ಕೃಷಿ ಏಳಿಗೆಯಲ್ಲಿ ಸಹಕಾರ ಕ್ಷೇತ್ರ ಮಹತ್ವದ ಪಾತ್ರ

| Published : Nov 25 2025, 02:15 AM IST

ಕೃಷಿ ಏಳಿಗೆಯಲ್ಲಿ ಸಹಕಾರ ಕ್ಷೇತ್ರ ಮಹತ್ವದ ಪಾತ್ರ
Share this Article
  • FB
  • TW
  • Linkdin
  • Email

ಸಾರಾಂಶ

ರೈತರ, ಜನಸಾಮಾನ್ಯರ ಆರ್ಥಿಕ ಸ್ಥಿತಿ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರ ಮಹತ್ತರ ಪಾತ್ರ ವಹಿಸಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಹಕಾರ ಕ್ಷೇತ್ರವು ಎಲ್ಲ ಕಡೆಯಲ್ಲಿ ಪಸರಿಸಿದೆ ಎಂದು ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಹನುಮನಹಳ್ಳಿ ಬಿ.ಜಿ.ಬಸವರಾಜಪ್ಪ ಹೇಳಿದ್ದಾರೆ.

- ಸುರಹೊನ್ನೆಯಲ್ಲಿ ಸಹಕಾರ ಸಪ್ತಾಹ ಸಮಾರೋಪದಲ್ಲಿ ಬಿ.ಜಿ.ಬಸವರಾಜಪ್ಪ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ರೈತರ, ಜನಸಾಮಾನ್ಯರ ಆರ್ಥಿಕ ಸ್ಥಿತಿ ಅಭಿವೃದ್ಧಿಯಲ್ಲಿ ಸಹಕಾರ ಕ್ಷೇತ್ರ ಮಹತ್ತರ ಪಾತ್ರ ವಹಿಸಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಹಕಾರ ಕ್ಷೇತ್ರವು ಎಲ್ಲ ಕಡೆಯಲ್ಲಿ ಪಸರಿಸಿದೆ ಎಂದು ಶಿವಮೊಗ್ಗ ಹಾಲು ಒಕ್ಕೂಟದ ನಿರ್ದೇಶಕ ಹನುಮನಹಳ್ಳಿ ಬಿ.ಜಿ.ಬಸವರಾಜಪ್ಪ ಹೇಳಿದರು.

ಜಿಲ್ಲಾದ್ಯಂತ ಅಖಿಲ ಭಾರತ 72ನೇ ಸಹಕಾರ ಸಪ್ತಾಹ ಅಂಗವಾಗಿ ನ್ಯಾಮತಿ ತಾಲೂಕಿನ ಸುರಹೊನ್ನೆಯಲ್ಲಿ ಇತ್ತೀಚೆಗೆ ನಡೆದ ಸಹಕಾಋ ಸಪ್ತಾಹ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಬಾರ್ಡ್ ಪ್ರತಿನಿಧಿ ರಶ್ಮಿರೇಖಾ ಪ್ರಾಸ್ತಾವಿಕವಾಗಿ ಮಾತನಾಡಿ, ಕೇಂದ್ರ ಸರ್ಕಾರವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಸ್ವಯತ್ತ ಸಂಸ್ಥೆಗಳನ್ನಾಗಿ ಮಾಡುವ ಸದುದ್ದೇಶದಿಂದ ವಿವಿಧೋದ್ದೇಶ ಸಹಕಾರ ಸಂಘಗಳನ್ನಾಗಿ ಪರಿವರ್ತಿಸಿದೆ. ಸದರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮುಖಾಂತರ ರೈತರಿಗೆ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಹಲವಾರು ಸೌಲಭ್ಯಗಳನ್ನು ನೇರವಾಗಿ ತಲುಪುವಂತೆ ಗಣಕೀಕರಣಗೊಳಿಸಲಾಗಿದೆ ಎಂದರು.

ದಾವಣಗೆರೆ ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕ ಕೆ.ಎಚ್. ಷಣ್ಮುಖಪ್ಪ ಮಾತನಾಡಿ, ಸಹಕಾರಿ ಕ್ಷೇತ್ರದ ಮೂಲಕ ಮಾತ್ರ ಸಂಪೂರ್ಣ ಪ್ರಯೋಜನ ರೈತ ಸಮುದಾಯಕ್ಕೆ ಲಭ್ಯವಾಗಲು ಸಾಧ್ಯ. ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಯಾವುದೇ ವಲಯವಾದರೂ ಯಶಸ್ಸನ್ನು ಕಾಣಬೇಕಾದರೆ ಸಹಭಾಗಿತ್ವ ಅತ್ಯಗತ್ಯ. ಸಹಕಾರಿ ಕ್ಷೇತ್ರ ಕೇವಲ ಕೃಷಿಗೆ ಮಾತ್ರ ಸೀಮಿತವಾಗದೇ ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪು ಮೂಡಿಸಿದೆ ಎಂದು ಹೇಳಿದರು.

