ಶಿಕ್ಷಣ ಕ್ಷೇತ್ರದಲ್ಲಿ ಚರ್ಚೆ ಸ್ಪರ್ಧೆ ಯನ್ನು ಏರ್ಪಡಿಸುತ್ತೇವೆ, ಇಂದಿನ ದಿನಗಳಲ್ಲಿ ವಿದ್ಯಾಭ್ಯಾಸ ಎನ್ನುವುದು ವ್ಯಾಪಾರೀಕರಣವಾಗಿದ್ದು, ಉಳ್ಳವರ ಸ್ವತ್ತಾಗಿದೆ ಎಂದು ಹೇಳಿದರು. ಪ್ರಪಂಚ ವೈಜ್ಞಾನಿಕವಾಗಿ ಬೆಳೆದು ನಿಂತಿದೆ ಪ್ರಪಂಚದ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕು ಎಂದರೆ ಭಾಷೆ ವ್ಯವಸ್ಥೆ ಅಡ್ಡವಾಗಿ ನಿಂತಿದೆ. ಆದ್ದರಿಂದ ಆಂಗ್ಲ ಭಾಷೆ ಕಲಿಯುವುದು ಅತಿ ಮುಖ್ಯವಾಗಿದೆ ಎಂದು ತಿಳಿಸಿದರು, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚಿನ ಪ್ರಧಾನ್ಯತೆ ಇಲ್ಲದೆ ಇರುವ ಕಾರಣದಿಂದಾಗಿ ಆಧುನಿಕ ವಿದ್ಯಾಭ್ಯಾಸದಿಂದ ಬಡ ಮಕ್ಕಳು ಶಿಕ್ಷಣದಲ್ಲಿ ತೊಂದರೆ ಉಂಟಾಗುತ್ತಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ದೇಶ ಹಾಗೂ ರಾಜ್ಯ ಪ್ರಗತಿಯ ಪಥದಲ್ಲಿ ಸಾಗಲು ಶಿಕ್ಷಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ಹಾಸನ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಹಾಸನಾಂಬಾ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಡಾ. ಸರ್ವಪಲ್ಲಿ ರಾಧಕೃಷ್ಣನ್‌ರವರ ಜನ್ಮ ದಿನಾಚರಣೆ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯೆಯನ್ನು ನೀಡುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ, ಹೆಚ್ಚಿನ ರೀತಿಯಲ್ಲಿ ಶಿಕ್ಷಕರು ಒಳ್ಳೆಯ ಕೆಲಸವನ್ನು ಮಾಡಬೇಕು ಎಂದರಲ್ಲದೆ, ಶಿಕ್ಷಣ ಕ್ಷೇತ್ರದಲ್ಲಿ ಚರ್ಚೆ ಸ್ಪರ್ಧೆ ಯನ್ನು ಏರ್ಪಡಿಸುತ್ತೇವೆ, ಇಂದಿನ ದಿನಗಳಲ್ಲಿ ವಿದ್ಯಾಭ್ಯಾಸ ಎನ್ನುವುದು ವ್ಯಾಪಾರೀಕರಣವಾಗಿದ್ದು, ಉಳ್ಳವರ ಸ್ವತ್ತಾಗಿದೆ ಎಂದು ಹೇಳಿದರು. ಪ್ರಪಂಚ ವೈಜ್ಞಾನಿಕವಾಗಿ ಬೆಳೆದು ನಿಂತಿದೆ ಪ್ರಪಂಚದ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಳ್ಳಬೇಕು ಎಂದರೆ ಭಾಷೆ ವ್ಯವಸ್ಥೆ ಅಡ್ಡವಾಗಿ ನಿಂತಿದೆ. ಆದ್ದರಿಂದ ಆಂಗ್ಲ ಭಾಷೆ ಕಲಿಯುವುದು ಅತಿ ಮುಖ್ಯವಾಗಿದೆ ಎಂದು ತಿಳಿಸಿದರು, ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮಕ್ಕೆ ಹೆಚ್ಚಿನ ಪ್ರಧಾನ್ಯತೆ ಇಲ್ಲದೆ ಇರುವ ಕಾರಣದಿಂದಾಗಿ ಆಧುನಿಕ ವಿದ್ಯಾಭ್ಯಾಸದಿಂದ ಬಡ ಮಕ್ಕಳು ಶಿಕ್ಷಣದಲ್ಲಿ ತೊಂದರೆ ಉಂಟಾಗುತ್ತಿದೆ ಎಂದರು.