ಹಾಸನ ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ ಕುರಿತು ಆ ಹೆಣ್ಣಮಗಳು ಕೆಪಿಎಸ್‌ಸಿಯಲ್ಲಿ ಏನು ಮಾಡಿದ್ರು ಎಂದು ಗೊತ್ತಿದೆ. ಅವರನ್ನು ರಜೆ ಮೇಲೆ ಕಳುಹಿಸಬೇಕಿತ್ತು, ಇಲ್ಲಾ ಸಸ್ಪೆಂಡ್ ಮಾಡಬೇಕಿತ್ತು. ಆದರೆ ಇಲ್ಲಿ ರಕ್ಷಣೆ ಕೊಟ್ಟು ಕರೆದುಕೊಂಡು ಬಂದು ಇಟ್ಟುಕೊಂಡಿದ್ದಾರೆ. ಜತೆಗೆ ಡಿಸಿ ಉದ್ಧಟತನ ಇನ್ನೂ ಬಿಟ್ಟಿಲ್ಲ. ಇತಿಮಿತೀಲಿ ಕೆಲಸ ಮಾಡಬೇಕು. ಹಾಸನ ಜಿಲ್ಲಾ ಮಂತ್ರಿಗೆ ಹಾಗೂ ಜಿಲ್ಲಾಧಿಕಾರಿಗೆ ಸಂಘರ್ಷ ಶುರುವಾಗಿದೆ. ಸಮನ್ವಯತೆ ನಿರ್ಮಾಣ ಮಾಡಿ ಅಧಿಕಾರ ಮಾಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಹಾಸನ ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ ಕುರಿತು ಆ ಹೆಣ್ಣಮಗಳು ಕೆಪಿಎಸ್‌ಸಿಯಲ್ಲಿ ಏನು ಮಾಡಿದ್ರು ಎಂದು ಗೊತ್ತಿದೆ. ಅವರನ್ನು ರಜೆ ಮೇಲೆ ಕಳುಹಿಸಬೇಕಿತ್ತು, ಇಲ್ಲಾ ಸಸ್ಪೆಂಡ್ ಮಾಡಬೇಕಿತ್ತು. ಆದರೆ ಇಲ್ಲಿ ರಕ್ಷಣೆ ಕೊಟ್ಟು ಕರೆದುಕೊಂಡು ಬಂದು ಇಟ್ಟುಕೊಂಡಿದ್ದಾರೆ. ಜತೆಗೆ ಡಿಸಿ ಉದ್ಧಟತನ ಇನ್ನೂ ಬಿಟ್ಟಿಲ್ಲ. ಇತಿಮಿತೀಲಿ ಕೆಲಸ ಮಾಡಬೇಕು. ಹಾಸನ ಜಿಲ್ಲಾ ಮಂತ್ರಿಗೆ ಹಾಗೂ ಜಿಲ್ಲಾಧಿಕಾರಿಗೆ ಸಂಘರ್ಷ ಶುರುವಾಗಿದೆ. ಸಮನ್ವಯತೆ ನಿರ್ಮಾಣ ಮಾಡಿ ಅಧಿಕಾರ ಮಾಡಬೇಕು ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ಮಾವಿನಕೆರೆ ಬೆಟ್ಟದ ಶ್ರೀ ರಂಗನಾಥಸ್ವಾಮಿ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿ ಮಾತನಾಡಿದರು. ಹಲವಾರು