ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುಪ್ರೇಯಸಿ ಕೊಂದಿದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಪ್ರಿಯಕರನಿಗೆ ಇಲ್ಲಿನ ಜಿಲ್ಲಾ ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.2019ರ ಫೆಬ್ರವರಿ 2ರಂದು ಕುಣಿಗಲ್ ತಾಲೂಕು ಸಂತೆಮಾವತ್ತೂರು ಬಳಿ ಆರೋಪಿ ತನ್ನ ಪ್ರೇಯಸಿ ಅರ್ಪಿತಾಳನ್ನು ಬೈಕ್ ನಿಂದ ಬೀಳಿಸಿ ಕುತ್ತಿಗೆ ಹಿಸುಕಿ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿದ್ದ ಆರೋಪ ಹಿನ್ನೆಲೆಯಲ್ಲಿ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.ಕೊಲೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿಲ್ಲಾ ಸತ್ರ ನ್ಯಾಯಾಲಯ ಶಿಕ್ಷೆ ಪ್ರಕಟಿಸಿದೆ. ಆರೋಪಿ ಲೋಹಿತ್ ಹಾಗೂ ಅರ್ಪಿತಾ ಪರಸ್ಪರ ಪ್ರೀತಿಸುತ್ತಿದ್ದರು. ಅಲ್ಲದೇ ಬೆಂಗಳೂರಿನ ಕಮಲಾನಗರದಲ್ಲಿ ಜತೆಯಾಗಿ ಐದಾರು ತಿಂಗಳು ವಾಸವಿದ್ದರು. ಆ ಬಳಿಕ ಇಬ್ಬರ ನಡುವೆ ವೈಮನಸ್ಸು ಬಂದು ದೂರವಾಗಿದ್ದರು. ಬಳಿಕ ಪ್ರೇಯಸಿ ಅರ್ಪಿತಾಳನ್ನು ಬೈಕ್ ನಲ್ಲಿ ಕುರಿಸಿಕೊಂಡು ಹೋಗಿ ಹತ್ಯೆ ಮಾಡಿದ್ದ. ಆರೋಪಿಗೆ ಜೀವಾವಧಿ ಶಿಕ್ಷೆ ಹಾಗು ಒಂದು ಲಕ್ಷ ರು. ದಂಡ ವಿಧಿಸಿ ಆದೇಶ ನೀಡಿದೆ. ಸರ್ಕಾರದ ಪರವಾಗಿ ಅಭಿಯೋಜಕಿ ವಿಎ ಕವಿತಾ ವಾದ ಮಂಡಿಸಿದ್ದರು.