ಗುಮ್ಮಟ ಗಲ್ಲಿಯ ಭಕ್ತಾದಿಗಳು ಇತರರಿಗೂ ಮಾದರಿ

| Published : Oct 10 2024, 02:18 AM IST

ಸಾರಾಂಶ

ತೇರದಾಳ(ರ-ಬ) ಪಟ್ಟಣದ ಗುಮ್ಮಟ ಗಲ್ಲಿಯ ಭಕ್ತಾದಿಗಳು ಇತರರಿಗೆ ಮಾದರಿಯಾಗಿದ್ದಾರೆ. ಬಸವ ಪುರಾಣ ನಡೆದಾಗ ಅ.೨೧ರಂದು ಒಂದು ದಿನ ಎಲ್ಲರಿಗೂ ಹೋಳಿಗೆ-ತುಪ್ಪ ಊಟದ ವ್ಯವಸ್ಥೆ ಮಾಡುವುದಲ್ಲದೇ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮಕ್ಕಾಗಿ ₹೨೦೧೧೦೦ಗಳನ್ನು ಸಂಗ್ರಹಿಸಿ ನಮಗೆ ಕೊಟ್ಟಿರುವುದು ಅಭಿನಂದನಾರ್ಹವಾಗಿದೆ ಎಂದು ಅಲ್ಲಮಪ್ರಭು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಜಮಖಂಡಿ ಶಾಸಕ, ನಾಡೋಜ ಜಗದೀಶ ಗುಡಗುಂಟಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ತೇರದಾಳ(ರ-ಬ)

ಪಟ್ಟಣದ ಗುಮ್ಮಟ ಗಲ್ಲಿಯ ಭಕ್ತಾದಿಗಳು ಇತರರಿಗೆ ಮಾದರಿಯಾಗಿದ್ದಾರೆ. ಬಸವ ಪುರಾಣ ನಡೆದಾಗ ಅ.೨೧ರಂದು ಒಂದು ದಿನ ಎಲ್ಲರಿಗೂ ಹೋಳಿಗೆ-ತುಪ್ಪ ಊಟದ ವ್ಯವಸ್ಥೆ ಮಾಡುವುದಲ್ಲದೇ ದೇವಸ್ಥಾನ ಲೋಕಾರ್ಪಣೆ ಕಾರ್ಯಕ್ರಮಕ್ಕಾಗಿ ₹೨೦೧೧೦೦ಗಳನ್ನು ಸಂಗ್ರಹಿಸಿ ನಮಗೆ ಕೊಟ್ಟಿರುವುದು ಅಭಿನಂದನಾರ್ಹವಾಗಿದೆ ಎಂದು ಅಲ್ಲಮಪ್ರಭು ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ, ಜಮಖಂಡಿ ಶಾಸಕ, ನಾಡೋಜ ಜಗದೀಶ ಗುಡಗುಂಟಿಮಠ ಹೇಳಿದರು.

ಪಟ್ಟಣದ ಕ್ಷೇತ್ರಾಧಿಪತಿ ಅಲ್ಲಮಪ್ರಭುದೇವರ ದೇವಸ್ಥಾನವು ನ.೧೧ರಂದು ಲೋಕಾರ್ಪಣೆಗೊಳ್ಳುವ ಹಿನ್ನೆಲೆಯಲ್ಲಿ ದೇವಸ್ಥಾನ ಆವರಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ತಿಂಗಳ ಪರ್ಯಂತ ನಡೆಯಲಿರುವ ಕಾರ್ಯಕ್ರಮ ಅ.೧೪ರ ಅಲ್ಲಮಪ್ರಭು ದಿವ್ಯ ಪರಂಜ್ಯೋತಿಯ ಆಗಮನದೊಂದಿಗೆ ಪ್ರಾರಂಭಗೊಳ್ಳುವುದು. ಅದರ ಸಂಪೂರ್ಣ ತಯಾರಿಯಾಗಬೇಕು. ಇದೇ ವರ್ಷ ಹಚ್ಚಿದ ಕಬ್ಬಿನ ಬೆಳೆಯನ್ನು ತೆಗೆದು ಕಾರ್ಯಕ್ರಮ ಮಾಡಲು ಜಮೀನುಗಳನ್ನು ಖಾಲಿ ಮಾಡಿಕೊಡುತ್ತಿರುವ ಭಕ್ತಾದಿಗಳು, ವಚನೋತ್ಸವದ ಮೆರವಣಿಗೆಗೆ ಆನೆ-ಅಂಬಾರಿ ವ್ಯವಸ್ಥೆ ಮಾಡುವವರು, ನ.೯,೧೦,೧೦ರವರೆಗೆ ದೇವಸ್ಥಾನಕ್ಕೆ ಪುಷ್ಪಾಲಂಕಾರ ಮಾಡಲು ಒಪ್ಪಿಕೊಂಡಿರುವ ಭಕ್ತರ ಭಕ್ತಿಗೆ ನಾವು ಅಭಿನಂದಿಸಲೇಬೇಕು ಎಂದರು.ಇದಕ್ಕೂ ಮೊದಲು ಮಲ್ಲಪ್ಪಣ್ಣ ಜಮಖಂಡಿ, ಯಮನಪ್ಪ ಮುಕುಂದ, ಜಗದೀಶ ಮುಕುಂದ, ಶ್ರೀಶೈಲ ಸಸಾಲಟ್ಟಿ ಮುಂತಾದ ಮುಖಂಡರು ತಮ್ಮ ಗಲ್ಲಿಯಲ್ಲಿ ಭಕ್ತಾಧಿಗಳಿಂದ ಸಂಗ್ರಹಿಸಿದ ಹಣವನ್ನು ಕಮೀಟಿಗೆ ಅರ್ಪಿಸಿದರು. ಈ ವೇಳೆ ಬಸವರಾಜ ಬಾಳಿಕಾಯಿ, ಅಜಿತ ದೇಸಾಯಿ, ಬಸವರಾಜ ನಿರ್ವಾಣಿ, ಶಂಕರ ಕುಂಬಾರ, ಅರ್ಜುನ ಖ್ಯಾತಗೊಂಡ, ಭುಜಬಲಿ ಕೆಂಗಾಲಿ, ರವಿ ಸಲಬನ್ನವರ, ಈರಪ್ಪ ಬಾಳಿಕಾಯಿ ಅನೇಕರು ಪೂರ್ವತಯ್ಯಾರಿ ಕಾರ್ಯಗಳನ್ನು ವಿವರಿಸಿದರು. ನೇತೃತ್ವ ವಹಿಸಿದ್ದ ಚಿಮ್ಮಡದ ಪ್ರಭು ಶ್ರೀ, ಇಲ್ಲಿನ ಹಿರೇಮಠದ ಗಂಗಾಧರ ದೇವರು ಆಶೀರ್ವಚನ ನೀಡಿದರು. ಪ್ರಸನ್ನಕುಮಾರ ದೇಸಾಯಿ, ನಾಗಪ್ಪ ಸನದಿ, ಅರ್ಚಕ ಪರಯ್ಯ ಮೇಲಿನಮನಿ, ನಿಂಗಪ್ಪ ಮಾಲಗಾಂವಿ ವೇದಿಕೆ ಮೇಲಿದ್ದರು.