ನಮ್ಮ ಸನಾತನ ಸಂಸ್ಕೃತಿ ಅತ್ಯಂತ ಬಲಿಷ್ಟವಾದುದು. ಆದರೇ ಮೆಕಾಲೆ ಶಿಕ್ಷಣದಿಂದ ನಮ್ಮಮನೆಯೊಳಗೂ ವಿಭಜನೆಯ ಕಾನೂನು ಬಂತು. ನಮ್ಮ ಸಂಸ್ಕೃತಿಯನ್ನು ನಾವೇ ಹಾಳು ಮಾಡಿದ್ದೇವೆ. ಆದ್ದರಿಂದ ಮನೆಯ ಸಂಸ್ಕಾರ, ವ್ಯವಸ್ಥೆ ಸದೃಢವಾಗಬೇಕಾದರೆ ನಾವು ಎಚ್ಚರಗೊಳ್ಳಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರನಂದ ಸ್ವಾಮೀಜಿ ನುಡಿದರು.
ಕಾಪು: ನಮ್ಮ ಸನಾತನ ಸಂಸ್ಕೃತಿ ಅತ್ಯಂತ ಬಲಿಷ್ಟವಾದುದು. ಆದರೇ ಮೆಕಾಲೆ ಶಿಕ್ಷಣದಿಂದ ನಮ್ಮಮನೆಯೊಳಗೂ ವಿಭಜನೆಯ ಕಾನೂನು ಬಂತು. ನಮ್ಮ ಸಂಸ್ಕೃತಿಯನ್ನು ನಾವೇ ಹಾಳು ಮಾಡಿದ್ದೇವೆ. ಆದ್ದರಿಂದ ಮನೆಯ ಸಂಸ್ಕಾರ, ವ್ಯವಸ್ಥೆ ಸದೃಢವಾಗಬೇಕಾದರೆ ನಾವು ಎಚ್ಚರಗೊಳ್ಳಬೇಕು ಎಂದು ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖರನಂದ ಸ್ವಾಮೀಜಿ ನುಡಿದರು.
ಅವರು ಪಡುಬೆಳ್ಳೆ ಶ್ರೀಮಹಾಲಿಂಗೇಶ್ವರ ದೇವಳದ ಸಭಾಂಗಣದಲ್ಲಿ ವಿಶ್ವಹಿಂದು ಪರಿಷದ್, ಪಡುಬೆಳ್ಳೆ ಬಜರಂಗದಳ ರಜತ ಸಂಭ್ರಮ ಸಮಾರಂಭದ ಸಾನಿಧ್ಯ ವಹಿಸಿ ಆಶೀರ್ವನ ನೀಡುತ್ತಿದ್ದರು. ಪ್ರತೀಮನೆಗಳಲ್ಲಿಯೂ ಕನಿಷ್ಠ ಮೂರು ಮಕ್ಕಳು ಇರಬೇಕು. ಸಮಾಜ ಸಂಘಟನೆಗಳು ಬೆಳೆಯಲು ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬರಬೇಕು ಎಂದರು.ಕುಟುಂಬ ಜೀವನ ಗಟ್ಟಿಯಾಗಬೇಕು. ಉಚಿತಗಳು ಸಮಾಜವನ್ನೇ ನಶ್ವರ ಮಾಡುತ್ತಿವೆ. ಹಿಂದೂ ಸಂಘಟನೆಗಳಿಗೆ ಸದಾ ಪ್ರೋತ್ಸಾಹ ನೀಡಬೇಕು. ಹಿಂದುಗಳು ಸಂಘಟಿತರಾದಾಗ ದೇಶ ಬಲಿಷ್ಠಗೊಳ್ಳುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಡುಬೆಳ್ಳೆ ವಿಶ್ವ ಹಿಂದು ಪರಿಷದ್ ಸ್ಥಾಪಕ ಅಧ್ಯಕ್ಷ ಬೆಳ್ಳೆ ದೊಡ್ಡಮನೆ ಅಜಿತ್ ಪುಷ್ಕರ ಶೆಟ್ಟಿ ಮಾತನಾಡಿ ಈ ಭಾಗದಲ್ಲಿ ಸಂಘಟನೆಯನ್ನು ಸ್ಥಾಪಿಸಲು ದಿ.ಕಮಲಾಕ್ಷ ಶೆಣೈ, ಪಾಂಗಾಳ ಪಾಂಡುರಂಗ ಶ್ಯಾನುಭಾಗ್, ಪುಂಡಲೀಕ ಮರಾಠೆ ಸಹಿತ ಅನೇಕ ಹಿರಿಯರು ಪ್ರೋತ್ಸಾಹಿಸಿದ್ದಾರೆ. ಜೊತೆಗೆ ಅನೇಕ ಪ್ರತಿರೋಧಗಳನ್ನೂ ಎದುರಿಸಿ, ನಿರಂತರ ಜಾತಿಮತಧರ್ಮಗಳ ಭೇಧವಿಲ್ಲದೆ ಸಮಾಜಮುಖಿಯಾಗಿ ಹತ್ತುಹಲವು ಯೋಜನೆಗಳನ್ನು ರೂಪಿಸಿ ಸಾರ್ವಜನಿಕರ ಪ್ರೀತಿ, ಪ್ರೋತ್ಸಾಹವನ್ನು ಗಳಿಸಿದ್ದೇವೆ ಎಂದರು. ಪಡುಬೆಳ್ಳೆ ವಿಹಿಂಪ ಸ್ಥಾಪಕ ಕಾರ್ಯದರ್ಶಿ ಶ್ರೀಶ ಸಾಮಗ ಪ್ರಾಸ್ತಾವಿಕ ಮಾತುಗಳಲ್ಲಿ ಈ ಸಂಘಟನೆ ಬೆಳೆದುಬಂದ ಸನ್ನಿವೇಶವನ್ನು ವಿವರಿಸಿದರು. ಮುಖ್ಯ ಅತಿಥಿಗಳಾಗಿ ವಿಹಿಂಪ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಸಂಘಟನೆಯ ಸ್ಥಾಪನೆಗೆ ಮಾರ್ಗದರ್ಶನ ನೀಡಿದ ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ, ಕಟ್ಟಿಂಗೇರಿ ಶ್ರೀಮಹಾಲಿಂಗೇಶ್ವರ ದೇವಳದ ಆಡಳಿತ ಧರ್ಮದರ್ಶಿ ಕೆ.ದೇವದಾಸ್ ಹೆಬ್ಬಾರ್ ಮಾತನಾಡಿದರು. ಕಾರ್ಯದರ್ಶಿ ವಿಘ್ನೇಶ್ ದೇವಾಡಿಗ ವರದಿ ಓದಿದರು. ವೇದಿಕೆಯಲ್ಲಿ ಪಡುಬೆಳ್ಳೆ ವಿಶ್ವ ಹಿಂದು ಪರಿಷದ್ ಅಧ್ಯಕ್ಷ ವಿಕಾಸ್ ಪೂಜಾರಿ, ಉಪಾಧ್ಯಕ್ಷ ಉದಯ ಆಚಾರ್ಯ, ಕೋಶಾಧಿಕಾರಿ ಅವಿನಾಶ್ ಆಚಾರ್ಯ, ಭಜರಂಗ ದಳದ ಸಂಚಾಲಕ ದಿವಾಕರ ಆಚಾರ್ಯ ಉಪಸ್ಥಿತರಿದ್ದರು. ಸಂಧ್ಯಾ ಶೆಟ್ಟಿ ಸ್ವಾಗತಿಸಿದರು. ರಾಶಿ ಶೆಟ್ಟಿ ಪ್ರಾರ್ಥಿಸಿದರು, ಬೆಳ್ಳೆ ನಡಿಮನೆ ವಿಶ್ವನಾಥ್ ಶೆಟ್ಟಿ ಧನ್ಯವಾದವಿತ್ತರು. ಗೌರವಾಧ್ಯಕ್ಷ ಬೆಳ್ಳೆ ಮಧ್ವರಾಜ ಭಟ್, ಹಿರಿಯರಾದ ಬೆಳ್ಳೆ ಸದಾನಂದ ಶೆಣೈ,ಗೌರವ ಸಲಹೆಗಾರರಾದ ಪರಶುರಾಮ ಭಟ್, ಸಂತೋಷ್ ಕುಲಾಲ್, ರಾಕೇಶ್ ಆಚಾರ್ಯ ಪಡುಬೆಳ್ಳೆ, ಸಹ ಕಾರ್ಯದರ್ಶಿ ಮಧುಕರ್ ಕುಲಾಲ್, ಭಜರಂಗದಳ ಸಹ ಸಂಚಾಲಕ ಕಿರಣ್ ದೇವಾಡಿಗ,ಸಾಮರಸ್ಯ ಪ್ರಮುಖ್ ರಾಘವೇಂದ್ರ ಶೆಟ್ಟಿ, ಧರ್ಮಪ್ರಸಾರಕ್ ಶಶಿಕಾಂತ್ ಕುಕ್ಯಾನ್, ಮಠ ಮಂದಿರ ಪ್ರಮುಖ್ ಮಹೇಶ್ ಪೂಜಾರಿ, ಗೋರಕ್ಷಕ್ ಪ್ರಮುಖ್ ಸುನಿಲ್ ದೇವಾಡಿಗ, ವಿದ್ಯಾರ್ಥಿ ಪ್ರಮುಖ್ ಸುದೀಪ್ ದೇವಾಡಿಗ, ಉಪಸ್ಥಿತರಿದ್ದರು. ೫ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಧಾರ್ಮಿಕ ಅನುಷ್ಠಾನಗಳು ವೇದಮೂರ್ತಿ ಮಧ್ವರಾಜ ಭಟ್ ಪಡುಬೆಳ್ಳೆ ಇವರ ನೇತೃತ್ವದಲ್ಲಿ ನಡೆಯಿತು. ಶ್ರೀಮಹಾಲಿಂಗೇಶ್ವರ ದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಬೆಂಕಿನಾಥೇಶ್ವರ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಶ್ರೀದೇವಿ ಅಗ್ನಿ ಕಲ್ಲುರ್ಟಿ ಯಕ್ಷಗಾನ ಬಯಲಾಟ ಜರುಗಿತು.