ಸಾರಾಂಶ
ಆಸ್ತಿಯಲ್ಲಿ ಪಾಲು ಕೊಡದ ಕಾರಣ ಸೊಸೆಯೊಬ್ಬಳು 40 ಅಡಕೆ ಗಿಡಗಳನ್ನು ಕಡಿದುಹಾಕಿ, ತನ್ನ ಅತ್ತೆ- ಮಾವನ ವಿರುದ್ಧ ಸೇಡು ತೀರಿಸಿಕೊಂಡ ಘಟನೆ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ನಡೆದಿದೆ. ರೂಪ ಎಂಬಾಕೆಯೇ ಮರಗಳ ಕಡಿದ ಗೃಹಿಣಿ. ಚಿದಾನಂದ ಸ್ವಾಮಿ ಹಾಗೂ ಶಿವನಾಗಮ್ಮ ದಂಪತಿಯ ಹಿರಿಯ ಪುತ್ರ ಕುಮಾರಸ್ವಾಮಿ ಅವರ ಪತ್ನಿ.
ಕನ್ನಡಪ್ರಭ ವಾರ್ತೆ, ದಾವಣಗೆರೆ
ಆಸ್ತಿಯಲ್ಲಿ ಪಾಲು ಕೊಡದ ಕಾರಣ ಸೊಸೆಯೊಬ್ಬಳು 40 ಅಡಕೆ ಗಿಡಗಳನ್ನು ಕಡಿದುಹಾಕಿ, ತನ್ನ ಅತ್ತೆ- ಮಾವನ ವಿರುದ್ಧ ಸೇಡು ತೀರಿಸಿಕೊಂಡ ಘಟನೆ ತಾಲೂಕಿನ ಅವರಗೊಳ್ಳ ಗ್ರಾಮದಲ್ಲಿ ನಡೆದಿದೆ.ರೂಪ ಎಂಬಾಕೆಯೇ ಮರಗಳ ಕಡಿದ ಗೃಹಿಣಿ. ಚಿದಾನಂದ ಸ್ವಾಮಿ ಹಾಗೂ ಶಿವನಾಗಮ್ಮ ದಂಪತಿಯ ಹಿರಿಯ ಪುತ್ರ ಕುಮಾರಸ್ವಾಮಿ ಅವರ ಪತ್ನಿ.
ರೂಪ ಕುಮಾರಸ್ವಾಮಿ ಹಲವಾರು ವರ್ಷಗಳಿಂದ ಆಸ್ತಿಯಲ್ಲಿ ಪಾಲು ಕೊಡುವಂತೆ ಅತ್ತೆ- ಮಾವನಿಗೆ ಆಗಾಗ ಕೇಳುತ್ತಿದ್ದರು. ಆದರೆ, ಇದಕ್ಕೆ ಅವರು ಒಪ್ಪಿರಲಿಲ್ಲ. ಇದೇ ಕಾರಣದಿಂದ ಕುಪಿತಕೊಂಡು ತೋಟಕ್ಕೆ ನುಗ್ಗಿ ಮೂರು ವರ್ಷಗಳ ಅಡಕೆ ಗಿಡಗಳನ್ನು ಮಚ್ಚಿನಿಂದ ಕೊಚ್ಚಿಹಾಕಿದ್ದಾರೆ ಎನ್ನಲಾಗಿದೆ.ಈಗಾಗಲೇ ಮನೆ ಕಟ್ಟಿಸಿಕೊಳ್ಳಲು ₹8 ಲಕ್ಷವನ್ನು ನಮ್ಮಿಂದ ಪಡೆದುಕೊಂಡಿದ್ದಾರೆ. ನಮಗೆ ವಯಸ್ಸಾಗಿದೆ. ನಮ್ಮನ್ನ ಸರಿಯಾಗಿ ನೋಡಿಕೊಳ್ಳದೇ ಹಲ್ಲೆ ಮಾಡುತ್ತಿದ್ದಾಳೆ. ಇದು ಸಾಲದು ಎಂಬಂತೆ ಮಚ್ಚು ತಂದು ಅಡಕೆ ಮರಗಳ ಕಡಿದು ಹಾಕಿದ್ದಾಳೆ ಎಂದು ಸೊಸೆ ರೂಪ ವಿರುದ್ಧ ಆರೋಪಿಸಿ ಮಾವ ಚಿದಾನಂದಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ.- - - (-ಫೋಟೋ: ಸಾಂದರ್ಭಿಕ ಚಿತ್ರ)