ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರ

ಪಟ್ಟಣದ ವೆಂಕಟೇಶ್ವರ ದೇವಸ್ಥಾನದ ಸಮೀಪದದಲ್ಲಿರುವ ಲಕ್ಷ್ಮಣಲಿಂಗ ದೇವಸ್ಥಾನದ ಹತ್ತಿರ ಬನ್ನಿಮುಡಿಯುವ ಕಾರ್ಯಕ್ರಮವು ವಿಜೃಂಭಣಿಯಿಂದ ಜರುಗಿತು.

ಈ ದೇವಸ್ಥಾನದ ಶರನ್ನವರಾತ್ರಿ ಪೂಜೆಯಲ್ಲಿ ನಾರಾಯಣ ಪಾಟೀಲ ಕುಲಕರ್ಣಿ ಶಮಿವೃಕ್ಷಕ್ಕೆ ಪೂಜೆ ಸಲ್ಲಿಸಿ ಬನ್ನಿಮುಡಿಯುವ ಕಾರ್ಯಕ್ಕೆ ಮಂಗಳವಾರ ಸಂಜೆ ಚಾಲನೆ ನೀಡಿದರು.

ಶಮಿವೃಕ್ಷಕ್ಕೆ ಪೂಜೆ ಸಲ್ಲಿಸುವ ವೇಳೆಯಲ್ಲಿ ವೆಂಕಟೇಶ್ವರ ದೇವರ ಹಾಗೂ ಲಕ್ಷ್ಮಣಲಿಂಗ ದೇವರ ಪಲ್ಲಕ್ಕಿಗಳು ಆಗಮಿಸಿ ಎರಡೂ ದೇವರಿಗೂ ಶಮಿವೃಕ್ಷದ ಬಳಿ ಪೂಜೆ ಸಲ್ಲಿಸಿ ನಂತರ ಪ್ರದಕ್ಷಿಣೆ ಹಾಕಿ ಖಡ್ಗದಿಂದ ಶಮಿ ವೃಕ್ಷಕ್ಕೆ ಸ್ಪರ್ಷಿಸುವ ಮೂಲಕ ಬನ್ನಿ ಮುಡಿಯುವ ಕಾರ್ಯವನ್ನು ನೆರವೇರಿಸಲಾಯಿತು.

ಈ ವೇಳೆ ನಾರಾಯಣ ಪಾಟೀಲ ಕುಲಕರ್ಣಿ ಮಾತನಾಡಿ, ಪಾಂಡವರ ವನವಾಸವು ಕಾಲದಲ್ಲಿ ಶಮಿವೃಕ್ಷದಲ್ಲಿ ತಮ್ಮ ಆಯುಧಗಳನ್ನು ಮುಚ್ಚಿ ಇಟ್ಟು ಅಜ್ಞಾತವಾಸಕ್ಕೆ ತೆರಳಿದ್ದರು. ಅಜ್ಞಾತವಾಸ ಮುಗಿದ ನಂತರ ಶಮಿವೃಕ್ಷದಲ್ಲಿನ ಆಯುಧಗಳನ್ನು ಪಡೆದುಕೊಂಡು ಕೌರವರ ಜೊತೆ ಯುದ್ದ ಮಾಡಿ ಗೆದ್ದಿದ್ದು ಇತಿಹಾಸ ತಿಳಿಸುತ್ತದೆ. ದುಷ್ಟ ಶಕ್ತಿ ಅಳಿದು ಶಿಷ್ಟ ಶಕ್ತಿ ಬೆಳೆಯಬೇಕು ಎಂಬುದನ್ನು ನಾವು ಅರಿಯುವುದು ಅಗತ್ಯವಾಗಿದೆ ಎಂದು ಅವರು ಹೇಳಿದರು


ಈ ವೇಳೆ ಗುರುರಾಜ ಪಾಟೀಲ ಕುಲಕರ್ಣಿ, ಅರ್ಚಕ ವೆಂಕಟೇಶ ಗುಡಿ, ಶ್ರೀಕಾಂತ ಪೂಜಾರ, ಗೋಪಾಲ ಪಡ್ನಿಸ್, ಪಲ್ಲಣ್ಣನವರು ಕುಲಕರ್ಣಿ, ಅರವಿಂದ ದೇಶಪಾಂಡೆ, ಅನಂತಭಟ್ ಪೂಜಾರ, ಚಿಕ್ಕರಸ ಪೂಜಾರ, ಕೃಷ್ಣ ಕುಲಕರ್ಣಿ, ಬಿ.ಕೆ. ಕುಲಕರ್ಣಿ, ರಾಜು ಹುಲಮನಿ, ದಿಗಂಬರ ಪೂಜಾರ, ಅನಿಲ ಕುಲಕರ್ಣಿ, ರಾಘವೇಂದ್ರ ಪೂಜಾರ, ರಮೇಶ ತೊರಗಲ, ಡಿ.ಪಿ. ಹೇಮಾದ್ರಿ, ಎ.ಪಿ. ಕುಲಕರ್ಣಿ, ಬಾಬು ಅಳವಂಡಿ, ನಾಗರಾಜ ಪೂಜಾರ ಸೇರಿದಂತೆ ಅನೇಕರಿದ್ದರು.