ವಿವಿ ಮುಚ್ಚುವ ತೀರ್ಮಾನ ದುರದೃಷ್ಟಕರ: ಸಿದ್ದರಾಮಸ್ವಾಮಿ

| Published : Feb 18 2025, 12:34 AM IST

ವಿವಿ ಮುಚ್ಚುವ ತೀರ್ಮಾನ ದುರದೃಷ್ಟಕರ: ಸಿದ್ದರಾಮಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ನೂತನ ವಿಶ್ವವಿದ್ಯಾಲಯಗಳಿಗೆ ಸರ್ಕಾರ ಆರ್ಥಿಕ ನೀಡಿ ಅವುಗಳನ್ನು ಬೆಳೆಸಲು ಉತ್ತೇಜಿಸುವ ಬದಲು ಕುಂಟು ನೆಪವೊಡ್ಡಿ ರಾಜ್ಯದ 9 ವಿವಿ ಮುಚ್ಚಲು ತೀರ್ಮಾನ ತೆಗೆದುಕೊಂಡಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡ ಸಿದ್ದರಾಮಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಂಗಾವತಿ:

ಕೊಪ್ಪಳ ಸೇರಿದಂತೆ ರಾಜ್ಯದ 9 ವಿಶ್ವವಿದ್ಯಾಲಯಗಳನ್ನು ಸರ್ಕಾರ ಮುಚ್ಚಲು ಮುಂದಾಗಿರುವುದು ದುರದೃಷ್ಟಕರ ಎಂದು ಬಿಜೆಪಿ ಮುಖಂಡ ಎಚ್.ಎಂ. ಸಿದ್ರಾಮಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಈಗಾಗಲೇ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ಪದವಿ ಶಿಕ್ಷಣ ಕಾಲೇಜುಗಳು ಇದ್ದು, ಬಿಜೆಪಿ ಸರ್ಕಾರದ ಆಡಳಿತಾವಧಿಯಲ್ಲಿ ಉನ್ನತ ಶಿಕ್ಷಣಕ್ಕಾಗಿ ಗ್ರಾಮೀಣ ಭಾಗಕ್ಕೂ ವಿಶ್ವವಿದ್ಯಾಲಯ ಸ್ಥಾಪಿಸುವ ಮೂಲಕ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿತ್ತು. ನೂತನ ವಿವಿಗಳಿಗೆ ಸರ್ಕಾರ ಆರ್ಥಿಕ ನೀಡಿ ವಿವಿ ಬೆಳೆಸಲು ಉತ್ತೇಜಿಸುವ ಬದಲು ಕುಂಟು ನೆಪವೊಡ್ಡಿ ರಾಜ್ಯದ 9 ವಿವಿ ಮುಚ್ಚಲು ತೀರ್ಮಾನ ತೆಗೆದುಕೊಂಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಅವರು, ಯಾವ ಕಾರಣಕ್ಕೆ ವಿವಿ ಮುಚ್ಚಲಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಒತ್ತಾಯಿಸಿದ್ದಾರೆ. ಕೊಪ್ಪಳ ವಿವಿ ಇದೀಗ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. 40ಕ್ಕೂ ಹೆಚ್ಚು ಕಾಲೇಜು ಹೊಂದಿರುವ ಮತ್ತು 5000ಕ್ಕೂ ಹೆಚ್ಚು ವಿದ್ಯಾರ್ಥಿ ಹೊಂದಿರುವ ವಿವಿಯನ್ನು ಮುಚ್ಚುವ ತೀರ್ಮಾನ ತೆಗೆದುಕೊಂಡಿರುವುದು ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ದೂರಿದ್ದಾರೆ. ಜಿಲ್ಲೆಯ ಅಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರು, ಆರ್ಥಿಕ ಸಲಹೆಗಾರರು ಸೇರಿ ವಿಶ್ವವಿದ್ಯಾಲಯ ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.