ಬಿಳಿಗಿರಿ ರಂಗನಾಥಸ್ವಾಮಿ ದೇಗುಲ ಅಭಿವೃದ್ಧಿ ನನ್ನ ಸಂಕಲ್ಪ

| Published : Mar 23 2025, 01:34 AM IST

ಸಾರಾಂಶ

ತಿರುಪತಿಯ ವೆಂಕಟೇಶ್ವರಣ ಸ್ವಾಮಿ ದೇಗುಲ ಮತ್ತು ಶ್ರೀ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇಗುಲ ಮಾದರಿಯಲ್ಲಿಯೇ ಬಿಳಿಗಿರಿ ರಂಗನಾಥಸ್ವಾಮಿ ದೇಗುಲದ ಸಮಗ್ರ ಅಭಿವೃದ್ಧಿ ಮಾಡಬೇಕು ಎಂಬುದು ನನ್ನ ಅಭಿಲಾಷೆಯಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆದು ನನ್ನ ಅವಧಿಯಲ್ಲಿ ಇದನ್ನೆ ಮುನ್ನುಡಿ ಬರೆಯಬೇಕೆಂಬ ಹೆಚ್ಚಿನ ಹಂಬಲ ಹೊಂದಿರುವೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ತಿರುಪತಿಯ ವೆಂಕಟೇಶ್ವರಣ ಸ್ವಾಮಿ ದೇಗುಲ ಮತ್ತು ಶ್ರೀ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ಸ್ವಾಮಿ ದೇಗುಲ ಮಾದರಿಯಲ್ಲಿಯೇ ಬಿಳಿಗಿರಿ ರಂಗನಾಥಸ್ವಾಮಿ ದೇಗುಲದ ಸಮಗ್ರ ಅಭಿವೃದ್ಧಿ ಮಾಡಬೇಕು ಎಂಬುದು ನನ್ನ ಅಭಿಲಾಷೆಯಾಗಿದ್ದು ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆದು ನನ್ನ ಅವಧಿಯಲ್ಲಿ ಇದನ್ನೆ ಮುನ್ನುಡಿ ಬರೆಯಬೇಕೆಂಬ ಹೆಚ್ಚಿನ ಹಂಬಲ ಹೊಂದಿರುವೆ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.

ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಈ ಕುರಿತು ಪ್ರವಾಸೋದ್ಯಮ ಸಚಿವರ ಗಮನ ಸೆಳೆದಿರುವೆ ಎಂದರು. ನಾನು ಎಂದಿಗೂ ಸಹಾ ಅನುದಾನ ಮಂಜೂರಾಗದೆ ಭೂಮಿ ಪೂಜೆ ಮಾಡಲ್ಲ, ಜನಪ್ರತಿನಿಧಿಯಾದವರು ಇದಕ್ಕೆ ಅವಕಾಶ ನೀಡಬಾರದು. ಲಭ್ಯತೆ ಅನುಧಾನಕ್ಕೆ ಭೂಮಿ ಪೂಜೆ ಮಾಡುವುದು ಸರಿಯಾದ ಕ್ರಮವಲ್ಲ, ಈ ಕ್ರಮವನ್ನು ನಾನು ಚಾಚು ತಪ್ಪದೇ ಪಾಲಿಸುತ್ತ ಬಂದಿರುವೆ. 2025, 26ರಲ್ಲಿಯೂ ಸಹಾ ಸರ್ಕಾರದಿಂದ ಹೆಚ್ಚುವರಿ ಅನುದಾನ ಬಿಡುಗಡೆಯಾಗಲಿದೆ ಎಂದರು.

ರೇಷ್ಮೆ ಇಲಾಖೆ ಕಟ್ಟಡಗಳ ಬಗ್ಗೆ ಸದನದಲ್ಲಿ ಚರ್ಚೆ:ರಾಜ್ಯದಲ್ಲಿನ ರೇಷ್ಮೆ ಇಲಾಖೆಗೆ ಸೇರಿದ ಕಟ್ಟಡಗಳು ಹಾಗೂ ಖಾಲಿ ಜಾಗಗಳನ್ನು ಯಾವ್ಯಾವ ಇಲಾಖೆಗಳ ವಶಕ್ಕೆ ನೀಡಲಾಗಿದೆ, ಈ ಸಂಬಂಧ ಮಾಹಿತಿ ಒದಗಿಸಿ ಶಾಸಕರು ವಿಧಾನಸಭೆ ಅಧಿವೇಶನದಲ್ಲಿ ಪ್ರಶ್ನಿಸಿದರು. ಈ ವೇಳೆ ಪ್ರತಿಕ್ರಿಯಿಸಿದ ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್ ಅವರು ರಾಜ್ಯದಲ್ಲಿನ ರೇಷ್ಮೆ ಇಲಾಖೆಗೆ ಸೇರಿದ ಕಟ್ಟಡಗಳು, ಇತರ 10 ಇಲಾಖೆಗಳಿಗೆ ಹಾಗೂ ಖಾಲಿ ಜಾಗವನ್ನು ಇತರೆ 24 ಇಲಾಖೆಗಳಿಗೆ ಹಸ್ತಾಂತರಿಸಲಾಗಿದೆ.

