ನಾಡಿನಲ್ಲಿ ಜಾತ್ಯಾತೀತವಾಗಿ ಮಠ-ಮಾನ್ಯಗಳು ಅನ್ನ,ಅಕ್ಷರ ದಾಸೊಹ ಆರೋಗ್ಯ ಸೇವೆಗಳ ಮೂಲಕ ನಾಡಿಗೆ ಅಪಾರ ಕೊಡುಗೆ ನೀಡಿವೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.
ಕನ್ನಡಪ್ರಭ ವಾರ್ತೆ ಬೀಳಗಿ
ನಾಡಿನಲ್ಲಿ ಜಾತ್ಯಾತೀತವಾಗಿ ಮಠ-ಮಾನ್ಯಗಳು ಅನ್ನ,ಅಕ್ಷರ ದಾಸೊಹ ಆರೋಗ್ಯ ಸೇವೆಗಳ ಮೂಲಕ ನಾಡಿಗೆ ಅಪಾರ ಕೊಡುಗೆ ನೀಡಿವೆ ಎಂದು ಶಾಸಕ ಜೆ.ಟಿ. ಪಾಟೀಲ ಹೇಳಿದರು.ಸ್ಥಳೀಯ ಕಲ್ಮಠದಲ್ಲಿ ನಡೆದ ಲಿ.ಗುರುಪಾದ ಶಿವಾಚಾರ್ಯ ಸ್ವಾಮೀಜಿ ಅವರ ಪುಣ್ಯಸ್ಮರಣೋತ್ಸವ ಹಾಗೂ ನಮ್ಮೂರ ಉತ್ಸವ ಸಮಾರಂಭದಲ್ಲಿ ಭಾಗವಹಿಸಿ ಗೌರವ ಸ್ವೀಕರಿಸಿ ಅವರು ಮಾತನಾಡಿದರು. ಮಾಹಾತ್ಮರ ಪ್ರವಚನ ಭಕ್ತರನ್ನು ಸರಿಯಾದ ಮಾರ್ಗಕ್ಕೆ ತರುವುದಾಗಿದೆ.
ಪ್ರವಚನದಿಂದ ಸುವ್ಯವಸ್ಥಿತ ಸಮಾಜ ನಿರ್ಮಾಣ ಮಾಡಲು ಸಹಾಯಕವಾಗಿದೆ.ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರಿಂದ ಮಾನಸಿಕ ನೆಮ್ಮದಿ ದೊರೆಯುವುದು ಎಂದರು.ಮನುಷ್ಯನ ಜ್ಞಾನ ವಿಕಾಸಗೊಳಿಸುವ ಶಿಕ್ಷಣ ಕೇಂದ್ರಗಳನ್ನು ತೆರೆಯುವ ಜತೆಗೆ ಪ್ರತಿಯೊಬ್ಬರಿಗೂ ಅಕ್ಷರ ಜ್ಞಾನ ನೀಡುವಲ್ಲಿ ನಿರತರಾದ ಮಠಾಧೀಶರು ನಾಡಿನ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ. ಅಂತಹ ಮಹಾತ್ಮರಲ್ಲಿ ಬೀಳೂರು ಗುರುಬಸವ ಸ್ವಾಮೀಜಿ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಜಮಖಂಡಿ ಓಲೆಮಠದ ಆನಂದ ದೇವರು ಮಾತನಾಡಿ ದೇವರು ನಮಗೆ ನೀಡಿದ ಜನ್ಮವನ್ನು ಪಾವನಗೊಳಿಸಿಕೊಳ್ಳಲು ಆಸ್ತಿ, ಅಂತಸ್ತು ಬೇಕಾಗಿಲ್ಲ. ಇತರರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಮತ್ತೊಬ್ಬರ ಕಣ್ಣಿರು ಒರೆಸುವ ಗುಣ ನಮ್ಮಲ್ಲಿದ್ದರೆ ಅದುವೇ ಮುಖ್ಯ ಎಂದರು.ಬೀಳಗಿ ಕಲ್ಮಠದ ಪೀಠಾಧಿಪತಿ ಗುರುಪಾದ ಶಿವಾಚಾರ್ಯ ಸ್ವಾಮೀಜಿ,ಪ್ರವಚನಕಾರ ಕಲಬುರ್ಗಿ ಭೀಮಳ್ಳಿ ಉದಯಕುಮಾರ ಶಾಸ್ತ್ರೀಜಿ ಭಾಗವಹಿಸಿದ್ದರು.
ಪಟ್ಟಣದ ಮಂದಾರ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ತುಮಕೂರು ಸಿದ್ದಗಂಗಾ ಮಠದ ಲಿ. ಶಿವಕುಮಾರ ಸ್ವಾಮೀಜಿಯವರ ಜೀವನ ದರ್ಶನದ ಕಿರು ನಾಟಕ ಪ್ರದರ್ಶಿಸಿದರು. ನಿವೃತ್ತ ಹೊಂದಿದ ಶಿಕ್ಷಕರು ಹಾಗೂ ವಿವಿಧ ಇಲಾಖೆಯ ಭಕ್ತರನ್ನು ಗೌರವಿಸಲಾಯಿತು.ಬೀಳಗಿ ಕಲ್ಮಠದಲ್ಲಿ ಲಿ. ಗುರುಪಾದ ಶಿವಾಚಾರ್ಯ ಸ್ವಾಮೀಜಿಯವರ ಪುಣ್ಯ ಸ್ಮರಣೋತ್ಸವ, ನಮ್ಮೂರ ಉತ್ಸವ ಸಮಾರಂಭದಲ್ಲಿ ಭಾಗವಹಿಸಿ ಶಾಸಕ ಜೆ.ಟಿ. ಪಾಟೀಲ ಮಾತನಾಡಿದರು.