ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಸಾರಸ್ವತ, ಸಂಗೀತ ಹೀಗೆ ಎಲ್ಲ ಕ್ಷೇತ್ರಗಳಿಗೂ ವಿಜಯಪುರ ಜಿಲ್ಲೆಯ ಕೊಡುಗೆ ಅದ್ಭುತ ಹಾಗೂ ಅಮೋಘವಾಗಿದೆ ಎಂದು ಚಾಣಕ್ಯ ಕೆರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷ ಎನ್.ಎಂ.ಬಿರಾದಾರ ಹೇಳಿದರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕಸಾಪ ಜಿಲ್ಲಾ ಹಾಗೂ ನಗರ ಘಟಕದ ಆಶ್ರಯದಲ್ಲಿ ಮಹಾಶಿವಶರಣೆ ಗುಡ್ಡಾಪುರ ದಾನಮ್ಮದೇವಿಯ ಕುರಿತು ಚಿಂತನೆ ಎಂಬ ವಿಷಯದ ಕುರಿತು ದತ್ತಿ ಉಪನ್ಯಾಸ ನಡೆಯಿತು. ಉಪನ್ಯಾಸಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶರಣರು, ಮಹಾತ್ಮರು, ಕವಿಗಳು, ಸಂಗೀತಗಾರರು, ಕಲಾವಿದರು ತಮ್ಮ ಕ್ಷೇತ್ರದಲ್ಲಿ ಅಪೂರ್ವ ಕೊಡುಗೆ ನೀಡುವ ಮೂಲಕ ವಿಜಯಪುರ ಜಿಲ್ಲೆಯ ಕೀರ್ತಿಯನ್ನು ಎಲ್ಲೆಡೆ ಪಸರಿಸಿದ್ದಾರೆ ಎಂದು ಬಣ್ಣಿಸಿದರು.ಶಿವಶರಣೆ ಗುಡ್ಡಾಪುರ ದಾನಮ್ಮದೇವಿ ಕುರಿತು ಲೇಖಕಿ ಅನ್ನಪೂರ್ಣ ಚೋಳಕೆ ಉಪನ್ಯಾಸ ನೀಡಿ, ಕೃಷಿ ಕುಟುಂಬದಲ್ಲಿ ಉಮರಾಣಿಯ ಅನಂತರಾಯ ಮತ್ತು ಶಿರಸಮ್ಮ ದಂಪತಿಗಳ ಮಗಳಾಗಿ ಜನಿಸಿ ಲೋಕೋದ್ಧಾರ ಮಾಡಿದ ಮಹಾ ಶಿವಶರಣೆ ದಾನಮ್ಮದೇವಿ ಹಲವಾರು ಪವಾಡಗಳನ್ನು ನಡೆಸಿದ್ದಾಳೆ. ಮಹಾಸಾದ್ವಿ, ಕಲಿಯುಗದ ಕಾಮಧೇನು ದರ್ಶನಾಶೀರ್ವಾದದಿಂದ ಜೀವನ ಪಾವನವಾಗುತ್ತದೆ ಎಂದರು.
