ಜನೋಪಯೋಗಿ ಆಡಳಿತ ನೀಡಿದ ದೇವರಾಜ ಅರಸು: ಡಾ.ದಾದಾಪೀರ್‌

| Published : Aug 21 2025, 01:00 AM IST

ಜನೋಪಯೋಗಿ ಆಡಳಿತ ನೀಡಿದ ದೇವರಾಜ ಅರಸು: ಡಾ.ದಾದಾಪೀರ್‌
Share this Article
  • FB
  • TW
  • Linkdin
  • Email

ಸಾರಾಂಶ

ಭೂ ಸುಧಾರಣೆ ಕಾಯ್ದೆ, ಹಿಂದುಳಿದ ವರ್ಗದವರಿಗೆ ಶೇ.೨೭ರಷ್ಟು ಮೀಸಲಾತಿ ಸೇರಿದಂತೆ ಹಲವು ಜನೋಪಯೋಗಿ ಆಡಳಿತ ನೀಡುವ ಮೂಲಕ ದೇವರಾಜ ಅರಸು ಅವರು ಕನ್ನಡಿಗರ ಜನಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ದಾದಾಪೀರ್ ನವಿಲೇಹಾಲ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಹರಿಹರ

ಭೂ ಸುಧಾರಣೆ ಕಾಯ್ದೆ, ಹಿಂದುಳಿದ ವರ್ಗದವರಿಗೆ ಶೇ.೨೭ರಷ್ಟು ಮೀಸಲಾತಿ ಸೇರಿದಂತೆ ಹಲವು ಜನೋಪಯೋಗಿ ಆಡಳಿತ ನೀಡುವ ಮೂಲಕ ದೇವರಾಜ ಅರಸು ಅವರು ಕನ್ನಡಿಗರ ಜನಮನದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ ಎಂದು ನಿವೃತ್ತ ಕನ್ನಡ ಪ್ರಾಧ್ಯಾಪಕ ಡಾ.ದಾದಾಪೀರ್ ನವಿಲೇಹಾಲ್ ಹೇಳಿದರು.

ನಗರದ ಗಿರಿಯಮ್ಮ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಹಿಂದುಳಿದ ವರ್ಗಗಳ ಇಲಾಖೆ ಹಾಗೂ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಮಾಜಿ ಸಿಎಂ ಡಿ.ದೇವರಾಜ ಅರಸು ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು. ೮ ವರ್ಷ ಸಿಎಂ ಹುದ್ದೆಯಲಿದ್ದ ಅರಸು, ಭೂ ಸುಧಾರಣಾ ಕಾಯ್ದೆ ಸಮರ್ಪಕ ಜಾರಿಯಾಗುವಲ್ಲಿ ಆಸ್ಥೆ ವಹಿಸಿ, ಲಕ್ಷಾಂತರ ಭೂ ರಹಿತರಿಗೆ ಭೂಮಿಭಾಗ್ಯ ನೀಡಿದರು, ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳ ನಿರ್ಮಿಸಿದರು ಎಂದರು.

ಅಧ್ಯಕ್ಷತೆ ವಹಿಸಿದ್ದ ತಹಸೀಲ್ದಾರ್ ಕೆ.ಎಂ. ಬಸವರಾಜ್ ಮಾತನಾಡಿ, ಆಡಳಿತ ಅವಧಿಯಲ್ಲಿ ಅರಸು ಅವರು ಮಲ ಹೊರುವ ಪದ್ಧತಿ ನಿಷೇಧಿಸಿ ಪೌರ ಕಾರ್ಮಿಕರೆಂದು ಹೆಸರು ಘೋಷಿಸಿದರು. ವಸತಿ ಯೋಜನೆ ಮೂಲಕ ಬಡವರಿಗೆ ಸೂರಿನ ವ್ಯವಸ್ಥೆ ಮಾಡಿದರು, ಎಲ್ಲ ಹಿಂದುಳಿದ ವರ್ಗದ ಬಡವರಿಗೆ ಶಕ್ತಿ ತುಂಬುವ ಕೆಲಸ ಅರಸು ಮಾಡಿದರು ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಕವಿತಾ ಮಾರುತಿ ಬೇಡರ್ ಮುಖ್ಯ ಅತಿಥಿಯಾಗಿ ಮಾತನಾಡಿ, ಸಂವಿಧಾನದ ಮೂಲಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಹಲವು ಯೋಜನೆಗಳು ಜಾರಿಯಾಗಿದ್ದವು. ಆದರೆ ಸಂಕಷ್ಟದಲ್ಲಿದ್ದ ಹಿಂದುಳಿದ ವರ್ಗದವರ ಸಾಮಾಜಿಕ ಉನ್ನತೀಕರಣಕ್ಕೆ ಇದ್ದ ತೊಡಕುಗಳನ್ನು ನಿವಾರಿಸಲು ಅರಸು ಸಾಕಷ್ಟು ಶ್ರಮವಹಿಸಿದರು ಎಂದರು.

ತಾಲೂಕು ಪಂಚಾಯಿತಿ ಇಒ ಸುಮಲತಾ ಎಸ್.ಪಿ., ಬಿಇಒ ಡಿ.ದುರ್ಗಪ್ಪ, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಅಸ್ಮಾ ಬಾನು, ಟಿಎಚ್‌ಒ ಅಬ್ದುಲ್ ಖಾದರ್, ಕೃಷಿ ಸಹಾಯಕ ನಿರ್ದೇಶಕ ನಟರಾಜ್, ಬೆಸ್ಕಾಂ ಎಇಇ ಕೆ.ಲಕ್ಷ್ಮಪ್ಪ, ಸಿಡಿಪಿಒ ಪ್ರಿಯದರ್ಶಿನಿ, ಕಾರ್ಮಿಕ ನಿರೀಕ್ಷಕಿ ಜೆ.ಕವಿತಾ ಕುಮಾರಿ, ಬಿಸಿಎಂ ವ್ಯವಸ್ಥಾಪಕ ಎಚ್.ಬಿ.ಪಾಟೀಲ, ಹೇಮಾವತಿ, ಯಶೋಧ, ನಿಲಯ ಪಾಲಕರು, ವಿದ್ಯಾರ್ಥಿಗಳಿದ್ದರು.

ಕಾರ್ಯಕ್ರಮದಲ್ಲಿ ಮಹಾಲಕ್ಷ್ಮೀ ಪ್ರಾರ್ಥನೆ, ಆಸ್ಮಾ ಬಾನು ಸ್ವಾಗತ, ಹೇಮಾವತಿ ನಿರೂಪಣೆ ಮತ್ತು ಯಶೋಧ ವಂದನಾರ್ಪಣೆ ನೆರವೇರಿಸಿದರು.

- - - (** ಈ ಫೋಟೋ-ಕ್ಯಾಪ್ಷನ್‌ ಪ್ಯಾನೆಲ್‌ಗೆ ಬಳಸಬಹುದು)

-20HRR05.ಜೆಪಿಜಿ:

ಮಾಜಿ ಸಿಎಂ ಡಿ.ದೇವರಾಜ ಅರಸು ಜಯಂತಿಯನ್ನು ನಗರಸಭೆ ಅಧ್ಯಕ್ಷೆ ಕವಿತಾ ಬೇಡರ್ ಉದ್ಘಾಟಿಸಿದರು. ತಹಸೀಲ್ದಾರ್ ಕೆ.ಎಂ.ಗುರುಬಸವರಾಜ್ ಇತರರು ಇದ್ದರು.