ಸರ್ಕಾರಿ ರಂಗದಲ್ಲಿ ಬಡವರಿಗೆ ನ್ಯಾಯವನ್ನು ನೀಡಬೇಕು, ಖಾಸಗಿ ರಂಗದಲ್ಲಿ ಓದಿದವರಿಗೆ ಮಾತ್ರ ಪ್ರಪಂಚದಲ್ಲಿ ಪಾಲ್ಗೊಳ್ಳಲು ಸಾಧ್ಯವಿದೆ. ಅದಕ್ಕೆ ಸರ್ಕಾರಿ ಶಾಲೆಗಳಲ್ಲಿಯೂ ಸಹ ಇಂಗ್ಲಿಷ್? ಮಾಧ್ಯಮದಲ್ಲಿ ಕಲಿಸಲು ಕೆಲವು ಸುಧಾರಣೆ ಆಗಬೇಕು ಈ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ನೀಡಿ ಪರಿಪಕ್ವತೆಯಿಂದ ಸಜ್ಜುಗೊಳಿಸಬೇಕಿದೆ ಎಂದು ತಿಳಿಸಿದರು.

ಇಂಗ್ಲೀಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಕಲಿತರೆ ನಮ್ಮ ಮಕ್ಕಳಿಗೆ ಪ್ರಪಂಚದಲ್ಲಿ ಭವಿಷ್ಯವಿದೆ ಎಂಬುದನ್ನು ಒಬ್ಬ ಸಾಮಾನ್ಯ ರೈತರು ಅರಿತಿದ್ದಾರೆ ಎಂದು ಹೇಳಿದರು. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯುವುದು ತಪ್ಪು ಎಂದು ಹೇಳುವುದಿಲ್ಲ, ಪ್ರಪಂಚದಲ್ಲಿ ಎಲ್ಲೇ ಹೋದರು ಸಹ ಇಂಗ್ಲೀಷಿನಲ್ಲಿ ಮಾತನಾಡಿ ಹೊರ ಬರಬಹುದು. ಅದಕ್ಕೆ ಇಂಗ್ಲಿಷ್ಭಾ ಭಾಷೆಗೆ ಹೆಚ್ಚಿನ ಮಹತ್ವ ಬಂದಿದೆ. ಆದರೆ ನಮ್ಮ ಮಾತೃಭಾಷೆ ಕನ್ನಡವನ್ನು ಇನ್ನೂ ಹೆಚ್ಚಿನ ಮಟ್ಟದಲ್ಲಿ ಅಭ್ಯಾಸ ಮಾಡಿ ಪರಿಣಿತರಾಗೋಣ ಎಂದರು.ಉದ್ಯೋಗ ಭರವಸೆ ಎಂಬುದು ಇಂಗ್ಲೀಷ್ ಮಾಧ್ಯಮದಲ್ಲಿ ಇರುತ್ತದೆ ಎಂಬ ಭಾವನೆ ಬಂದಿದೆ ಅದಕ್ಕೆ ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಸೋಣ, ಮಾತೃ ಭಾಷೆ ಕನ್ನಡವನ್ನು ಅಷ್ಟೇ ಪ್ರೀತಿ ವಿಶ್ವಾಸದಿಂದ ಕಲಿಸೋಣ ಎಂದು ತಿಳಿಸಿದರು. ನಮ್ಮ ಮಾತೃಷೆಯನ್ನು ಉಳಿಸಿಕೊಂಡು ನಮ್ಮ ಜೀವನದ ಗುರಿಯನ್ನು ಉತ್ತಮಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಾಗೋಣ. ಮುಂದಿನ ಪೀಳಿಗೆಯನ್ನು ಜಗತ್ತಿಗೆ ತೋರ್ಪಡಿಸುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ತಿಳಿಸಿದರು.

