ಕಾರ್ಮಿಕರ ಶ್ರಮದಿಂದ ದೇಶದ ಆರ್ಥಿಕತೆ ಸಬಲ

| Published : May 02 2025, 12:09 AM IST

ಸಾರಾಂಶ

ದೇಶದಲ್ಲಿ ಕಾರ್ಮಿಕರ ಶಕ್ತಿ ದೊಡ್ಡದು. ಅದರಲ್ಲೂ ನರೇಗಾ ಕೂಲಿಕಾರರು ನಿಯಮಿತವಾಗಿ ದುಡಿಯುವ ಮೂಲಕ ತಮ್ಮ ಕುಟುಂಬಕ್ಕೆ ಹಿರೋ ಆಗಿದ್ದಾರೆ. ನರೇಗಾ ಯೋಜನೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ಕೂಲಿ, ಮಹಿಳಾ ಭಾಗವಹಿಸುವಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ.

ಕುಕನೂರು:

ದೇಶದ ಆರ್ಥಿಕ ಸಬಲತೆಗೆ ಕಾರ್ಮಿಕರ ಶ್ರಮದ ದುಡಿಮೆ ಕಾರಣ ಎಂದು ತಾಪಂ ಐಒಸಿ ಸಂಯೋಜಕ ಲಕ್ಷ್ಮಣ ಕೆರಳ್ಳಿ ಹೇಳಿದರು.

ತಾಲೂಕಿನ ಚಿಕೇನಕೊಪ್ಪ ಗ್ರಾಮದ ನಾಲಾ ಸುಧಾರಣಾ ಕಾಮಗಾರಿ ಸ್ಥಳದಲ್ಲಿ ಜರುಗಿದ ವಿಶ್ವ ಕಾರ್ಮಿಕ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಕಾರ್ಮಿಕರ ಶಕ್ತಿ ದೊಡ್ಡದು. ಅದರಲ್ಲೂ ನರೇಗಾ ಕೂಲಿಕಾರರು ನಿಯಮಿತವಾಗಿ ದುಡಿಯುವ ಮೂಲಕ ತಮ್ಮ ಕುಟುಂಬಕ್ಕೆ ಹಿರೋ ಆಗಿದ್ದಾರೆ. ನರೇಗಾ ಯೋಜನೆಯಲ್ಲಿ ಸಮಾನ ಕೆಲಸಕ್ಕೆ ಸಮಾನ ಕೂಲಿ, ಮಹಿಳಾ ಭಾಗವಹಿಸುವಿಕೆಗೆ ಹೆಚ್ಚಿನ ಆದ್ಯತೆ, ಹಿರಿಯ ನಾಗರೀಕರು, ವಿಶೇಷ ಚೇತನರಿಗೆ ಅರ್ಧ ಕೆಲಸ ಪೂರ್ತಿ ಕೂಲಿ, ಕೆಲಸ ಕೇಳಿದ 15 ದಿನದೊಳಗೆ ಕೆಲಸ. ಹೀಗೆ ಹಲವಾರು ಹಕ್ಕುಗಳನ್ನು ನೀಡಿದೆ ಎಂದರು.

ಮುಖಂಡ ಕನಕಪ್ಪ ಚಲವಾದಿ ಮಾತನಾಡಿ, ಸ್ವತಂತ್ರ ಭಾರತದ ಮೊದಲ ಕಾರ್ಮಿಕ ಸಚಿವರಾದ ಬಾಬು ಜಗಜೀವನ್ ರಾಮ್ ಅವರು ಕಾರ್ಮಿಕರ ಕಲ್ಯಾಣಕ್ಕಾಗಿ ಕನಿಷ್ಠ ವೇತನ, ಭವಿಷ್ಯ ನಿಧಿ, ರಾಜ್ಯ ವಿಮಾ ನಿಧಿ ಘೋಷಿಸಿ ಕಾರ್ಮಿಕರು ಮತ್ತು ಮಾಲೀಕರ ಮಧ್ಯೆ ಉತ್ತಮ ಬಾಂಧವ್ಯ ಏರ್ಪಡುವಂತೆ ಮಾಡಿದರು ಎಂದು ಹೇಳಿದರು.

ಪತ್ರಕರ್ತ ಮಲ್ಲು ಮಾಟರಂಗಿ ಮಾತನಾಡಿ, ಕಾರ್ಮಿಕರು ಸರ್ಕಾರದ ನಿಯಮಾವಳಿಗೆ ಬದ್ಧರಾಗಿ ಕೆಲಸ ಮಾಡಿದಲ್ಲಿ ಅಧಿಕಾರಿಗಳು ಕಾರ್ಮಿಕರ ಹಿತಾಸಕ್ತಿ ಕಾಪಾಡುವಲ್ಲಿ ಮುಂದಾಗುತ್ತಾರೆ. ಕಾಮಗಾರಿ ಸ್ಥಳದಲ್ಲಿ ಭಿನ್ನಾಭಿಪ್ರಾಯ ಇದ್ದರೂ ಅದು ಕೆಲಸಕ್ಕೆ ಮಾತ್ರ ಸೀಮಿತವಾಗಲಿ. ವೈಯಕ್ತಿಕವಾಗಿ ಬೇಡ ಎಂದ ಅವರು, ಚಿಕೇನಕೊಪ್ಪ ಚೆನ್ನವೀರ ಶರಣರ ನಾಡು, ಜ್ಞಾನಾಂಮೃತವನ್ನು ಜಗತ್ತಿಗೆ ನೀಡಿದ ನಾಡಾಗಿದ್ದು ನಾವೆಲ್ಲರು ಕೂಡಿ ಬಾಳೋಣ ಎಂದು ಕರೆ ನೀಡಿದರು.

ಗ್ರಾಪಂ ಸದಸ್ಯರಾದ ಚಿದಾನಂದಪ್ಪ ಮ್ಯಾಗಳಮನಿ, ಹನಮಪ್ಪ ಮಂಗಳೂರ, ಸಿಬ್ಬಂದಿ ನಿಂಗಪ್ಪ ಮಾಟ್ರಂಗಿ, ಕಾಯಕ ಬಂಧುಗಳಾದ ಶರಣಬಸು ಚಲವಾದಿ, ಬಸವರಾಜ ಕಡೆಮನಿ, ಬಾನು ನದಾಫ್, ಮಲ್ಲಪ್ಪ ತಕ್ಲಕೋಟಿ, ಯಲ್ಲಪ್ಪ ಕಲ್ಕೂರ, ಯಲ್ಲಪ್ಪ ಚಲವಾದಿ, ಚಂದ್ರು ಚಲವಾದಿ, ಭೀಮಪ್ಪ ಚಲವಾದಿ, ಮುಖಂಡರಾದ ರಾಮಪ್ಪ ತಕ್ಕಲಕೋಟಿ, ಭೀಮಪ್ಪ ಚಲವಾದಿ, ಬುಡ್ಡಪ್ಪ ಕುರಿ, ಯಮನೂರ ಸಾಬ್ ನದಾಫ್, ಕಳಕಪ್ಪ ಚಲವಾದಿ, ಶಿವಪುತ್ರಪ್ಪ ತುಮ್ಮರಗುದ್ದಿ ಇತರರಿದ್ದರು.