ವರ್ಷಗಳಿಂದ ದೇವಿಗೆರೆಯಲ್ಲಿ ಯಾವ ರೀತಿ ನಡೆದುಕೊಂಡು ಬಂದಿದೆ ಜತೆಗೆ ಹಲವಾರು ಗಣಪತಿಗಳನ್ನು ಬಿಟ್ಟಿದ್ದಾರೆ. ಜಿಲ್ಲಾಧಿಕಾರಿ ಅವರು ಗಣಪತಿ ವಿಸರ್ಜನೆ ವಿಷಯದಲ್ಲಿ ಎಸ್‌ಪಿಗೆ ನೋಟಿಸ್ ಕೊಡ್ತಾರೆ. ಐಪಿಎಸ್ ಅಧಿಕಾರಿಗೆ ನೋಟಿಸ್ ಕೊಡ್ತೀರಾ, ಹೀಗಾದರೆ ಈ ಜಿಲ್ಲೆಯಲ್ಲಿ ಆಡಳಿತ ಹೇಗೆ ನಡೆಸುತ್ತೀರಿ? ಅವರಿಗೆ ಜವಾಬ್ದಾರಿ ಇಲ್ವಾ? ಎಸ್ಪಿ ಜಿಲ್ಲಾಧಿಕಾರಿ ಕೈ ಕೆಳಗೆ ಕೆಲಸ ಮಾಡಬೇಕಾ? ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲದೆ ಇದ್ದರೆ ಹೇಗೆ ಮಾಡುತ್ತೀರಾ? ಹೀಗಾದರೆ ಜನಸಾಮಾನ್ಯರ ಕಷ್ಟಗಳನ್ನು ಹೇಗೆ ನಿಭಾಯಿಸುತ್ತಾರೆ? ಇಷ್ಟೊಂದು ಸಂಘರ್ಷ ಮಾಡಿಕೊಂಡರೆ ಹೇಗೆ? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿ, ಜ್ಞಾನ ಇಟ್ಟುಕೊಂಡು ಕೆಲಸ ಮಾಡಬೇಕು, ಇಲ್ಲವಾದಲ್ಲಿ ಆಡಳಿತ ಕೊಲ್ಯಾಪ್ಸ್ ಆಗುತ್ತೆ ಎಂದು ಎಚ್ಚರಿಸಿ, ಈ ರೀತಿ ನೋಟೀಸ್ ಕೊಟ್ಟಿರುವುದಕ್ಕೆ ಮೇಲಾಧಿಕಾರಿಗಳು ಸ್ಪಂದಿಸಬೇಕು ಎಂದರು.ಈ ವರ್ಷ ಕಂಡಿರಿಯದ ಬರಗಾಲ :

ರಾಜ್ಯದಲ್ಲಿ ಈ ವರ್ಷ ಕಂಡಿರಿಯದ ಬರಗಾಲ ಬಂದಿದೆ ಹಾಗೂ ಹಿಂದೆಂದೂ ಈ ರೀತಿ ಬರಗಾಲ ಇರಲಿಲ್ಲ. ಕಂದಾಯ ಸಚಿವರು ಸುಮಾರು ೪೫ ಸಾವಿರ ಕೋಟಿ ಬೆಳೆ ನಷ್ಟ ಆಗಿದೆ ಎಂದು ಹೇಳಿದ್ದಾರೆ ಮತ್ತು ಕೇಂದ್ರ ತಂಡ ಬಂದು ಬರ ಅಧ್ಯಯನ ಮಾಡಿ ತೆರಳಿದ್ದಾರೆ. ಆದರೆ ಈ ರೀತಿಯ ತೀವ್ರ ಬರಗಾಲವನ್ನು ನಿರ್ವಹಣೆ ಮಾಡುವುದನ್ನು ಬಿಟ್ಟು ಬರೀ ಹೇಳಿಕೆಯನ್ನು ರಾಜ್ಯ ಸರ್ಕಾರ ಕೊಡುತ್ತಿದೆ ಜತೆಗೆ ಬೇರೆ ರೀತಿಯ ಹಲವಾರು ವಿ?