ಸಂಸದರಾದ ಶ್ರೇಯಸ್ ಎಂ ಪಟೇಲ್ ಅವರು ಮಾತನಾಡಿ, ಶಿಕ್ಷಕರಿಗೆ ಅಪಾರವಾದ ಗೌರವವನ್ನು ನೀಡುವ ದಿನವೆಂದರೆ ಅದು ಶಿಕ್ಷಕರ ದಿನಾಚರಣೆ ಯಾಗಿದ್ದು, ವಿದ್ಯಾರ್ಥಿಗಳು ಶಿಕ್ಷಕರನ್ನು ದೇವರ ಸ್ಥಾನದಲ್ಲಿ ನೋಡಬೇಕು ಎಂದು ಹೇಳಿದರು. ತಂದೆ ತಾಯಿಯಷ್ಟೇ ಸಮಾನರಾಗಿ ಇರುವವರು ಶಿಕ್ಷಕರು, ಒಬ್ಬ ವ್ಯಕ್ತಿ ಜೀವನದಲ್ಲಿ ವಿವಿಧ ಹಂತದಲ್ಲಿ ಸಾಧನೆ ಮಾಡಿದ್ದಾರೆ ಎಂದರೇ ಅದಕ್ಕೆ ಮೂಲ ಕಾರಣ ಶಿಕ್ಷಕರು ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು. ರಾಜ್ಯದಲ್ಲಿ ಎಸ್. ಎಸ್. ಎಲ್. ಸಿ ಫಲಿತಾಂಶದಲ್ಲಿ ನಮ್ಮ ಜಿಲ್ಲೆ ೪ನೇ ಸ್ಥಾನದಲ್ಲಿ ಇದೆ ಇದಕ್ಕೆ ಮುಖ್ಯ ಕಾರಣಕರ್ತರು ಶಿಕ್ಷಕರು, ಶಿಕ್ಷಕರಿಗೆ ಶಾಲೆ ಮಾತ್ರವಲ್ಲ ಅನೇಕ ಜವಾಬ್ದಾರಿಗಳು ಇರುತ್ತದೆ. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಪ್ರತಿಭಾ ಪುರಸ್ಕಾರ ಪ್ರಶಸ್ತಿಯನ್ನು ಪಡೆಯಲು ಅವಕಾಶ ಸಿಗದೇ ಇರುವ ಶಿಕ್ಷಕರು ಮುಂದಿನ ವರ್ಷಗಳಲ್ಲಿ ಖಂಡಿತವಾಗಿಯೂ ಪ್ರಶಸ್ತಿಯನ್ನು ಪಡೆಯಲು ಆಶಾಭಾವನೆ ಹೊಂದಿರುವಂತೆ ಹೇಳಿದರು.ತುಮಕೂರು ವಿಶ್ವವಿದ್ಯಾನಿಲಯದ ಡೀನ್ ಶಿಕ್ಷಣ ನಿಕಾಯ, ಶಿಕ್ಷಣ ತಜ್ಞರು ವಿಶ್ರಾಂತ ಪ್ರಾಂಶುಪಾಲರಾದ ಡಾ. ಆರ್ ಓಂಬಳೇಶ್ ಘಟ್ಟಿ ಅವರು ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು ಕಾರ್ಯದಕ್ಷತೆಯನ್ನು ಹೆಚ್ಚಿಸುವ ದಿನಾಚರಣೆ ಶಿಕ್ಷಕರ ದಿನಾಚರಣೆಯಾ ಗಿದೆ, ಜ್ಞಾನ ನಿಧಿ, ಶಿಕ್ಷಣ ತಜ್ಞರು, ರಾಜ್ಯನೀತಿ ತಜ್ಞರಾಗಿ ಅಪಾರ ಪಾಂಡಿತ್ಯ ಪಡೆದರು ಹಾಗೂ ಶಿಕ್ಷಣ ವ್ಯವಸ್ಥೆ ಧ್ರುವತಾರೆ ಬೋಧಕರು