ವಿಶೇಷಚೇತನರು ಆರೋಗ್ಯವಂತ ಸಮಾಜ ನಿರ್ಮಾಣದ ಶಿಲ್ಪಿಗಳು: ಡಾ.ಪೂರ್ಣಿಮಾ

| Published : Mar 11 2025, 12:50 AM IST

ವಿಶೇಷಚೇತನರು ಆರೋಗ್ಯವಂತ ಸಮಾಜ ನಿರ್ಮಾಣದ ಶಿಲ್ಪಿಗಳು: ಡಾ.ಪೂರ್ಣಿಮಾ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್ ನಗರದ ಡಾ.ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ಶನಿವಾರ ಜೀವನ ಪ್ರಕಾಶ ಕಲ್ಚರಲ್ ಮತ್ತು ವೆಲ್ಫರ್ ಸೊಸೈಟಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ 2023-24 ನೇ ಸಾಲಿನ ವಿಶೇಷ ಘಟಕ ಯೋಜನೆಯಡಿಯಲ್ಲಿ ವಿಶೇಷಚೇತನರ ಕಲಾ ಪ್ರತಿಭೋತ್ಸವ ಜರುಗಿತು.

ಕನ್ನಡಪ್ರಭ ವಾರ್ತೆ ಬೀದರ್ವಿಕಲಚೇತನರಿಗೆ ರಾಜ್ಯದ ಮೂಲೆಮೂಲೆಯಿಂದ ಕರೆಯಿಸಿ, ಅವರಲ್ಲಿರುವ ಸಾಹಿತ್ಯ, ಸಂಗೀತದ ಪ್ರತಿಭೆಯನ್ನು ಅರಳಿಸುವ ಕೆಲಸ ಜೀವನ ಪ್ರಕಾಶ ಅಧ್ಯಕ್ಷ ದಿಲೀಪ ಕಾಡವಾಡ ಮಾಡಿದ್ದಾರೆ. ಇದು ರಾಜ್ಯ, ರಾಷ್ಟ್ರ ಮಟ್ಟದ ಮಾದರಿ ಕಾರ್ಯಕ್ರಮವಾಗಿದೆ ಎಂದು ಜ್ಞಾನಸುಧಾ ವಿದ್ಯಾಲಯದ ಅಧ್ಯಕ್ಷರಾದ ಡಾ.ಪೂರ್ಣಿಮಾ ಜಾರ್ಜ್‌ ತಿಳಿಸಿದರು.ನಗರದ ಡಾ.ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ ಜೀವನ ಪ್ರಕಾಶ ಕಲ್ಚರಲ್ಸ್‌ ಸಂಯುಕ್ತಾಶ್ರಯದಲ್ಲಿ 2023-24 ನೇ ಸಾಲಿನ ವಿಶೇಷ ಘಟಕ ಯೋಜನೆಯಡಿಯಲ್ಲಿ ವಿಶೇಷಚೇತನರ ಕಲಾ ಪ್ರತಿಭೋತ್ಸವ ರಾಜ್ಯಮಟ್ಟದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿಕಲಚೇತನರ ಕಾಳಜಿ, ಕಳಕಳಿ ಹೊಂದಿರುವುದರಿಂದ ಈ ಕಾರ್ಯಕ್ರಮ ಮಾಡಲು ಸಾಧ್ಯವಾಗಿದೆ ಎಂದರು.ವಿಕಲಚೇತನರನ್ನು ಪಾಪಪುಣ್ಯ ಎಂದು ನೋಡದೆ ಅವರು ಒಂದು ಸಮಾಜದ ಅಂಗವೆಂದು ನೋಡಿ ವಿಕಲಚೇತನರ ಪ್ರಗತಿಗೆ ಶ್ರಮಿಸಬೇಕೆಂದು ಹುಲಸೂರಿನ ಪೂಜ್ಯ ಶಿವಾನಂದ ಸ್ವಾಮಿ ಹೇಳಿದರು.ಜನಪದ ಹಾಡುಗಾರ ಶಂಭುಲಿಂಗ ವಾಲದೊಡ್ಡಿ, ಜೆಸ್ಸಿ ಸೋನವಾನೆ ಸ್ವಾಗತಿಸಿದರು.ದಿಲೀಪ ಕಾಡವಾದ ಅಧ್ಯಕ್ಷತೆ ವಹಿಸಿ ಮಾತನಾಡಿ, ನನ್ನಗೆ ವಿಕಲಚೇತನೆಂದು ದೂರಿಡದೆ ಅವಕಾಶವನ್ನು ನೀಡಿದ್ದಕ್ಕಾಗಿ ಪ್ರತಿ ವರ್ಷದಂತೆ ಈ ವರ್ಷ ಕೂಡ ರಾಜ್ಯಮಟ್ಟದ ಕಾರ್ಯಕ್ರಮ ಹಾಗೂ ವಿಕಲ ಚೇತನರು ಬರೆದಿರುವ ‘ಪ್ರತಿಭಾ ಕಾವ್ಯಾಂಜಲಿ’ ಕೃತಿ ಪ್ರಕಟಣೆ ಮಾಡಲು ಸಾಧ್ಯವಾಯಿತು ಎಂದರು.ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ಸಂಜುಕುಮಾರ ಅತಿವಾಳೆ, ಹಿರಿಯ ಸಾಹಿತಿ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ, ವಿಕಲಚೇತನರ ಜಿಲ್ಲಾ ಕಲ್ಯಾಣ ಅಧಿಕಾರಿ ಮಹಾದೇವ ಮೊಂಗಳೆ, ನಿಕಟಪೂರ್ವ ಕಸಾಪ ತಾಲ್ಲೂಕ ಅಧ್ಯಕ್ಷ ಎಂ ಎಸ್ ಮನೋಹರ್, ಬುಡಕಟ್ಟು ಕಲಾ ಪರಿಷತ್ತಿನ ರಾಷ್ಟ್ರೀಯ ಕಾರ್ಯದರ್ಶಿ ಡಾ.ರಾಜಕುಮಾರ ಹೆಬ್ಬಾಳೆ, ಸಾಹಿತಿಗಳಾದ ಪಾರ್ವತಿ ಸೋನಾರೆ, ಹಿರಿಯ ಕಲಾವಿದರಾದ ರಾಣಿ ಸತ್ಯಮೂರ್ತಿ, ಗಾಯಕಿ ರೇಖಾ ಅಪ್ಪರಾವ ಸೌದಿ, ಪುಂಡಲಿಕರಾವ ಪಾಟೀಲ್, ರಾಜೇಂದ್ರ ಸಿಂಗ ಪವಾರ, ಡಾ.ಗಣಾಪೂರ, ಮಹೇಶಕುಮಾರ ಕುಂಬಾರ ಸ್ವಾಮಿದಾಸ ನಾಗೂರೆ, ರಾಜಕುಮಾರ ಮನಗೇರಿ, ಮಂಗಲಾ ಮರ್ಕಲೆ, ಸುನೀಲ ಚಾಂಬೋಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕವಿಗೋಷ್ಠಿ ಜಾನಪದ ನೃತ್ಯ, ಮಿಮಿಕ್ರಿಯೆ, ಭಾಷಣ, ಸುಗಮ ಸಂಗೀತ, ಜಾನಪದ ಸಂಗೀತ ಕಾರ್ಯಕ್ರಮ ಜಿಲ್ಲೆಯ ಕಲಾವಿದರು ಹೊರ ಜಿಲ್ಲೆಯ ಕಲಾವಿದರು ಭಾಗವಹಿಸಿದರು.