ಸಾರಾಂಶ
ಶಿವಮೊಗ್ಗ: ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿರುವ ಆಟದ ಮೈದಾನದ ವಿಚಾರವಾಗಿ ಜಿಲ್ಲಾಧಿಕಾರಿ ತೆಗೆದುಕೊಂಡಿರುವ ನಿರ್ಧಾರ ಸರಿಯಿಲ್ಲ. ಈ ವಿಚಾರದ ಕುರಿತಾಗಿ ಲೋಕಾಯುಕ್ತರು ಹಾಗೂ ಹೈಕೋರ್ಟ್‌ನ ಮುಖ್ಯ ನ್ಯಾಯಧೀಶರನ್ನು ಭೇಟಿ ಮಾಡಿ ದೂರು ಸಲ್ಲಿಸುತ್ತೇವೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶಿವಮೊಗ್ಗ ಮಹಾನಗರ ಪಾಲಿಕೆಯ ಆಟದ ಮೈದಾನದ ಬಗ್ಗೆ ಸಾಕಷ್ಟು ಗೊಂದಲ ಉಂಟಾಗಿತ್ತು. ಮೈದಾನಕ್ಕೆ ಹಾಕಿದ್ದ ಬ್ಯಾರಿಕೇಡ್ ತೆಗೆದು ವಿವಾದ ಸುಖಾಂತ್ಯ ಕಂಡಿದೆ ಎಂದು ಡಿಸಿ ಹಾಗೂ ಎಸ್ಪಿ ಹೇಳಿದ್ದಾರೆ. ಆದರೆ, ಈಗಾಗಲೇ ನಾವು ಆ ಮೈದಾನಕ್ಕೆ ಅಕ್ರಮವಾಗಿ ಖಾತೆ ಮಾಡಿಕೊಡಲಾಗಿದೆ ಎಂದು ಆಯುಕ್ತರಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವರಿಕೆ ಮಾಡಿದ್ದೇವೆ. ಪಾಲಿಕೆ ಜಾಗವನ್ನು ಪಾಲಿಕೆಗೆ ನೀಡಬೇಕು. ಆಕ್ರಮ ಖಾತೆ ಮಾಡಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಹ ಮನವಿ ಮಾಡಿದ್ದೇವೆ. ಇದರ ನಡುವೆ ಡಿಸಿಯವರು ಈ ಸಮಸ್ಯೆಯನ್ನು ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ನಾವು ಈ ಸಮಸ್ಯೆಯನ್ನು ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳುವುದಾದರೆ ನೀವು ಡಿಸಿಯಾಗಿ ಯಾಕೆ ಇರಬೇಕು ಎಂದು ಪ್ರಶ್ನಿಸಿದರು.ಈ ವಿಚಾರವನ್ನು ಇಲ್ಲಿಗೆ ನಾವು ಕೈ ಬಿಡುವುದಿಲ್ಲ, ಮುಂದಿನ ಹೋರಾಟದ ಬಗ್ಗೆ ಸಹ ಕುಳಿತು ಚರ್ಚೆ ಮಾಡುತ್ತಿದ್ದೇವೆ. ಈಗಾಗಲೇ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ದಾಖಲೆಗಳನ್ನು ನೀಡಿದ್ದೇವೆ. ಮನವಿಗೆ ಸ್ಪಂದಿಸಿ ಸಮಸ್ಯೆ ಬಗೆಹರಿಸದೇ ಇದ್ದಲ್ಲಿ ಲೋಕಾಯುಕ್ತರನ್ನು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಯನ್ನು ಭೇಟಿ ಮಾಡಿ ದೂರು ನೀಡುತ್ತೇವೆ ಎಂದು ತಿಳಿಸಿದರು.