ಪ್ರಕೃತಿಯೇ ಗಾಡ್ಗೀಳ್ ವರದಿ ಜಾರಿ ಮಾಡಿಕೊಳ್ಳುವ ದಿನ ಬರಲಿವೆ

| Published : Aug 11 2024, 01:38 AM IST

ಸಾರಾಂಶ

ಶೃಂಗೇರಿ, ಕೇರಳ, ಕರ್ನಾಟಕಗಳಲ್ಲಿ ಭೂಕುಸಿತ, ಗುಡ್ಡ ಕುಸಿತಗಳು, ಅತಿವೃಷ್ಟಿ, ಅನಾವೃಷ್ಟಿ ಉಂಟಾಗುತ್ತಿದ್ದು ಸಾಮಾನ್ಯ ಜನರು ಬಲಿಪಶುವಾಗುತ್ತಿದ್ದರೆ. ಸರ್ಕಾರಿ ಪ್ರಾಯೋಜಿತ ವ್ಯವಸ್ಥೆಗಳು ಷಡ್ಯಂತ್ರ ರೂಪಿಸಿ ಗಾಡ್ಗೀಳ್ ವರದಿಯನ್ನು ಮರೆ ಮಾಚಿಸಿದವು. ಆದರೆ ಪ್ರಕೃತಿಯೇ ಮಾದವ ಗಾಡ್ಗೀಳ ವರದಿ ಜಾರಿ ಮಾಡಿಕೊಳ್ಳುವ ದಿನಗಳು ಬರಲಿವೆ ಎಂದು ಪಶ್ಚಿಮಘಟ್ಟ ಸಂರಕ್ಷಣೆ ಹೋರಾಟ ಸಮಿತಿಯ ನಾಗೇಶ್ ಅಂಗೀರಸ ಹೇಳಿದ್ದಾರೆ.

ಪಶ್ಚಿಮಘಟ್ಟ ಸಂರಕ್ಷಣೆ ಹೋರಾಟ ಸಮಿತಿಯ ನಾಗೇಶ್ ಅಂಗೀರಸ ಹೇಳಿಕೆ

ಕನ್ನಡಪ್ರಭ ವಾರ್ತೆ, ಶೃಂಗೇರಿ

ಕೇರಳ, ಕರ್ನಾಟಕಗಳಲ್ಲಿ ಭೂಕುಸಿತ, ಗುಡ್ಡ ಕುಸಿತಗಳು, ಅತಿವೃಷ್ಟಿ, ಅನಾವೃಷ್ಟಿ ಉಂಟಾಗುತ್ತಿದ್ದು ಸಾಮಾನ್ಯ ಜನರು ಬಲಿಪಶುವಾಗುತ್ತಿದ್ದರೆ. ಸರ್ಕಾರಿ ಪ್ರಾಯೋಜಿತ ವ್ಯವಸ್ಥೆಗಳು ಷಡ್ಯಂತ್ರ ರೂಪಿಸಿ ಗಾಡ್ಗೀಳ್ ವರದಿಯನ್ನು ಮರೆ ಮಾಚಿಸಿದವು. ಆದರೆ ಪ್ರಕೃತಿಯೇ ಮಾದವ ಗಾಡ್ಗೀಳ ವರದಿ ಜಾರಿ ಮಾಡಿಕೊಳ್ಳುವ ದಿನಗಳು ಬರಲಿವೆ ಎಂದು ಪಶ್ಚಿಮಘಟ್ಟ ಸಂರಕ್ಷಣೆ ಹೋರಾಟ ಸಮಿತಿಯ ನಾಗೇಶ್ ಅಂಗೀರಸ ಹೇಳಿದ್ದಾರೆ.

ಕೇರಳದ ವಯನಾಡು,ಕರ್ನಾಟಕದ ಶಿರೂರು ಗುಡ್ಡಕುಸಿತಕ್ಕೆ ನೂರಾರು ಕಾರಣಗಳನ್ನು ಕೊಡುತ್ತಾರೆ. ಮಾದವ ಗಾಡ್ಗೀಳ್ ವರದಿ ನಿರ್ಲಕ್ಷವೇ ಇದಕ್ಕೆ ಮುಖ್ಯ ಕಾರಣವಾಗಿದೆ. ಖ್ಯಾತ ಪರಿಸರ ವಿಜ್ಞಾನಿ ಡಾ.ಮಾದವ ಗಾಡ್ಗೀಳ್‌ ತಮ್ಮ ವರದಿಯಲ್ಲಿ ವೈಜ್ಞಾನಿಕ ಅಂಶಗಳನ್ನು ಹೇಳಿದ್ದಾರೆ. ಸರ್ಕಾರಿ ಪ್ರಾಯೋಜಿತ ಮಾಫಿಯಾಗಳು ಅಭಿವೃದ್ಧಿ ಹೆಸರಲ್ಲಿ ಅವ್ಯಾಹತವಾಗಿ ಪರಿಸರ ನಾಶ ಮಾಡಿದ್ದರು. ಅರಣ್ಯಗಳನ್ನು ನಾಶ ಮಾಡಿದ್ದರ ಪರಿಣಾಮ ಗುಡ್ಡಗಳು ಕುಸಿದು ಹಳ್ಳಿಗಳೇ ವಿನಾಶವಾಗುತ್ತಿದೆ. ಸರ್ಕಾರಿ ಪ್ರಾಯೋಜಿತ ವ್ಯವಸ್ಥೆಗಳು ನೈಸರ್ಗಿಕ ವಿಕೋಪವನ್ನೇ ಕಾಯುತ್ತಿದ್ದು, ಅದರ ಮೂಲಕವೂ ಲಾಭಗಳಿಸಿಕೊಳ್ಳುತ್ತಿದೆ. ಅವರು ವಿದೇಶಗಳಲ್ಲಿ ವೈಭವಯುತ ಜೀವನ ನಡೆಸುತ್ತಿದ್ದರೆ ಇಲ್ಲಿ ಬಲಿಯಾಗುವುದು ಪ್ರಕೃತಿ, ಜನರು, ಪ್ರಾಣಿ ಪಕ್ಷಿ ಸಂಕುಲಗಳು.

ರೆಸಾರ್ಟ್ಯ ಗಳಿಂದ ಅದರ ಮಾಲೀಕನಿಗೆ ಲಾಭ ಹೊರತು, ಊರಿನ ಜನರಿಗಲ್ಲ. ಜೆಸಿಬಿ ಯಂತ್ರಗಳು ಗುಡ್ಡ, ಕಾಡುಗಳಲ್ಲಿ ಅಭಿವೃದ್ಧಿ ಹೆಸರಲ್ಲಿ ಕಾರ್ಯಚರಣೆ ನಡೆಸುತ್ತಿದ್ದರೆ ಜನರು ನೋಡುತ್ತಿರುತ್ತಾರೆ. ಅದರ ಪರಿಣಾಮ ಗುಡ್ಡವೇ ಕುಸಿಯ ತೊಡಗುವಾಗ ಗೊತ್ತಾಗುವುದು. ಇಂದುಪ್ರ ಕೃತಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಮಾದವ ಗಾಡ್ಗೀಳ್ ವರದಿಯೇ ಸೂಕ್ತ ಪರಿಹಾರವಾಗಲಿದೆ. ಇದನ್ನು ತನ್ನಿಂತಾನೆ ಪ್ರಕೃತಿಯೇ ಜಾರಿಗೊಳಿಸಿಕೊಳ್ಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

10 ಶ್ರೀ ಚಿತ್ರ 4-ನಾಗೇಶ್ ಅಂಗೀರಸ