ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರು ಪ್ರತಿನಿತ್ಯ ಹೇಳಿಕೊಡುವ ಅಭ್ಯಾಸದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಣ ಮಾಡಬೇಕು. ಗುರುವಿನ ಋಣವನ್ನು ಈ ಜನ್ಮದಲ್ಲಿ ತೀರಿಸುವುದು ಅಸಾಧ್ಯವೆಂದು ಹೇಳಿದರು.

ಲಕ್ಷ್ಮೇಶ್ವರ: ಉತ್ತಮ ಶಿಕ್ಷಕರು ದೊರೆಯುವುದು ಪೂರ್ವಜನ್ಮದ ಪುಣ್ಯ. ನಮಗೆ ಕಲಿಸಿದ ಶಿಕ್ಷಕರು ಅಕ್ಷರದ ಜತೆ ಬದುಕಿಗೆ ಬೇಕಾದ ಜೀವನ ಮೌಲ್ಯ ನೀಡಿ ಬದುಕಿಗೆ ದಾರಿ ತೋರಿದರು ಎಂದು ನರರೋಗ ತಜ್ಞ ಡಾ. ಶಿವಯೋಗಿ ಬಳಿಗಾರ ತಿಳಿಸಿದರು.

ಶುಕ್ರವಾರ ಸಮೀಪದ ಶಿಗ್ಲಿಯ ಎಸ್.ಎಸ್. ಕೂಡ್ಲಮಠ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಾರ್ಷಿಕೋತ್ಸವದ ಅಂಗವಾಗಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು. ನಮಗೆ ಗುರುಗಳು ಕೇವಲ ಅಕ್ಷರ ಕಲಿಸದೇ ನೈತಿಕ ಮತ್ತು ಮಾನವೀಯ ಮೌಲ್ಯಗಳನ್ನು ತಿಳಿಸಿದರು. ಬದುಕಿಗೆ ಬೇಕಾದ ಅವಶ್ಯಕ ಗುಣಗಳನ್ನು ಕಲಿಸಿದರು. ಗುರು, ತಂದೆ- ತಾಯಿ ಹಾಗೂ ಭೂಮಿಯ ಋಣ ತೀರಿಸಲಾಗದು. ವಿದ್ಯಾರ್ಥಿಗಳು ಶಿಕ್ಷಕರಿಗೆ ಗೌರವ ನೀಡುವುದನ್ನು ಕಲಿಯಬೇಕು ಎಂದರು. ಮಾಜಿ ಶಾಸಕ ಜಿ.ಎಂ. ಮಹಾಂತಶೆಟ್ಟರ ಮಾತನಾಡಿ, ವಿದ್ಯಾರ್ಥಿಗಳು ಶಿಕ್ಷಕರು ಪ್ರತಿನಿತ್ಯ ಹೇಳಿಕೊಡುವ ಅಭ್ಯಾಸದ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಣ ಮಾಡಬೇಕು. ಗುರುವಿನ ಋಣವನ್ನು ಈ ಜನ್ಮದಲ್ಲಿ ತೀರಿಸುವುದು ಅಸಾಧ್ಯವೆಂದು ಹೇಳಿದರು. ಈ ವೇಳೆ ಡಾ. ಎನ್.ಕೆ. ಕಾಳಪ್ಪನವರ, ಡಾ. ರವಿ ಸಾಲ್ಮನಿ, ಡಾ. ಪ್ರದೀಪ ಕಲ್ಲೊಳ್ಳಿಮಠ ಮಾತನಾಡಿದರು. ಸಭೆಯಲ್ಲಿ ಸಂಸ್ಥೆಯ ಅಧ್ಯಕ್ಷ ಎಫ್.ಡಿ. ಹುನಗುಂದ, ಸಂಸ್ಥೆಯ ಚೇರಮನ್ ಎಸ್.ಪಿ. ಬಳಿಗಾರ, ಶಂಕರ ರಾಗಿ, ಮಂಜುನಾಥ ನಾವಿ, ಎಚ್.ಎಫ್. ತಳವಾರ, ಎಸ್.ಬಿ. ಡಾಣಗಲ್ಲ, ಈರಣ್ಣ ಪವಾಡದ, ಸಿದ್ದಣ್ಣ ಯಲಿಗಾರ, ಡಿ.ವೈ. ಹುನಗುಂದ, ಸಿ.ಎಸ್. ತೋಟದ, ಎಸ್.ಎಸ್. ಕಳ್ಳಳ್ಳಿ, ಬಿ.ಸಿ. ಬಳಿಗಾರ, ಎಫ್.ಕೆ. ಕಾಳಪ್ಪನವರ, ಎಂ.ಎಂ. ನದಾಫ್, ಎಸ್.ಬಿ. ಪಾಟೀಲ, ಮಾಲತೇಶ ಪಾಟೀಲ, ಸಿ.ಬಿ. ಮೊಗಲಿ, ಎಲ್.ಸಿ. ಲಮಾಣಿ ಇತರರು ಇದ್ದರು. ಶಿಕ್ಷಕ ಆರ್.ಎಂ. ಜಂಬೆರಾಳ ಕಾರ್ಯಕ್ರಮ ನಿರ್ವಹಿಸಿದರು. ಬಿ.ಬಿ. ಬಳಿಗಾರ ಸ್ವಾಗತಿಸಿದರು. ಬಿ.ಬಿ. ಚಿಟಗಿ ಸ್ವಾಗತಿಸಿದರು. ವೈ.ಎಂ. ಬಸಾಪೂರ ಸಂಗೀತ ಸೇವೆ ನೀಡಿದರು. ಬೈಕ್- ಕ್ಯಾಂಟರ್ ಡಿಕ್ಕಿ: ಸವಾರ ಸಾವು

ಲಕ್ಷ್ಮೇಶ್ವರ: ಪಟ್ಟಣದ ಅಗಡಿ ಕಾಲೇಜಿನ ಹತ್ತಿರ ಕ್ಯಾಂಟರ್- ಬೈಕ್ ನಡುವೆ ಭಾನುವಾರ ಬೆಳಗ್ಗೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಗೋವನಾಳ ಗ್ರಾಮದ ಪ್ರಕಾಶ ಮ್ಯಾಗೇರಿ(28) ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.ಸವಣೂರು ಕಡೆಯಿಂದ ವೇಗವಾಗಿ ಬರುತ್ತಿದ್ದ ಕ್ಯಾಂಟರ್ ಹಾಗೂ ಲಕ್ಷ್ಮೇಶ್ವರ ಪಟ್ಟಣದಿಂದ ಗೋವನಾಳ ಗ್ರಾಮಕ್ಕೆ ಹೋಗುತ್ತಿದ್ದ ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು, ಬೈಕ್ ಸವಾರ ಪ್ರಕಾಶ ಮ್ಯಾಗೇರಿ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ. ಈ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.