ಕಲಕೇರಿಯ ಮಡಿವಾಳೇಶ್ವರ ಕುರಿತು ಸಾಹಿತಿ ರೇವತಿ ಬೂದಿಹಾಳ ಮಾತನಾಡಿದರು. ಉತ್ತರ ಕರ್ನಾಟಕದ ಧಾರ್ಮಿಕ ಪರಂಪರೆಯ ಇತಿಹಾಸದಲ್ಲಿ ಕಲಕೇರಿಯ ಮಡಿವಾಳೇಶ್ವರರು ೧೨ನೇ ಶತಮಾನದ ಬಸವ ಚಳುವಳಿಯ ನೇತೃತ್ವ ವಹಿಸಿ ಕಲ್ಯಾಣ ಕ್ರಾಂತಿಯ ನಂತರ ತಮ್ಮ ಗುರುಗಳೊಂದಿಗೆ ಒಂದೇ ಕಡೆ ನೆಲೆ ನಿಂತು ಶ್ರೇಷ್ಠ ಮಹಾಮಹಿಮರಾಗಿದ್ದಾರೆ ಎಂದು ತಿಳಿಸಿದರು.ವಿಶ್ರಾಂತ ಪ್ರಾಚಾರ್ಯ ಪ್ರೊ.ಸಿದ್ದಣ್ಣ ಸಾತಲಗಾಂವ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲೀಕಾರ ಮಾತನಾಡಿದರು. ಶಶಿಧರ ಸಂಕಣ್ಣನವರ, ಮ.ಗು.ಯಾದವಾಡ, ಜ್ಯೋತಿರಾಮ ಪವಾರ, ನಬಿಲಾಲ ಕರಜಗಿ, ಫಾರೂಖ್ ಮೇಲಿನಮನಿ, ಶಿವಪುತ್ರ ಬಿರಾದಾರ, ಡಾ.ಸಂಗಮೇಶ ಮೇತ್ರಿ, ಡಾ.ಆನಂದ ಕುಲಕರ್ಣಿ, ಮಮತಾ ಮುಳಸಾವಳಗಿ, ಪ್ರೊ.ಸಿದ್ರಾಮಯ್ಯ ಲಕ್ಕುಂಡಿಮಠ, ಡಾ.ವಿ.ಡಿ.ಐಹೊಳ್ಳಿ, ಡಾ.ಮಾಧವ ಗುಡಿ, ಕಮಲಾ ಮುರಾಳ, ಜಯಶ್ರೀ ಹಿರೇಮಠ, ವಿಜಯಲಕ್ಷ್ಮೀ ಹಳಕಟ್ಟಿ, ರಾಜೇಸಾಬ ಶಿವನಗುತ್ತಿ, ಬಿ.ಎಂ.ಆಜೂರ, ಶಾರದಾ ಕೊಪ್ಪ, ಎಸ್.ಎಂ.ಕಣಬೂರ, ಟಿ.ಆರ್.ಹಾವಿನಾಳ, ಕೆ.ಎಸ್.ಹಣಮಾಣಿ, ಅಮಸಿದ್ಧ ಪೂಜಾರಿ, ಜಿ.ಎಸ್.ಬಳ್ಳೂರ, ಪ್ರೊ.ಬಿ.ಜಿ.ಬಿದರಿ, ಎಲ್.ಬಿ.ಶೇಖ, ಶ್ರೀಶೈಲ ಆಳೂರ, ಸಿದ್ಧರಾಮ ಬಿರಾದಾರ, ಲಕ್ಷ್ಮೀ ಕಾತ್ರಾಳ, ಡಾ.ಸುರೇಶ ಕಾಗಲಕರರೆಡ್ಡಿ, ಶಿವಾಜಿ ಮೋರೆ, ಬಿ.ಎಸ್.ಭಜಂತ್ರಿ, ಎ.ಎಂ.ಚಳಗೇರಿ, ಗಂಗಮ್ಮ ರಡ್ಡಿ ಮುಂತಾದವರು ಇದ್ದರು.
ಸಾರಸ್ವತ, ಸಂಗೀತ ಹೀಗೆ ಎಲ್ಲ ಕ್ಷೇತ್ರಗಳಿಗೂ ವಿಜಯಪುರ ಜಿಲ್ಲೆಯ ಕೊಡುಗೆ ಅದ್ಭುತ ಹಾಗೂ ಅಮೋಘವಾಗಿದೆ. ಶರಣರು, ಮಹಾತ್ಮರು, ಕವಿಗಳು, ಸಂಗೀತಗಾರರು, ಕಲಾವಿದರು ತಮ್ಮ ಕ್ಷೇತ್ರದಲ್ಲಿ ಅಪೂರ್ವ ಕೊಡುಗೆ ನೀಡುವ ಮೂಲಕ ವಿಜಯಪುರ ಜಿಲ್ಲೆಯ ಕೀರ್ತಿಯನ್ನು ಎಲ್ಲೆಡೆ ಪಸರಿಸಿದ್ದಾರೆ.-ಎನ್.ಎಂ.ಬಿರಾದಾರ, ಚಾಣಕ್ಯ ಕೆರಿಯರ್ ಅಕಾಡೆಮಿ ಸಂಸ್ಥಾಪಕ ಅಧ್ಯಕ್ಷರು.