ಶ್ರೀರಂಗಪಟ್ಟಣದ ಶ್ರೀಕೃಷ್ಣರಾಜೇಂದ್ರ ಸಹಕಾರ ಸಂಘವು ಕಳೆದ ಹಲವು ವರ್ಷಗಳಿಂದ ಸುಧೀರ್ಘವಾಗಿ ಲಾಭದಿಂದ ನಡೆಯುತ್ತಿದೆ. ಇದಕ್ಕೆ ಆಡಳಿತ ಮಂಡಳಿ ಪಾರದರ್ಶಕ ಆಡಳಿತವೇ ಕಾರಣ. ಮುಖ್ಯವಾಗಿ ಸಕಾಲದಲ್ಲಿ ಸಹಕಾರ ಶಿಕ್ಷಣ ನಿಧಿಯನ್ನು ಪಾವತಿ ಜಿಲ್ಲೆಯಲ್ಲಿಯೇ ಮಂಚೂಣಿ ಸ್ಥಾನದಲ್ಲಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಸಹಕಾರ ಕ್ಷೇತ್ರ ರೈತರು, ಕಾರ್ಮಿಕರು ಮತ್ತು ಮಧ್ಯಮ ವರ್ಗದ ಶ್ರಮಿಕರ ಬೆನ್ನೆಲುಬಾಗಿ ಅವರ ಹಿತಕಾಯಲು ಗಣನೀಯವಾಗಿ ಮೈಲಿಗಲ್ಲು ಸಾಧಿಸಿದೆ ಎಂದು ಜಿಲ್ಲಾ ಸಹಕಾರ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಎಂ.ನಂದೀಶ್ ತಿಳಿಸಿದರು.ಪಟ್ಟಣದ ಶತಮಾನೋತ್ಸವ ಆಚರಿಸಿಕೊಂಡ ಶ್ರೀಕೃಷ್ಣರಾಜೇಂದ್ರ ಸಹಕಾರ ಸಂಘದ ಕಚೇರಿ ಆವರಣದಲ್ಲಿ ನಡೆದ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಸಾಮಾನ್ಯ ಜನರ ಸಂಘಟನೆ, ಸಂವರ್ಧನೆಗೊಳಿಸಿ ಆರ್ಥಿಕ ಸ್ಥಿತಿ ಸುಧಾರಿಸುವ ಮೂಲಕ ಸುಸ್ಥಿತಿಯ ಜೀವನಕ್ಕೆ ಕೊಂಡೊಯ್ಯುವಲ್ಲಿ ಸಹಕಾರ ಕ್ಷೇತ್ರ ಪಾತ್ರ ಗಣನೀಯವಾಗಿದೆ ಎಂದರು.
ಪಟ್ಟಣದ ಶ್ರೀಕೃಷ್ಣರಾಜೇಂದ್ರ ಸಹಕಾರ ಸಂಘವು ಕಳೆದ ಹಲವು ವರ್ಷಗಳಿಂದ ಸುಧೀರ್ಘವಾಗಿ ಲಾಭದಿಂದ ನಡೆಯುತ್ತಿದೆ. ಇದಕ್ಕೆ ಆಡಳಿತ ಮಂಡಳಿ ಪಾರದರ್ಶಕ ಆಡಳಿತವೇ ಕಾರಣ. ಮುಖ್ಯವಾಗಿ ಸಕಾಲದಲ್ಲಿ ಸಹಕಾರ ಶಿಕ್ಷಣ ನಿಧಿಯನ್ನು ಪಾವತಿ ಜಿಲ್ಲೆಯಲ್ಲಿಯೇ ಮಂಚೂಣಿ ಸ್ಥಾನದಲ್ಲಿದೆ ಎಂದು ಶ್ಲಾಘೀಸಿದರು.ಸಂಘದ ಅಧ್ಯಕ್ಷ ವಸಂತ್ ಕುಮಾರ್ ಸಂಘದ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆ ವತಿಯಿಂದ ಪಾವತಿಸುವ ಸಹಕಾರ ಶಿಕ್ಷಣ ನಿಧಿ ಚೆಕ್ ಅನ್ನು ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷ ಎಂ.ನಂದೀಶ್ ಅವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮಂಡ್ಯ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಸೋಮಸುಂದರ್, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಎಂ.ಎಲ್.ದಿನೇಶ್ ಹಾಗೂ ನಿಮಿಷಾಂಬ ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್.ಎಂ.ದಯಾನಂದ್ ಅವರುಗಳನ್ನು ಅಭಿನಂದಿಸಿ ಸನ್ಮಾನಿಸಲಾಯಿತು.ಈ ವೇಳೆಸಂಘದ ಉಪಾಧ್ಯಕ್ಷ ನಾರಾಯಣಸ್ವಾಮಿ, ನಿರ್ದೇಶಕರಾದ ಎಸ್.ರಘು, ಉಮೇಶ್, ಲಕ್ಷ್ಮಣ್ ಸಿಂಗ್, ಕುಬೇರ್ ಸಿಂಗ್, ಪರಮೇಶ್, ಎಸ್.ಟಿ.ರಾಜು, ಮಹದೇವನಾಯಕ ಇತರರು ಉಪಸ್ಥಿತರಿದ್ದರು.
