ಸಾರಾಂಶ
ಕನ್ನಡಪ್ರಭ ವಾರ್ತೆ ತಾಳಿಕೋಟೆ
ರಾಜ್ಯದ ಪ್ರಮುಖ ದರ್ಗಾಗಳಲ್ಲಿ ಒಂದಾದ ತಾಳಿಕೋಟೆ ಪಟ್ಟಣದಲ್ಲಿಯ ಹಜರತ್ ಫೀರ ಪಂಚಸೈಯದ ದರ್ಗಾ ಉರುಸು ಶನಿವಾರ ಭಕ್ತಿಭಾವದೊಂದಿಗೆ ಜರುಗಿತು.ಹಬ್ಬ ಹರಿದಿನಗಳು ಜಾತ್ರೆ, ಉರುಸು, ಉತ್ಸವಗಳು ಯಾವುದೇ ಬೇದ ಭಾವವಿಲ್ಲದೇ ಆಚರಿಸಿಕೊಂಡು ಬರುವುಗಳಾಗಿದ್ದು ಅದರಂತೆ ತಾಳಿಕೋಟೆಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆ ಸಾರುತ್ತಾ ಸಾಗಿ ಬಂದಿರುವ ಹಜರತ್ ಫೀರ್ ಪಂಚಸೈಯದ ದರ್ಗಾ ಉರುಸಿಗೆ ಆಗಮಿಸಿದ ಭಕ್ತಾದಿಗಳು ಎಡೆ, ಸಕ್ಕರೆ, ಕಾಯಿ, ಕರ್ಪೂರ, ಲೋಭಾನ, ದರ್ಗಾಕ್ಕೆ ನೀಡುವದರೊಂದಿಗೆ ಭಾವೈಕ್ಯತೆ ಮೆರೆದರು.ಜಾತಿ, ಧರ್ಮ, ಭಾಷೆ, ಉಡುಗೆ, ತೊಡುಗೆ ಬೇರೆಯಾದರೂ ದೇಶದಲ್ಲಿ ಏಕತೆ ಎಂಬುದು ಇದೆ. ದೇಶದಲ್ಲಿ ಅನೇಕ ಧರ್ಮಿಯರಿದ್ದರೂ ಆಯಾ ಧರ್ಮಗಳಲ್ಲಿ ಯಾವ ತಪ್ಪುಗಳು ಇರುವುದಿಲ್ಲ. ಕಾರಣ ಮಾನವರೆಲ್ಲರೂ ಒಂದಾಗಿ ನೆಮ್ಮಿದಿಯಿಂದ ಬದುಕಬೇಕೆಂಬುದು ಧರ್ಮಗಳು ಹೇಳುತ್ತಾ ಸಾಗಿವೆ. ನ್ಯಾಯದಿಂದ ಬಧುಕು ಸಾಗಿಸಬೇಕು ಬೇರೆಯವರ ಒಳಿತಿಗಾಗಿ ಬಧುಕಬೇಕು ಎಂಬುದನ್ನು ಧರ್ಮಗಳು ಹೇಳಿದಂತೆ ಬಿದ್ದವರನ್ನು ಮೇಲಕ್ಕೆ ಎತ್ತುವ ಕಾರ್ಯ ಮಾಡುತ್ತಾ ಸಾಗಬೇಕೆಂಬುದು ಎಲ್ಲ ಧರ್ಮಗಳ ಉದ್ದೇಶವಾಗಿದೆ ಎಂದು ಹೇಳಬಹುದಾಗಿದೆ. ಪ್ರತಿವರ್ಷದಂತೆ ತಾಳಿಕೋಟೆಯಲ್ಲಿ ಭಾವೈಕ್ಯತೆ ಸಾರುತ್ತಾ ಸಾಗಿರುವ ಪುರಾತನ ಹಜರತ ಫೀರ ಪಂಚಸೈಯದ ದರ್ಗಾ ಉರುಸು ಮೇ ೨೪ ರಿಂದ ಪ್ರಾರಂಭಗೊಂಡು ೨೬ ರವರೆಗೆ ತನ್ನ ಸೇವಾ ಕಾರ್ಯ ಮುಂದುವರೆಸಲಿದೆ. ಶುಕ್ರವಾರ ಗಂಧದ ಕಾರ್ಯವಾಗಿದ್ದು, ೨೫ ರಂದು ಉರುಸು ವಿಜೃಂಬಣೆಯಿಂದ ಜರುಗಿತಲ್ಲದೇ ೨೬ರಂದು ಪ್ರತಿವರ್ಷದಂತೆ ಜಯಾರತ ಜರುಗಲಿದೆ ಎಂದು ಹಜರತ್ ಫೀರ ಪಂಚಸೈಯದ ದರ್ಗಾ ಕಮಿಟಿ ಭಕ್ತಸಮೂಹಕ್ಕೆ ತಿಳಿಸಿದೆ.
;Resize=(128,128))
;Resize=(128,128))