ಯಗಳಿಗೆ ಪ್ರಮುಖ್ಯತೆ ಕೊಡುತ್ತಿದ್ದಾರೆ. ಕುಡಿಯುವ ನೀರಿಗೆ ₹ ೩೬೦ ಕೋಟಿ ಬಿಡುಗಡೆ ಮಾಡಿದ್ದೇನೆ ಎಂದು ಹೇಳಿದ್ದಾರೆ ಆದರೆ ಹಲವಾರು ಗ್ರಾಮಗಳಲ್ಲಿ ರೈತರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ ಜತೆಗೆ ಈ ಸರ್ಕಾರದ ಸ್ಪಂದನೆ ಕಾಣುತ್ತಿಲ್ಲ.ಪಂಚಾಯಿತಿ ಚುನಾವಣೆ ನಡೆಸದ ಹಿನ್ನೆಲೆಯಲ್ಲಿ ಹದಿನಾರು ಹಣಕಾಸು ಅನುದಾನ ಸಿಕ್ಕಿಲ್ಲ, ಇದರಿಂದ ಪಂಚಾಯ್ತಿ ಸಿಬ್ಬಂದಿಗೆ ಸಂಬಳ ಕೊಡಲು ಇವರ ಬಳಿ ಹಣ ಇಲ್ಲ ಎಂದು ಮೂದಲಿಸಿದರು. ಎನ್‌ಡಿಆರ್‌ಎಫ್ ಅಡಿಯಲ್ಲಿ ೮ ಸಾವಿರದಿಂದ ೨೫ ಸಾವಿರ ಪರಿಹಾರ ಕೊಡಲು ಗೈಡ್‌ಲೈನ್ಸ್ ಇದೆ. ಆದರೆ ರಾಜ್ಯ ಸರ್ಕಾರ ಕೇವಲ ೨೫೦೦ ರು. ಘೋಷಣೆ ಮಾಡಿದ್ದಾರೆ, ಘೋಷಣೆ ಮಾಡಿರುವ ೧೨೦೦ ಕೋಟಿ ರು. ಇನ್ನೂ ಬಿಡುಗಡೆ ಆಗಿಲ್ಲ, ಬರಿ ಇನ್ನೂ ಘೋಷಣೆಯಲ್ಲಿದೆ, ಹಣ ಬಿಡುಗಡೆ ಆಗಿಲ್ಲ ಎಂದು ಟೀಕಿಸಿದರು. ೩೫ ವಾರಕ್ಕೆ ಮೇವು ಇದೆ ಅಂತೀರಾ, ಅಧಿಕಾರಿಗಳು ಹೇಗೆ ಹೇಳಿದ್ರು ಅಂಥ ಚರ್ಚೆ ಮಾಡುತ್ತಿದಾರೆ. ಸಂಕಷ್ಟಕ್ಕೆ ಸಲುಕಿದ ನಮ್ಮ ರೈರು ಕಡಿಮೆ ಹಣಕ್ಕೆ ದನಕರುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆದರೆ ಈ ಸರ್ಕಾರಕ್ಕೆ ಇದ್ಯಾವುದರ ಬಗ್ಗೆ ಗಮನ ಇಲ್ಲ ಎಂದರು. ಬರಗಾಲಕ್ಕೆ ಸಂಬಂಧಪಟ್ಟಂತೆ ಸಮಸ್ಯೆಗಳಿವೆ, ಅತ್ಯಂತ ಧಾರುಣವಾಗಿ ಜನರು ಬರಗಾಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದು ಬೇಸರದಿಂದ ನುಡಿದರು.