ಜಿಲ್ಲಾ ಸಹಕಾರ ಒಕ್ಕೂಟ ಅಧ್ಯಕ್ಷ ಸಿರಿಗೆರೆ ರಾಜಣ್ಣ ಮಾತನಾಡಿ, ಸಹಕಾರ ಸಂಘಗಳ ಆಡಳಿತ ಮಂಡಳಿ ಮತ್ತು ನೌಕರರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಬೇಕು. ರೈತರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಸಹಕಾರ ಸಂಘಗಳ ಅಭಿವೃದ್ಧಿ ಸಾಧ್ಯ. 7 ದಿನಗಳ ಕಾಲ ಜಿಲ್ಲಾದ್ಯಂತ 72ನೇ ಸಹಕಾರ ಸಪ್ತಾಹ ಯಶಸ್ವಿಯಾಗಿ ಜರುಗಿದೆ ಎಂದರು.

ಸುರಹೊನ್ನೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೆ.ತೀರ್ಥಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಒಕ್ಕೂಟದ ಉಪಾಧ್ಯಕ್ಷೆ ಮಂಜುಳ ಗಣೇಶ್, ಹೊನ್ನಾಳಿ ಶಿವ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಂದ್ರಪ್ಪ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ಗಣೇಶ್, ಹಾಲು ಉತ್ಪಾದಕರ ಸಹಕಾರ ಸಂಘಗಳ ನೌಕರರ ಸಂಘದ ಅಧ್ಯಕ್ಷ ಆರ್. ಸಂಜೀವಕುಮಾರ, ಡಿಸಿಸಿ ಬ್ಯಾಂಕ್ ಕ್ಷೇತ್ರಾಧಿಕಾರಿ ಬಿ.ಪಿ. ವಿಜಯಕುಮಾರ್, ಎ.ಲೋಕೇಶ್, ಪಿ.ಜಿ.ಪಾಲಾಕ್ಷಿ, ಎಚ್.ಬಿ. ಸುರೇಶ್, ಶಿಮುಲ್ ವ್ಯವಸ್ಥಾಪಕ ಕೆ.ಎಂ. ಜಗದೀಶ್, ಉಪ ವ್ಯವಸ್ಥಾಪಕ ಡಾ.ಸಂಜಯ್ ವಿಸ್ತರಣಾಧಿಕಾರಿ ಎನ್.ಶ್ವೇತಾ, ಗುಂಡಪ್ಪ ಯರಗಟ್ಟಿ, ವಸಂತಕುಮಾರ ಉಪಸ್ಥಿತರಿದ್ದರು.

ಯೂನಿಯನ್ ಪ್ರಭಾರ ಸಿಇಒ ಕೆ.ಎಚ್. ಸಂತೋಷ್‌ಕುಮಾರ ಸ್ವಾಗತಿಸಿದರು. ಹೊನ್ನಾಳಿಯ ಶಿವ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ವ್ಯವಸ್ಥಾಪಕ ಎಚ್.ಎನ್. ರುದ್ರೇಶ್ ವಂದಿಸಿದರು.

- - -

(ಕೋಟ್‌) ಎಲ್ಲರೂ ಒಬ್ಬನಿಗಾಗಿ, ಒಬ್ಬನು ಎಲ್ಲರಿಗಾಗಿ ಎಂಬ ಸಹಕಾರದ ತತ್ವದಡಿ ಸಹಕಾರ ಸಂಘಗಳು ಜನ್ಮತಾಳಿದ್ದು, ಸಹಕಾರ ಸಂಘಗಳ ತತ್ವ ಮೌಲ್ಯಗಳನ್ನು ಮರೆತರೆ ಸಂಘಗಳು ವಿನಾಶದ ಹಂಚಿಗೆ ಬಂದು ನಿಲ್ಲುತ್ತವೆ.

- ಎಂ.ಜಿ. ಷಣ್ಮುಖಪ್ಪ, ನಿರ್ದೇಶಕ.

- - -

-23ಕೆಡಿವಿಜಿ41:

ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕು ಸುರಹೊನ್ನೆಯಲ್ಲಿ ನಡೆದ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭವನ್ನು ಬಿ.ಜಿ.ಬಸವರಾಜಪ್ಪ ಉದ್ಘಾಟಿಸಿದರು.