ಸಾರಾಂಶ
- ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ಅಭಿಮತಕನ್ನಡಪ್ರಭ ವಾರ್ತೆ ಮೈಸೂರುಸಹಕಾರಿಗಳ ಸೇವಾ ಮನೋಭಾವದಿಂದ ಸಹಕಾರಿ ರಂಗ ಬಲಿಷ್ಠಗೊಳ್ಳಬೇಕಿದೆ. ಬಲಿಷ್ಠ ಸಹಕಾರಿಯಿಂದಲೇ ಜನರಿಗೆ ಸಮರ್ಪಕ ಸೇವೆ ದೊರೆಯಲು ಸಾಧ್ಯ ಎಂದು ಎಂಡಿಎ ಮಾಜಿ ಅಧ್ಯಕ್ಷ ಎಚ್.ವಿ. ರಾಜೀವ್ ತಿಳಿಸಿದರು.
ನಗರದ ಎಂಜಿನಿಯರುಗಳ ಸಂಸ್ಥೆ ಸಭಾಂಗಣದಲ್ಲಿ ಮೈಸೂರು ಜಿಲ್ಲಾ ಛಾಯಾ ಸ್ನೇಹ ಸೌಹಾರ್ದ ಸಹಕಾರಿ ಸಂಘ ನಿಯಮಿತವು ಮಂಗಳವಾರ ಆಯೋಜಿಸಿದ್ದ ಸೌಹಾರ್ದ ಸಹಕಾರಿ ದಿನಾಚರಣೆ, 2024ರ ದಿನಚರಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಸಹಕಾರಿ ರಂಗವು ಜನರ ಬದುಕಲ್ಲಿ ಹಾಸುಹೊಕ್ಕಿದ್ದು, ದುರ್ಬಲ ವರ್ಗದ ಜನರಿಗೆ ಆರ್ಥಿಕ ನೆರವು ನೀಡುವ ಮೂಲಕ ಅವರ ಜೀವನಮಟ್ಟ ಸುಧಾರಿಸುವಲ್ಲಿ ಸಫಲವಾಗಿದೆ. ಸದಸ್ಯರರು ಸಂಘದ ಹೂಡಿಕೆ ಹೆಚ್ಚಿಸಿಕೊಳ್ಳಬೇಕು. ಠೇವಣಿ ಆಂದೋಲನ ನಡೆಸಬೇಕು. ಸಂಘದ ಬೆಳವಣಿಗೆಯಿಂದ ಇತರರಿಗೆ ಪ್ರೇರಣೆಯಾಗುವಂತೆ ಒಗ್ಗಟ್ಟಿನಿಂದ ಕಾರ್ಯ ನಿರ್ವಹಿಸಬೇಕು. ಸಹಕಾರಿ ಸಂಘದ ಅಭಿವೃದ್ಧಿಗೆ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಲು ಬದ್ಧತೆ ತೋರಬೇಕು ಎಂದು ಅವರು ಸಲಹೆ ನೀಡಿದರು.
ಪ್ರಾಂತ್ಯ ವ್ಯವಸ್ಥಾಪಕ ಶಿವಕುಮಾರ್ ಬಿರದಾರ್ ಮಾತನಾಡಿ, ಉಳಿಕೆ, ಗಳಿಕೆ, ಹೂಡಿಕೆ ಸರಿಯಾಗಿ ಇದ್ದಾಗ ಮಾತ್ರ ಸಂಸ್ಥೆ ನಡೆಯಲು ಸಾಧ್ಯವಾಗಿದೆ. ಇದನ್ನು ಅರಿತು ಸದಸ್ಯರು ತಮ್ಮ ಜವಾಬ್ದಾರಿ ನಿಭಾಯಿಸಬೇಕು ಎಂದು ಕಿವಿಮಾತು ಹೇಳಿದರು.ಕೊಡಗು, ಮೈಸೂರು, ಮಂಡ್ಯ ಜಿಲ್ಲಾ ಒಕ್ಕೂಟ ಅಧ್ಯಕ್ಷ ಎಸ್. ನಾರಾಯಣ ರಾವ್ ಮಾತನಾಡಿ, ಸಂಘದ ಸದಸ್ಯರ ಸೇವೆ ನಿರಂತರವಾಗಿರಬೇಕು. ಸಂಘ ಗೃಹ ನಿರ್ಮಾಣ ಪ್ರಾರಂಭಿಸುವಲ್ಲಿ ಹೆಜ್ಜೆ ಇಡುತ್ತಿದೆ. ಈ ಪ್ರಯತ್ನ ಸಫಲವಾಗಲಿ ಎಂದು ಹಾರೈಸಿದರು.
ಛಾಯಾ ಸ್ನೇಹ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಂ.ಎಸ್. ರಾಜೇಂದ್ರಕುಮಾರ್, ಉಪಾಧ್ಯಕ್ಷ ಅಭಿನಂದನ್, ವೆಂಕಟೇಶ್, ರಾಜನ್ ಬಾಬು, ಎಂ.ಎಸ್. ಶ್ರೀನಿಧಿ ಮೊದಲಾದವರು ಇದ್ದರು.