ರಾಜ್ಯದಲ್ಲಿ ಸುಮಾರು 254 ನೋಂದಾಯಿತ ಚಾಕಿ ಸಾಕಾಣಿಕಾ ಕೇಂದ್ರಗಳು ಕೆಲಸ ಮಾಡುತ್ತಿದ್ದು, ಇಲ್ಲಿ ನಿರಂತರವಾಗಿ ಮೊಟ್ಟೆಗಳನ್ನು ಚಾಕಿ ಮಾಡಿ ರೈತರಿಗೆ ವಿತರಿಸಲಾಗುತ್ತಿದೆ. ರೇಷ್ಮೆ ಬೆಳೆಗಾರರಿಗೆ ಚಾಕಿ ಶುಲ್ಕದ ಆರ್ಥಿಕ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಈಗಾಗಲೇ ಅಲ್ಪಪ್ರಮಾಣದಲ್ಲಿ ಕೆಲವು ಆಯ್ಕೆ ಮಾಡಿರುವ ಕೃಷಿ ಕ್ಷೇತ್ರಗಳಿಂದ ದ್ವಿತಳಿ ಚಾಕಿ ಮಾಡಿ ರೈತರಿಗೆ ವಿತರಿಸುತ್ತಿದ್ದು, ಹೆಚ್ಚಿನ ಪ್ರಮಾಣದಲ್ಲಿ ದ್ವಿತಳಿ ಚಾಕಿ ಮಾಡಿ ರೈತರಿಗೆ ವಿತರಿಸಲು ಯೋಜಿಸಿದ್ದು, ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಕ್ರಮವಹಿಸಲಾಗುತ್ತಿದೆ.‌ ಸಾಕಾಣಿಕಾ ಕೇಂದ್ರಗಳ ಮುಖಾಂತರ ಸರಬರಾಜಾಗಿರುವ ಚಾಕಿ ಹುಳುಗಳು ಉತ್ತ ಮವಾಗಿ ಆರೋಗ್ಯಕರವಾಗಿದ್ದು, ಉತ್ತಮ ಗುಣ ಮಟ್ಟದ ಗೂಡು ಉತ್ಪಾದಿಸಲು ಹಾಗೂ ರೈತರಿಗೆ ಆರ್ಥಿಕ ಲಾಭ ಪಡೆಯಲು ಅವಕಾಶವಾಗಲಿದೆ.

ಚಾಮ ರಾಜನಗರ ಜಿಲ್ಲೆಯಲ್ಲಿನ ಸರ್ಕಾರಿ ರೇಷ್ಮೆ ನೂಲು ಬಿಚ್ಚಾಣಿಕೆ ಕಾರ್ಖಾನೆಗಳ ಜಾಗದಲ್ಲಿರುವ ಹಾಲಿ ಸೌಕಾರ್ಯಗಳನ್ನು ಬಳಸಿಕೊಂಡು ಆ ಭಾಗದ ರೇಷ್ಮೆ ನೂಲು ಬಿಚ್ಚಾಣಿಕೆದಾರರ ಸಬಲೀಕರಣದ ಕುರಿತು ಪ್ರಸ್ತಾವನೆ ತಯಾರಿಸಿದ್ದು ಪರಿಶೀಲಿಸಲಾಗುತ್ತಿದೆ ಎಂದರು.

ಹಾಲು ಒಕ್ಕೂಟಕ್ಕೆ ₹51ಕೋಟಿ ಬಿಡುಗಡೆಯಾಗಬೇಕಿದೆ:ಚಾಮರಾಜನಗರ ಜಿಲ್ಲೆಯಲ್ಲಿ ಕರ್ನಾಟಕ ಸರ್ಕಾರದ ನಡಾವಳಿಗಳ ರೀತ್ಯಾ ಮೈಸೂರು- ಚಾಮರಾಜನಗರ ಹಾಲು ಒಕ್ಕೂಟವನ್ನು ವಿಭಜಿಸಿ ಚಾಮರಾಜನಗರ ಜಿಲ್ಲೆಗೆ ಪ್ರತ್ಯೇಕ ಹಾಲು ಒಕ್ಕೂಟವನ್ನು ಸ್ಥಾಪಿಸಲು ಸರ್ಕಾರ 83 ಕೋಟಿಗಳ ವೆಚ್ಚದಲ್ಲಿ ಸ್ಥಾಪಿಸಲು ತಾತ್ವಿಕ ಅನುಮೋದನೆ ನೀಡಲಾಗಿತ್ತು. ಆದರೆ ಸದರಿ ತಾತ್ವಿಕ ಅನುಮೋದನೆ ಷರತ್ತನ್ನು ಸಡಿಲಗೊಳಿಸಿ 2014 ಮೇ. 28 ರಂದು 83 ಕೋಟಿಗಳ ವೆಚ್ಚದಲ್ಲಿ ಪ್ರತ್ಯೇಕ ಹಾಲು ಒಕ್ಕೂಟವನ್ನು ಸ್ಥಾಪಿಸಲು ಆಡಳಿತಾತ್ಮಕ ನೀಡಲಾಗಿದ್ದು ಅದರಂತೆ 2014-15ನೇ ಸಾಲಿನಲ್ಲಿ ಹೈನುಗಾರಿಕೆ ಮೂಲಭೂತ ಸೌಲಭ್ಯದಡಿಯಲ್ಲಿ ₹11.10 ಕೋಟಿ ಹಾಗೂ 2015-16 ನೇ ಸಾಲಿ ನಲ್ಲಿ ರಾಷ್ಟ್ರೀಯ ಹೈನುಗಾರಿಕೆ ಯೋಜನೆಯಡಿ ರೂ.20ಕೋಟಿ ಬಿಡುಯಾಗಿದ್ದು ಉಳಿಕೆಯಾದ ₹51.89 ಕೋಟಿ ಬಿಡುಗಡೆಯಾಗಬೇಕಿದೆ ಎಂದು ಸದನದಲ್ಲಿ ಶಾಸಕ ಕೃಷ್ಣಮೂತಿ೯ ಅವರ ಚುಕ್ಕೆ ಗುರಿತಿನ ಪ್ರಶ್ನೆಗೆ ಉತ್ತರಿಸಿದರು.