ಹುಡುಗಾಟಿಕೆ ರಾಜಕಾರಣ ಮಾಡಿಕೊಂಡಿದ್ದೀರಾ?:

ಸ್ಟಿಂಗ್ ಆಪರೇಷನ್ ಬಗ್ಗೆ ಪ್ರಮುಖವಾದ ವಿಷಯ ಓಡಾಡ್ತು, ಅದನ್ನು ನಿಲ್ಲಿಸಿ ಕೊಂಡಿದ್ದಾರೆ. ಯಾರು ಅದನ್ನು ಮಾಡಿದ್ದು, ಯಾರು ಸ್ಟಿಂಗ್ ಮಾಡಿದ್ದು ಇದೆಲ್ಲಾ ಹುಡುಗಾಟಿಕೆನಾ, ಹುಡುಗಾಟಿಕೆ ರಾಜಕಾರಣ ಮಾಡಿಕೊಂಡಿದ್ದೀರಾ ಎಂದು ಪ್ರಶ್ನಿಸಿ, ಸಿದ್ದರಾಮಯ್ಯ ಅವರು ಎಂಟು ವರ್ಷ ಮುಖ್ಯಮಂತ್ರಿ ಆಗಿ ಕೆಲಸ ಮಾಡಿದ್ದಾರೆ. ದೇವರಾಜು ಅರಸು ಅವರ ದಾಖಲೆ ಮುರಿದಂತಹವರು. ಅವರದ್ದೇ ಆದಂತಹ ಜನಸಾಮಾನ್ಯರ ಕೆಲಸ ಮಾಡಿದವಂತಹವರು ಎಂದು ಹೆಸರು, ವರ್ಚಸ್ಸು ಇಟ್ಟುಕೊಂಡಿರುವ ವ್ಯಕ್ತಿಯ ಮಾನಹರಣ ಮಾಡುವ ಕೆಲಸ ಏಕೆ ಮಾಡಿದ್ರಿ, ಯಾರು ಮಾಡಿದ್ದು? ಇವತ್ತಿನವರೆಗೂ ಏನಾದರೂ ಆಕ್ಷನ್ ತೆಗೆದುಕೊಂಡಿದ್ದೀರಾ? ಅದರ ಹಿಂದೆ ಯಾರಿದ್ದರು? ಏನಕ್ಕೆ ಈ ವಿಷಯಗಳನ್ನು ಮಾತನಾಡುತ್ತೀರಿ? ಇದನ್ನು ಏತಕ್ಕೆ ಹೊರಗಡೆ ತಂದಿರಿ ಎಂದು ಪ್ರಶ್ನಿಸಿ, ಅಂತಹವರಿಗೆ ರಕ್ಷಣೆ ಕೊಡುತ್ತಿರುವ ಸರ್ಕಾರ ಇದು ಎಂದು ತಿಳಿಸಿ, ಸಿಎಂಗೆ ಸ್ಟಿಂಗ್ ಆಪರೇಷನ್‌ನಲ್ಲಿ ಐದು ಜನ ಅಂಥ ಹೇಳಿದ್ದೀರಿಲ್ಲಾ ಯಾರು ಐದು ಜನ ಎಂದು ಪ್ರಶ್ನಿಸಿ, ಐದು ಜನ ಅಂಥ ಗೊತ್ತಿದೆ ಅಂದ ಮೇಲೆ ಅರೆಸ್ಟ್ ಮಾಡಬೇಕಲ್ವೆ ಎಂದು ಪುನಃ ಪ್ರಶ್ನಿಸಿದರು. ಇಂತಹ ಕೆಟ್ಟ ಪರಿಸ್ಥಿತಿ ಕರ್ನಾಟಕದಲ್ಲಿ ಬರುತ್ತದೆ ಎಂದು ಯಾರು ಅಂದುಕೊಂಡಿರಲಿಲ್ಲ ಎಂದು ಕಟುವಾಗಿ ಟೀಕಿಸಿದರು.