ಸಾಲ ಮರುಪಾವತಿಯಿಂದ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ: ಡಾಲು ರವಿಕೆ.ಆರ್.ಪೇಟೆ:ಸಹಕಾರ ಸಂಘಗಳ ಮೂಲಕ ಶೇರುದಾರ ರೈತರು ತಾವು ಪಡೆದ ಸಾಲವನ್ನು ಸಕಾಲದಲ್ಲಿ ಮರುಪಾವತಿ ಮಾಡಿದರೆ ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮನ್ಮುಲ್ ನಿರ್ದೇಶಕ ಡಾಲು ರವಿ ಹೇಳಿದರು.
ತಾಲೂಕಿನ ರಂಗನಾಥಪುರ/ಹರಪನಹಳ್ಳಿ ಕ್ರಾಸ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರ ಕ್ಷೇತ್ರವು ಬಲಗೊಳ್ಳಬೇಕು. ಪ್ರತಿಯೊಬ್ಬರು ಸಹಕರ ತತ್ವದಡಿ ಕೆಲಸ ಮಾಡಿದರೆ ಅದರ ಫಲವು ನೇರವಾಗಿ ರೈತರಿಗೆ ತಲುಪುತ್ತದೆ ಎಂದರು.ರಾಜಕಾರಣವು ಎಲ್ಲಾ ಕ್ಷೇತ್ರಗಳಲ್ಲಿ ಪ್ರವೇಶ ಮಾಡುವುದರಿಂದ ಸಹಕಾರಿ ಸಂಸ್ಥೆಗಳಿಗೆ ಹಿನ್ನಡೆಯಾಗಿದೆ. ಸಹಕಾರ ಸಂಸ್ಥೆಗಳು ಬಲಗೊಳ್ಳಬೇಕು ಎಂಬ ಸದುದ್ದೇಶದಿಂದಲೆ ಚುನಾವಣೆಯು ಪಕ್ಷಗಳ ಹೊರತಾಗಿ ನಡೆಯುತ್ತದೆ. ಆದಷ್ಟು ಆಡಳಿತ ಮಂಡಳಿಯನ್ನು ಅನುಭವದ ಆಧಾರದ ಮೇಲೆ ಆರಿಸಿಕೊಂಡರೆ ಸಂಸ್ಥೆ ಬೆಳೆಯುತ್ತದೆ ಎಂದರು.ಬಹಳ ಶ್ರಮದಿಂದ ಸಂಘವನ್ನು ಸ್ಥಾಪಿಸಲಾಗಿದೆ. ಇದರ ಉಳಿವಿಗೆ ಎಲ್ಲರೂ ಶ್ರಮಿಸಬೇಕು. ಯಾವುದೆ ರೀತಿಯಲ್ಲಿಯೂ ಭಿನ್ನಾಭಿಪ್ರಾಯವನ್ನು ಹೊಂದಬಾರದು. ಸಮಸ್ಯೆಗಳಿದ್ದರೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.ಈ ವೇಳೆ ಆಡಳಿತ ಮಂಡಳಿ ನಿರ್ದೇಶಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.