ಸಾರಾಂಶ
ಚಾಮರಾಜನಗರ: ಜಿಲ್ಲೆಯನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲು ಸಂಘ, ಸಂಸ್ಥೆಗಳ ಸಹಕಾರ ಅಗತ್ಯವಿದೆ ಎಂದು ಉಪ ಕುಲಪತಿ ಡಾ.ಎಂ.ಆರ್.ಗಂಗಾಧರ್ ತಿಳಿಸಿದರು.
ನಗರದ ವರ್ತಕರ ಭವನದಲ್ಲಿ ವರ್ತಕರ ಸಂಘದ ೫೮ನೇ ವಾರ್ಷಿಕೊತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಚಾಮರಾಜನಗರ ಹಿಂದುಳಿದ ಗಡಿ ಜಿಲ್ಲೆ ಎಂಬ ಮಾತು ದೂರವಾಗಬೇಕು. ಇಲ್ಲಿನ ಜನರಿಗೆ ಸಾಧನೆ ಮಾಡಬೇಕೆಂಬ ಕಿಚ್ಚು ಇದೆ. ನಮ್ಮ ವಿಶ್ವವಿದ್ಯಾಲಯದಲ್ಲಿ ಕನ್ನಡ, ಭೌತಶಾಸ್ತ್ರ ವಿಭಾಗದಲ್ಲಿ ರ್‍ಯಾಂಕ್ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದರು.
ಹುಟ್ಟಿನಿಂದಲೇ ಯಾರು ದಡ್ಡರು ಹಾಗೂ ಬುದ್ಧಿವಂತರು ಅಲ್ಲ. ಅವರು ಕಲಿಯುವ ವಾತಾವರಣ ಮತ್ತು ಪ್ರೋತ್ಸಾಹ ದೊರೆತರೆ ಎಲ್ಲರೂ ಸಾಧನೆ ಮಾಡುತ್ತಾರೆ. ಅಂಥ ವಾತಾವರಣವನ್ನು ನಾವು ನೀವು ಕಲ್ಪಿಸುವ ಜವಾಬ್ದಾರಿ ಇದೆ. ನಿಮ್ಮೂರಿನ ಪ್ರತಿಭೆ ಡಾ.ನಾಗೇಶ್ ಸಾಧನೆ ನಮ್ಮ ಮಕ್ಕಳಿಗೆ ಸ್ಫೂರ್ತಿಯಾಗಬೇಕು. ಅವರನ್ನು ಆಹ್ವಾನಿಸಿ, ಗೌರವಿಸುತ್ತಿರುವ ವರ್ತಕರ ಸಂಘದ ಪದಾಧಿಕಾರಿಗಳಿಗೆ ಅಭಿನಂದನೆಗಳು ಎಂದರು.ಈ ಹಿಂದೆ ಚಾಮರಾಜನಗರ ಪಾಲಿಟೆಕ್ನಿಕ್ ಮಾತ್ರ ಇತ್ತು. ಈಗ ವಿಶ್ವವಿದ್ಯಾನಿಲಯ ಬಂದಿದೆ. ಮೆಡಿಕಲ್, ಎಂಜಿನಿಯರಿಂಗ್, ಕೃಷಿ ಕಾಲೇಜು ಬಂದಿದೆ. ಜೆಎಸ್‌ಎಸ್ ಸಂಸ್ಥೆ ಉತ್ತಮ ಶಿಕ್ಷಣ ನೀಡುತ್ತಿದೆ. ನಮ್ಮಲ್ಲಿಯು ೧೩ ಕೋರ್ಸ್‌ಗಳು ಇವೆ. ಇನ್ನು ೨೫ಕ್ಕು ಹೆಚ್ಚು ಕೋರ್ಸ್‌ಗಳನ್ನು ಅಳವಡಿಸುತ್ತೇದ್ದೇವೆ. ಇದೆಲ್ಲವನ್ನು ಜಿಲ್ಲೆಯ ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕೆಂದು ಹೇಳಿದರು. ಬೆಂಗಳೂರಿನ ಎಮ್ಸ್ ಕಾರ್ಡಿಯಾಲಜಿ ಮುಖ್ಯಸ್ಥೆ ಡಾ.ಸಿ.ಎಂ.ನಾಗೇಶ್ ಮಾತನಾಡಿ, ಸಾಧನೆ ಸಾಧಕನ ಸೊತ್ತಾಗುತ್ತಿದೆ. ಇದಕ್ಕೆ ನಾನೇ ಉತ್ತಮ ನಿದರ್ಶನ. ನಾನು ೫ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಗಲೇ ವೈದ್ಯನಾಗಬೇಕು. ಹೃದಯ ತಜ್ಞನಾಗಬೇಕೆಂಬ ಅಸೆ ಹೊಂದಿ ಪುಸ್ತಕದಲ್ಲಿ ಬರೆದುಕೊಂಡೆ. ನಂತರ ಚಿನ್ನದ ಪದಕ ಪಡೆಯಬೇಕೆಂಬ ಛಲದೊಂದಿಗೆ ಏಕಾಗ್ರತೆ ಮತ್ತು ಕಠಿಣ ಪರಿಶ್ರಮದಿಂದ ಸಕರತ್ಮಾಕವಾಗಿ ಚಿಂತನೆ ಮಾಡುತ್ತಾ ಓದಿ ಯಶಸ್ಸುಗಳಿಸಿದೆ.ನೀವೂ ಒಂದು ಗುರಿಯನ್ನು ಇಟ್ಟುಕೊಂಡು ವ್ಯಾಸಂಗ ಮಾಡಿ, ಯಶಸ್ಸು ಗೊಳಿಸಬೇಕು ಎಂದರು.
ವರ್ತಕರ ಸಂಘದ ಅಧ್ಯಕ್ಷ ಎಚ್.ಬಿ.ರಾಜಶೇಖರ್, ಸಂಘದ ಗೌರವ ಕಾರ್ಯದರ್ಶಿ ಕೆ.ಎಸ್.ಚಿದಾನಂದ ಗಣೇಶ್, ಉಪಾಧ್ಯಕ್ಷ ಸಿ.ಎಸ್.ಮಹೇಶ್‌ಕುಮಾರ್, ಸಹ ಕಾರ್ಯದರ್ಶಿ ಎಂ.ಕಮಲ್‌ರಾಜ್, ಖಜಾಂಚಿ ಎಚ್.ಬಿ.ವಿಶ್ವಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಎಸ್.ಬಾಲಸುಬ್ರಮಣ್ಯ, ನಿರ್ದೇಶಕರಾದ ಸಿ.ಎ.ನಾರಾಯಣ್, ರವಿಶಂಕರ್, ಸಿ.ಎಸ್.ಮಹೇಶ್‌ಕುಮಾರ್, ಎಸ್.ಸತೀಶ್, ಸಿ.ರಾಮಚಂದ್ರ, ಎ.ಶ್ರೀನಿವಾಸನ್, ಸಿ.ಜಿ.ಪದ್ಮಕುಮಾರ್, ಎಲ್.ಸುರೇಸ್, ಎಂ.ಯೊಗೀಶ್, ಗಣೇಶ್, ಸಿ.ಎಸ್.ಮೋಹನ್‌ಕುಮಾರ್, ವಿ.ವಿಶ್ವನಾಥ್, ಅಜಯ್, ಮಂಜುನಾಥ್, ಶಂಕರ್, ಸೈಯದ್ ಅಲ್ತಾಪ್ ಮತ್ತಿತರರಿದ್ದರು.