ಬಾಕ್ಸ್‌::: ಬರಗಾಲದ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಎಚ್ಚರಿಕೆ ಕೊಡಬೇಕಿತ್ತು:

ಮುಖ್ಯಮಂತ್ರಿಯೂ ಸ್ಟಿಂಗ್ ಆಪರೇಶನ್ ಬಗ್ಗೆ ಎಚ್ಚರಿಕೆ ಕೊಡುವ ಬದಲು ಬರಗಾಲದ ಪರಿಸ್ಥಿತಿಯನ್ನು ಎದುರಿಸುವ ಬಗ್ಗೆ ಎಚ್ಚರಿಕೆ ಕೊಡಬೇಕಿತ್ತು. ಉತ್ತಮವಾದ ನಾಯಕರನ್ನು ಕಂಡಂತಹ ರಾಜ್ಯ ಇದು, ವೈಯುಕ್ತಿಕವಾಗಿ ಟೀಕೆ ಮಾಡಿ ಬೇಡ ಅನ್ನಲ್ಲ. ಆದರೆ ಯಾವ ವಿಷಯಗಳನ್ನು ಚರ್ಚೆ ಮಾಡಿಕೊಂಡು ಹೊರಟಿದ್ದೀರಿ. ನೀವೇ ಗುಂಡಿ ತೋಡಿಕೊಂಡು ಸಮಾಧಿ ಮಾಡಿಕೊಳ್ಳಲು ಹೊರಟಿದ್ದೀರಿ ಎಂದು ಕಟುಕಿದರು. ಈ ಮಂತ್ರಿಮಂಡಲದಲ್ಲಿ ಇರುವವರಿಗೆ ಒಳ್ಳೆಯ ಕೆಲಸ ಮಾಡಿ ಅಂತ ಹೇಳುತ್ತಿಲ್ಲ, ಸ್ಟಿಂಗ್ ಆಪರೇಶನ್‌ಗೆ ಸಿಕ್ಕಿ ಹಾಕಿಕೊಳ್ಳದೆ ಲೂಟಿ ಮಾಡಿ ಅಂತಿದ್ದಾರೆ. ಕೆಲ ಲೂಟಿ ಒಡೆಯುವ ಜನರಿಗೆ ರಕ್ಷಣೆ ಕೊಡಲು ಹೊರಟಿದ್ದೀರಿ ಎಂದು ಮುಖ್ಯಮಂತ್ರಿಯ ಕಾರ್ಯವೈಖರಿಯನ್ನು ಕಟುವಾಗಿ ಟೀಕಿಸಿ, ನಗೆ ಪಾಟಿಲಿಗೆ ಒಳಗಾಗಿದ್ದೀರಿ ಎಂದು ಮೂದಲಿಸಿದರು.ಉತ್ತರ ಕರ್ನಾಟಕದ ಶಾಸಕರು ಇಲ್ಲಿ ಬಂದು 2ನೇ ಮದುವೆ:

ಒಬ್ಬ ಮುಖ್ಯಮಂತ್ರಿ ವಿಧಾನಸಭಾ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಶಾಸಕರು ಇಲ್ಲಿ ಬಂದು ಎರಡನೇ ಮದುವೆ ಮಾಡಿಕೊಂಡು ಊರಿಗೆ ಹೋಗಲ್ಲ ಎಂದು ಹೇಳುತ್ತಾರೆ. ಈ ಮಾತನ್ನು ಒಬ್ಬ ಮುಖ್ಯಮಂತ್ರಿ ಹೇಳ್ತಾರೆ ಅಂದರೆ, ಅದನ್ನು ಸಹಿಸಿಕೊಂಡು ಕಾಂಗ್ರೆಸ್‌ನವರು ಇದ್ದಾರೆ ಅಂದರೆ, ಅವರ ಪರಿಸ್ಥಿತಿ ಎಲ್ಲಿಗೆ ತಂದು ನಿಲ್ಲಿಸಿಕೊಂಡಿದ್ದಾರೆ. ಈ ಒಂದು ವಾತಾವರಣ ನಿರ್ಮಾಣ ಮಾಡಲು ಕಾಂಗ್ರೆಸ್ ಹೈಕಮಾಂಡ್, ಕಾಂಗ್ರೆಸ್ ಪಕ್ಷ ಕಾರಣ ಎಂದರು.