ಹೂಲಗೇರಿಯಲ್ಲಿ ನೂತನ ದೇವಸ್ಥಾನ ಲೋಕಾರ್ಪಣೆ ನಾಳೆ

| Published : Feb 23 2024, 01:48 AM IST

ಸಾರಾಂಶ

ಕೆರೂರ: ಹೂಲಗೇರಿ ಗ್ರಾಮದ ಶ್ರೀ ಹೇಮ ವೇಮ ಸೇವಾ ಸಮಿತಿ ಮತ್ತು ಸಮಸ್ತ ಗುರುಹಿರಿಯರ ಸಂಯುಕ್ತ ಆಶ್ರಯದಲ್ಲಿ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಮತ್ತು ಮಹಾಯೋಗಿ ವೇಮನರ ಹಾಗೂ ಬಸವಣ್ಣ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ, ನೂತನ ದೇವಸ್ಥಾನದ ಲೋಕಾರ್ಪಣೆ ಫೆ.24ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.

ಶ್ರೀ ವೇಮನಾನಂದ ಶ್ರೀಗಳು (ರೆಡ್ಡಿ ಗುರು ಪೀಠ ಎರೆಹೂಸಳ್ಳಿ)ರಾಜನಹಳ್ಳಿಯ ಪ್ರಸನ್ನಾನಂದ ಪುರಿ ಶ್ರೀಗಳು, ತಿಂಥಣಿಯ ಸಿದ್ಧರಾಮಾನಂದ ಶ್ರೀಗಳು, ಕೆರೂರಿನ ಡಾ.ಶಿವಕುಮಾರ ಶಿವಾಚಾರ್ಯ ಶ್ರೀಗಳು, ಗದ್ದನಕೇರಿಯ ಮಳಿಯಪ್ಪ ಶ್ರೀಗಳು ಸಾನ್ನಿಧ್ಯ ವಹಿಸುವರು. ಸಚಿವರಾದ ಎಚ್‌.ಕೆ. ಪಾಟೀಲ, ರಾಮಲಿಂಗಾರೆಡ್ಡಿ, ಶಾಸಕ ಜೆ.ಟಿ. ಪಾಟೀಲ ನೂತನ ದೇವಸ್ಥಾನದ ಲೋಕಾರ್ಪಣೆ ಮಾಡುವರು. ಸಚಿವ ಆರ್‌.ಬಿ.ತಿಮ್ಮಾಪೂರ ಕಾರ್ಯಕ್ರಮ ಉದ್ಘಾಟಿಸುವರು. ಸಂಸದ ಪಿ.ಸಿ. ಗದ್ದಿಗೌಡರ, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಮಾಜಿ ಸಚಿವರಾದ ಎಸ್‌.ಆರ್‌. ಪಾಟೀಲ, ಡಾ,ಮುರುಗೇಶ ನಿರಾಣಿ, ಶಾಸಕ ಎನ್‌.ಎಚ್‌. ಕೋನರೆಡ್ಡಿ ಜ್ಯೋತಿ ಬೆಳಗಿಸುವರು.

ಮುಖ್ಯ ಅತಿಥಿಗಳಾಗಿ ಶಾಸಕರಾದ ಎಚ್‌.ವೈ.ಮೇಟಿ, ಭೀಮಸೇನ ಚಿಮ್ಮನಕಟ್ಟಿ, ಪಿ.ಎಚ್‌.ಪೂಜಾರ, ಸುನೀಲಗೌಡ ಪಾಟೀಲ, ಮಾಜಿ ಶಾಸಕರಾದ ಅಜಯಕುಮಾರ ಸರನಾಯಕ, ಬಿ.ಆರ್‌.ಯಾವಗಲ್ಲ, ದೊಡ್ಡನಗೌಡ ಪಾಟೀಲ, ಎಂ.ಕೆ. ಪಟ್ಟಣಶೆಟ್ಟಿ, ಎಸ್ಪಿ ಅಮರನಾಥ ರೆಡ್ಡಿ, ಗಣ್ಯರಾದ ಶಶಿಕಲಾ ಯಡಹಳ್ಳಿ, ಕಸ್ತೂರಿಬಾಯಿ ನಾಡಗೌಡ್ರ, ಸುಭಾಸ ಮೆಳ್ಳಿ, ಡಿ.ಎಂ.ಪೈಲ್‌, ಎಸ್‌.ಆರ್‌.ನಾಡಗೌಡ, ಡಿ.ಪಿ.ಅಮಲಝರಿ, ಸವಿತಾ ನಾರಪ್ಪನವರ ಸೇರಿದಂತೆ ಅನೇಕ ಗಣ್ಯರು ಆಗಮಿಸುವರೆಂದು ವಕೀಲ ರಾಜು ಕಕರಡ್ಡಿ ತಿಳಿಸಿದ್ದಾರೆ.