ಎಂದರೇ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಎಂದು ಹೇಳಿದರು. ಶಿಕ್ಷಕರೆಂದರೆ ಹೇಳುವ ಬೋಧಕರಲ್ಲ ಇತಿಹಾಸವನ್ನು ಸೃಷ್ಟಿಸುವ ಶಿಕ್ಷಕರಾಗಿರುತ್ತಾರೆ, ಪಾರದರ್ಶಕತೆ, ಭದ್ರತೆ ಪ್ರಾಮಾಣಿಕತೆಯಿಂದ ಸಮಾಜದಲ್ಲಿ ಬದಲಾವಣೆಯ ಪುರಸ್ಕೃತರರು ಎಂದರೆ ಶಿಕ್ಷಕರು ಎಂದು ಹೇಳಿದರು.ಜಿಲ್ಲಾಧಿಕಾರಿ ಕೆ ಎಸ್ ಲತಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶುಭಾನ್ವಿತ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶುಭಂ ಶುಕ್ಲಾ, ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪಟೇಲ್ ಶಿವಪ್ಪ, ಹಾಸನ ಜಿಲ್ಲಾ ಗ್ಯಾರೆಂಟಿ ಯೋಜನೆಗಳು ಅನುಷ್ಠಾನ ಸಮಿತಿ ಅಧ್ಯಕ್ಷರಾದ ರಂಜಿತ್ ಜಿ ಆರ್, ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಸಂಘದ ಅಧ್ಯಕ್ಷರಾದ ಕೃಷ್ಣೇಗೌಡ ಹಾಗೂ ಮತ್ತಿತರರು ಉಪಸ್ಥಿತರಿದ್ದರು.===* ಹೇಳಿಕೆ1

ಯಾವುದೇ ಒಬ್ಬ ವ್ಯಕ್ತಿ ದೊಡ್ಡ ಮಟ್ಟಕ್ಕೆ ಏರಬೇಕು ಎಂದರೇ ಅದಕ್ಕೆ ಶಿಕ್ಷಕರು ವಿಶೇಷವಾಗಿ ಕಾರಣ ಕರ್ತರಾಗಿರುತ್ತಾರೆ, ವಿವಿಧ ಒತ್ತಡಗಳು ಇದ್ದರು ಸಹ ಪ್ರಾಮಾಣಿಕವಾಗಿ ಶಿಕ್ಷಕರ ಸೇವೆಯನ್ನು ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು. ಸರ್ಕಾರದ ಯಾವುದೇ ಕೆಲಸ ಇದ್ದರು ಸಹ ಮೊದಲಿಗೆ ಆ ಕಾರ್ಯವನ್ನು ಶಿಕ್ಷಕರಿಗೆ ನೀಡುತ್ತಾರೆ, ಎಸ್. ಎಸ್. ಎಲ್. ಸಿ ಫಲಿತಾಂಶದಲ್ಲಿ ಹಾಸನ ಜಿಲ್ಲೆ ೪ನೇ ಸ್ಥಾನದಲ್ಲಿ ಇದೆ ಮುಂದಿನ ವ? ಮೊದಲನೇ ಸ್ಥಾನದಲ್ಲಿ ಬರಬೇಕು.

ಸ್ವರೂಪ್ ಪ್ರಕಾಶ್, ಶಾಸಕ