ಸಾರಾಂಶ
ಸೊಸೈಟಿಯ ಅಭಿವೃದ್ಧಿಯಾಗಲು ಸದಸ್ಯರ, ಸಾಲಗಾರರ ಸಹಾಯ, ಸಹಕಾರ ಮತ್ತು ಸಿಬ್ಬಂದಿಯ ಪ್ರಾಮಾಣಿಕತೆ ಪ್ರಮುಖವಾಗಿದೆ. ಸಾಲಗಾರರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದು ಹಿಡಕಲ್ ಡ್ಯಾಂ ಅರ್ಬನ್ ಕೋ ಆಫ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ವ್ಹಿ.ಕೆ. ಹುದ್ದಾರ ಹೇಳಿದರು.
ಕನ್ನಡಪ್ರಭ ವಾರ್ತೆ ಯಮಕನಮರಡಿ
ಸೊಸೈಟಿಯ ಅಭಿವೃದ್ಧಿಯಾಗಲು ಸದಸ್ಯರ, ಸಾಲಗಾರರ ಸಹಾಯ, ಸಹಕಾರ ಮತ್ತು ಸಿಬ್ಬಂದಿಯ ಪ್ರಾಮಾಣಿಕತೆ ಪ್ರಮುಖವಾಗಿದೆ. ಸಾಲಗಾರರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಬೇಕು ಎಂದು ಹಿಡಕಲ್ ಡ್ಯಾಂ ಅರ್ಬನ್ ಕೋ ಆಫ್ ಕ್ರೆಡಿಟ್ ಸೊಸೈಟಿ ಅಧ್ಯಕ್ಷ ವ್ಹಿ.ಕೆ. ಹುದ್ದಾರ ಹೇಳಿದರು.ಹುಕ್ಕೇರಿ ತಾಲೂಕಿನ ಹಿಡಕಲ್ ಡ್ಯಾಂಮ್ ಅರ್ಬನ್ ಕೋ ಆಫ್ ಕ್ರೆಡಿಟ್ ಸೊಸೈಟಿಯ 30ನೇ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಎಸ್.ಡಿ. ಶೇರವಿ ವರದಿ ಮಂಡಿಸಿ ಮಾತನಾಡಿ, ಸದಸ್ಯರ ಸಂಖ್ಯೆ 1035 ಇದ್ದು, ₹17,92,240 ಷೇರು ಬಂಡವಾಳ, ₹3,56,60,270 ದುಡಿಯುವ ಬಂಡವಾಳ ಇದೆ ಎಂದು ಹೇಳಿದರು.ಸಭೆಯಲ್ಲಿ ನಿರ್ದೇಶಕರಾದ ಜೆ.ಎಚ್. ಪೀರಜಾದೆ, ಪಿ.ಎಸ್. ಘೋಡಗೇರಿ, ವಿ.ಎಫ್. ಕ್ಷೀರಸಾಗರ, ಎಸ್.ಎಸ್. ಖೋತ, ಎಂ.ಜಿ. ಪಾಟೀಲ, ಬಿ.ಕೆ. ನಾಯಿಕ, ಎಸ್.ಜಿ. ಮಠಪತಿ, ಬಿ.ಬಿ. ಘೋಳಪ್ಪಗೋಳ, ಎಂ.ಬಿ. ಬಸರಗಿ, ಜಿ.ಎಸ್. ತಳವಾರ, ವಿ.ಬಿ. ಬಾಳವ್ವಗೋಳ, ಎಂ.ಜೆ. ಗುರವಿ, ಬಿ.ಬಿ. ಮಾದರ ಮತ್ತು ಸಮಾಜ ಸೇವಕ ಚಂದ್ರಶೇಖರ ಗಣಾಚಾರಿ, ಸದಸ್ಯರು ಇದ್ದರು.