ಸಾರಾಂಶ
ಕನಕಪುರ: ಮಾಜಿ ಪ್ರಧಾನ ಮಂತ್ರಿ, ಜೆಡಿಎಸ್ ವರಿಷ್ಠ ದೇವೇಗೌಡರ 92 ನೇ ಹುಟ್ಟುಹಬ್ಬವನ್ನು ತಾಲೂಕಾದ್ಯಂತ ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು, ಕಾರ್ಯಕರ್ತರು ಸಂಭ್ರಮದಿಂದ ಆಚರಿಸಿದರು. ಸಾತನೂರು ಹೋಬಳಿಯ ವೆಂಕಟರಾಯರದೊಡ್ಡಿಯ ಕುರುಬಳ್ಳಿ ಗ್ರಾಮದಲ್ಲಿನ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಿದ ಪಕ್ಷದ ಮುಖಂಡರು, ಕಾರ್ಯಕರ್ತರು ದೇವೇಗೌಡರಿಗೆ ಆರೋಗ್ಯ, ಆಯಸ್ಸು ನೀಡಲಿ ಎಂದು ಪ್ರಾರ್ಥನೆ ಸಲ್ಲಿಸಿ ಕೇಕ್ ಕತ್ತರಿಸಿ ಸಿಹಿ ವಿತರಿಸಿ ಸಂಭ್ರಮಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಟಿ.ನಾಗರಾಜು ಮಾತನಾಡಿ, ಈ ದೇಶಕಂಡ ಅತ್ಯಂತ ಚತುರರಾಜಕಾರಣಿಗಳಲ್ಲಿ ಒಬ್ಬರಾಗಿರುವ ನಮ್ಮ ವರಿಷ್ಠ ದೇವೇಗೌಡರಿಗೆ ದೇವರು ಆರೋಗ್ಯ, ಆಯಸ್ಸು ನೀಡುವ ಮೂಲಕ ರಾಜ್ಯ ಹಾಗೂ ದೇಶಕ್ಕೆ ಅವರ ಮಾರ್ಗದರ್ಶನ ದೊರೆಯಲಿ, ದೇಶದ ಪ್ರಧಾನಿಯಾದ ದಕ್ಷಿಣ ಭಾರತದ ಕನ್ನಡಿಗನಿಗೆ ಸಿಕ್ಕ ಅವಕಾಶ
ವನ್ನು ಈ ದೇಶದ ಬಡವರ, ರೈತರ ಹಾಗೂ ಕಾರ್ಮಿಕರಿಗಾಗಿ ಮೀಸಲಿಟ್ಟು ತಮ್ಮ ದೂರದೃಷ್ಟಿ ಹಾಗೂ ಜನಪರ ಕಾಳಜಿ ಯಿಂದ ದೇಶದ ಉದ್ದಗಲಕ್ಕೂ ನೀರಾವರಿ ಯೋಜನೆಯನ್ನು ಅನುಷ್ಠಾನಗೊಳಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದು ತಿಳಿಸಿದರು,ರಾಜ್ಯದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯಲ್ಲಿ ಕೈಗೊಂಡ ನೀರಾವರಿ ಯೋಜನೆಗಳಿಂದ ಇಂದು ಗ್ರಾಮದ ಎಲ್ಲಾ ಕೆರೆಗಳು ತುಂಬಲು ಸಾಧ್ಯವಾಗಿದೆ. ಈ ವಯಸ್ಸಿನಲ್ಲೂ ಸಹ ರೈತರಪರ ಧ್ವನಿ ಎತ್ತುವ ನಾಯಕ ಎಂದರೆ ಅದು ದೇವೇಗೌಡರು ಮಾತ್ರ. ಅವರ ರಾಜಕೀಯ ನಡೆ, ದೂರದೃಷ್ಟಿ ಚಿಂತನೆಗಳಿಗೆ ಮನಸೋತು ದೇಶದ ಪ್ರಧಾನಿ ನರೇಂದ್ರ ಮೋದಿಯವರು ಅವರಿಗೆ ಗೌರವ ಕೊಟ್ಟು ಪ್ರತಿಯೊಂದು ವಿಚಾರದಲ್ಲೂ ಅವರ ಸಲಹೆ ಪಡೆಯುತ್ತಿರುವುದೇ ಇದಕ್ಕೆ ಸಾಕ್ಷಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಆಶ್ವಥ್ ನಾರಯಣ್, ಶಿವಗೂಳಿಗೌಡ, ಜೆಡಿಎಸ್ ಮುಖಂಡ ಅನುಕುಮಾರ್, ಕಿರಣ್, ಶೇಖರ್, ರಾಜಶೇಖರ್, ರಾಕಿ, ಮೂರ್ತಿ, ಗ್ರಾಪಂ ಸದಸ್ಯ ಸಮೀರ್, ರಾಮಣ್ಣ ಸೇರಿದಂತೆ ಎನ್‌ಡಿಎ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡಿದ್ದರು.ಕೆ ಕೆ ಪಿ ಸುದ್ದಿ 02:
ಸಾತನೂರು ಹೋಬಳಿಯ ವೆಂಕಟರಾಯರದೊಡ್ಡಿಯ ಕುರುಬಳ್ಳಿ ಗ್ರಾಮದಲ್ಲಿನ ಶ್ರೀ ವೀರಭದ್ರೇಶ್ವರ ಸ್ವಾಮಿ ದೇವಾಲಯದಲ್ಲಿ ದೇವೇಗೌಡರ ಹುಟ್ಟುಹಬ್ಬದ ಪ್ರಯುಕ್ತ ಜೆಡಿಎಸ್ ಮುಖಂಡರು, ಕಾರ್ಯಕರ್ತರು ವಿಶೇಷ ಪೂಜೆ ಸಲ್ಲಿಸಿದರು.