ರೈಲ್ವೆ ಇಲಾಖೆಯ ಕಂಬಿಗಳನ್ನು ತಂದು ಅಕ್ರಮವಾಗಿ ಬೇಲಿ ಹಾಕಿದ್ದವರ ಬಗ್ಗೆ ಜಿಲ್ಲಾ ರಕ್ಷಣಾ ಇಲಾಖೆ ಇನ್ನೂ ಕ್ರಮ ಕೈಗೊಂಡಿಲ್ಲ. ಇದರ ಬಗ್ಗೆ ನಾವು ಕೇಳಿದಾಗ ಎಸ್ಪಿಯವರು ನಮಗೆ ಯಾರು ದೂರು ಕೊಟ್ಟಿಲ್ಲ ಎನ್ನುತ್ತಾರೆ. ಬಾಂಗ್ಲಾದೇಶದ ಹಿಂದೂಗಳ ಮೇಲೆನ ದೌರ್ಜನ್ಯ ಖಂಡಿಸಿ ಶಿವಮೊಗ್ಗದಲ್ಲಿ ಭಾಷಣ ಮಾಡಿದಕ್ಕೆ ನನ್ನ ಮೇಲೆ ಸುಮೋಟೋ ಕೇಸ್ ಹಾಕಿದ್ರಿ ಎಂದು ಪ್ರಶ್ನಿಸಿದರೆ ಉತ್ತರವನ್ನೇ ನೀಡಿಲ್ಲ. ಆದರೆ, ಈ ವಿಚಾರದಲ್ಲಿ ಏಕೆ ಆ ರೀತಿಯ ಕ್ರಮ ಕೈಗೊಂಡಿಲ್ಲ. ಈ ಎಲ್ಲದರ ವಿಚಾರವಾಗಿ ಕಾನೂನು ಹೋರಾಟಕ್ಕೂ ಮುಂದಾಗುತ್ತೇವೆ, ದೊಡ್ಡ ಪ್ರತಿಭಟನೆ ಸಹ ಮಾಡ್ತೇವೆ ಎಂದರು.ಶಾಸಕರು ಸುಖಾಂತ್ಯ ಎಂದು ಹೇಳಿದ್ದಾರೆ ನಿಜ, ಆದರೆ ಡಿಸಿ ಮತ್ತು ಎಸ್‌ಪಿಯವರು ಅವರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಈಗ ಬೇರೊಂದು ಕತೆ ಹೇಳುತ್ತಿದ್ದಾರೆ. ರಾಷ್ಟ್ರಭಕ್ತ ಬಳಗ ಸುಮ್ಮನೆ ಕೂರುವುದಿಲ್ಲ. ನಮ್ಮ ಕಾನೂನಾತ್ಮಕ ಹೋರಾಟವನ್ನು ಮುಂದುವರೆಸುತ್ತೇವೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಮಹಾಲಿಂಗಶಾಸ್ತ್ರಿ, ಬಾಲು, ಸುವರ್ಣಶಂಕರ್, ಶ್ರೀಕಾಂತ್, ಮೋಹನ್ ಕುಮಾರ್ ಜಾಧವ್, ಶಿವಾಜಿ, ಅನಿತಾ ಮಂಜುನಾಥ್, ರಾಧಾ ರಾಮಚಂದ್ರ, ಕುಬೇರಪ್ಪ, ಸೀತಾಲಕ್ಷ್ಮೀ, ರಾಜು ಮುಂತಾದವರು ಇದ್ದರು.ಜಾತಿ ಗಣತಿ ವರದಿ ಮಂಡನೆ
ಮಾಡುತ್ತಿರುವುದು ಸ್ವಾಗತಾರ್ಹಜಾತಿ ಗಣತಿ ವರದಿ ಮಂಡನೆ ಮಾಡಿ ಎಂದು ನಾನು ಒತ್ತಾಯಿಸುತ್ತಲೇ ಬಂದಿದ್ದೇ. ಮುಖ್ಯಮಂತ್ರಿ ಈಗ ಮಂಡನೆ ಮಾಡುತ್ತಿರುವುದು ಸ್ವಾಗತಾರ್ಹ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ಇದು ಸಾರ್ವಜನಿಕ ಚರ್ಚೆಯಾಗಬೇಕು. ಹಾಗೆಯೇ ಅನ್ವರ್ ಮಾನಪಾಡಿ ವರದಿ ಕೂಡ ಚರ್ಚೆಯಾಗಬೇಕು ಎಂದರು.ರಾಜ್ಯ ಗುತ್ತಿಗೆದಾರರ ಸಂಘವು ಕೂಡ, ರಾಜ್ಯ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಗುತ್ತಿಗೆದಾರರ ಸಂಘ ಯಾವ ಪಕ್ಷ ಕುಣಿಸಿತ್ತೋ ಹಾಗೆ ಕುಣಿಯುತ್ತಾರೇ ಎಂದ ಅವರು, ಹಿಂದೂತ್ವ ವಿಷಯದಲ್ಲಿ ಯತ್ನಾಳ್, ಸಿಟಿ ರವಿ, ಪ್ರತಾಪ ಸಿಂಹ ಎಲ್ಲರೂ ನನಗೆ ಒಂದೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.