ಸಾರಾಂಶ
ಕೇರಳದ ಮೇಪಾಡಿಯ ಚೂರಲ್ ಮಲಾದಲ್ಲಿ ಸ್ವಂತ ನೆಲೆ ಖರೀದಿಸಿ 6 ತಿಂಗಳ ಹಿಂದೆ ಗೃಹಪ್ರವೇಶ ಮಾಡಿದ್ದ ದಂಪತಿ ಸೋಮವಾರ ರಾತ್ರಿ ನಡೆದ ದುರಂತದಲ್ಲಿ ಮನೆ ಸಮೇತ ಜಲ ಸಮಾಧಿಯಾಗಿದ್ದರು. ಚಾಮರಾಜನಗರ ತಾಲೂಕಿನ ಇರಸವಾಡಿಯ ರತ್ನಮ್ಮನನ್ನು ವಿವಾಹವಾಗಿದ್ದ ಚೂರಲ್ ಮಲಾದ ರಾಜನ್ ಪೈಕಿ ರಾಜನ್ ಅವರ ಮೃತದೇಹ ಬುಧವಾರ ಸಂಜೆ ನೆಲಂಬೂರು ಬಳಿ ಪತ್ತೆಯಾಗಿದೆ.
ಚಾಮರಾಜನಗರ: ಕೇರಳದ ಮೇಪಾಡಿಯ ಚೂರಲ್ ಮಲಾದಲ್ಲಿ ಸ್ವಂತ ನೆಲೆ ಖರೀದಿಸಿ 6 ತಿಂಗಳ ಹಿಂದೆ ಗೃಹಪ್ರವೇಶ ಮಾಡಿದ್ದ ದಂಪತಿ ಸೋಮವಾರ ರಾತ್ರಿ ನಡೆದ ದುರಂತದಲ್ಲಿ ಮನೆ ಸಮೇತ ಜಲ ಸಮಾಧಿಯಾಗಿದ್ದರು.
ಚಾಮರಾಜನಗರ ತಾಲೂಕಿನ ಇರಸವಾಡಿಯ ರತ್ನಮ್ಮನನ್ನು ವಿವಾಹವಾಗಿದ್ದ ಚೂರಲ್ ಮಲಾದ ರಾಜನ್ (ರಾಜೇಂದ್ರ), ರಜನಿ (ರತ್ನಮ್ಮ) ದಂಪತಿಗಳು ಕಳೆದ ಹಲವಾರು ವರ್ಷದ ಹಿಂದೆ ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದರು. ಕೂಲಿ ಹಣದಲ್ಲಿ ಉಳಿತಾಯ ಮಾಡಿ ಪೆಬ್ರವರಿಯಲ್ಲಿ ಸ್ವಂತ ಮನೆ ಕಟ್ಟಿಸಿ 6 ತಿಂಗಳ ಹಿಂದೆ ಬಂಧು ಬಾಂಧವರ ಕರೆಸಿ ಗೃಹ ಪ್ರವೇಶ ಮಾಡಿದ್ದರು.ಈ ಬಗ್ಗೆ ಮೇಪಾಡಿಯಲ್ಲಿ ಬೀಡು ಬಿಟ್ಟಿರುವ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಹಸೀಲ್ದಾರ್ ರಮೇಶ್ ಬಾಬು ಮಾಹಿತಿ ನೀಡಿದ್ದು, ನಾಪತ್ತೆಯಾಗಿರುವ ದಂಪತಿಗಳ ಪೈಕಿ ರಾಜನ್ ಮೃತದೇಹ ಬುಧವಾರ ಸಂಜೆ ನೆಲಂಬೂರು ಬಳಿ ಪತ್ತೆಯಾಗಿದೆ. ರತ್ನಮ್ಮ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಮೃತ ರಾಜೇಂದ್ರ ಅವರ ತಂದೆ ಚಾಮರಾಜನಗರ ತಾಲೂಕಿನ ಚಿಕ್ಕಮೋಳೆಯವರಾಗಿದ್ದು ಇವರ ಕುಟುಂಬ 50 ವರ್ಷದ ಹಿಂದೆಯೇ ಚೂರಲ್ ಮಾಲಾದ ಟೀ ಎಸ್ಟೇಟ್‌ಗೆ ತೆರಳಿ ಗಾರೆ ಕೆಲಸ ಮಾಡಿಕೊಂಡಿದ್ದರು. ರಾಜೇಂದ್ರ ಅವರ ತಾಯಿ ಮತ್ತು ತಂಗಿ ಕೇರಳದ ಕಡೂರು ಎಸ್ಟೇಟ್‌ನಲ್ಲಿ ನೆಲೆಸಿದ್ದರೆಂದು ಅವರ ಸಂಬಂಧಿ ವೆಂಕಟಯ್ಯನ ಛತ್ರ ಗ್ರಾಪಂ ಸದಸ್ಯ ಶಶಿಕುಮಾರ್ ತಿಳಿಸಿದ್ದಾರೆ.