಕಿನ ಇತಿಹಾಸಕ್ಕೆ ಮತ್ತೋಡು ಪಾಳೆಗಾರರ ಕೊಡುಗೆ ಅಪಾರವಾಗಿದ್ದು ಪಾಳೆಗಾರರ ಕಾಲದಲ್ಲಿ ನಿರ್ಮಾಣವಾದ ಎಲ್ಲಾ ಸ್ಮಾರಕಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಇವುಗಳ ಇತಿಹಾಸವನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು ಎಂದು ಇತಿಹಾಸ ಪರಂಪರೆ ಕೂಟದ ಮುಖ್ಯಸ್ಥ ಡಾ.ನಾಗರಾಜ್ ತಿಳಿಸಿದರು.ತಾಲೂಕಿನ ಮತ್ತೋಡು ಹೋಬಳಿ ಬಾಣದ ರಂಗನಾಥಸ್ವಾಮಿ ದೇವಾಲಯದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಸಹಾಯಕ ನಿರ್ದೇಶಕರ ಕಚೇರಿ ಸರ್ಕಾರಿ ವಸ್ತುಸಂಗ್ರಹಾಲಯ, ಚಿತ್ರದುರ್ಗ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಹೊಸದುರ್ಗದ ಇತಿಹಾಸ ಪರಂಪರೆ ಕೂಟ ಹಾಗೂ ಎನ್‌ಎಸ್ಎಸ್ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸ್ಮಾರಕ ಸ್ವಚ್ಛತೆ ಹಾಗೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಸಹಾಯಕ ನಿರ್ದೇಶಕ ಪ್ರಹ್ಲಾದ್, ಜಿ.ಮಾತನಾಡಿ ಹೊಸದುರ್ಗ

ತಾಲೂಕಿನಲ್ಲಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಸ್ಮಾರಕ ಶಿಲಾಶಾಸನ, ವೀರಮಾಸ್ತಿಗಲ್ಲುಗಳು, ಕೋಟೆ ಇನ್ನಿತರ ಪ್ರಾಚ್ಯಾವಶೇಷಗಳಿವೆ. ಇಲಾಖೆ ವತಿಯಿಂದ ಪ್ರಾಚ್ಯಾವಶೇಷಗಳ ಸರ್ವೇ ಕಾರ್ಯ ನಡೆಸಲಾಗುತ್ತಿದೆ ಸ್ಮಾರಕಗಳ ಸಂರಕ್ಷಣೆಗೆ ಯುವಕರು ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಕೈಗೂಡಿಸಬೇಕು ಎಂದು ಕರೆ ನೀಡಿದರು.

ಡಾ.ಶರತ್ ಬಾಬು ಮಾತನಾಡಿ, ಮತ್ತೋಡು ಪಾಳೆಗಾರರ ಕಾಲದಲ್ಲಿ ನಿರ್ಮಾಣವಾದ ಸ್ಮಾರಕಗಳ ಕುರಿತು ಮಾಹಿತಿ ಒದಗಿಸಿದರು. ಡಾ. ವಿವೇಕನಂದ ಬಾಣದ ರಂಗನಾಥಸ್ವಾಮಿ ದೇವಾಲಯದ ವಾಸ್ತುಶೈಲಿ ಕುರಿತು ವಿದ್ಯಾರ್ಥಿಗಳಿಗೆ ವಿವರಿಸಿದರು. ದೇವಾಲಯದ ಅರ್ಚಕರು ಮತ್ತೋಡು ಗ್ರಾಮದಲ್ಲಿರುವ 101 ದೇವಾಲಯ, ಪುಷ್ಕರಣಿ, ಬಾವಿಗಳ ಕುರಿತು ಮಾಹಿತಿ ಒದಗಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.