ಗಣತಿ ಕಾರ್ಯ ಪರಿಶೀಲಿಸಿದ ಜಿಲ್ಲಾಧಿಕಾರಿ

| Published : May 25 2025, 02:12 AM IST / Updated: May 25 2025, 02:13 AM IST

ಸಾರಾಂಶ

ಒಳಮೀಸಲಾತಿ ವರ್ಗೀಕರಣ ಜನಗಣತಿಯ ಕಾರ್ಯವನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಶನಿವಾರ ಪರಿಶೀಲನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಒಳಮೀಸಲಾತಿ ವರ್ಗೀಕರಣ ಜನಗಣತಿಯ ಕಾರ್ಯವನ್ನು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಶನಿವಾರ ಪರಿಶೀಲನೆ ನಡೆಸಿದರು.ನಗರದ ಟೀಚರ್ಸ್‌ ಕಾಲನಿ, ಮಹಲಿಂಗೇಶ್ವರ ಕಾಲನಿ, ರೆಹಮತ ನಗರ ಮುಂತಾದ ಪ್ರದೇಶಗಳಿಗೆ ಭೇಟಿ ನೀಡಿದ ಅವರು, ಜಾತಿಗಣತಿ ಕಾರ್ಯವನ್ನು ಪರಿಶೀಲಿಸಿದರು. ನಿವಾಸಿಗಳ ಮನೆಗಳಿಗೆ ತೆರಳಿ ಗಣತಿಕಾರ್ಯಕ್ಕೆ ಸಿಬ್ಬಂದಿ ಬಂದಿರುವ ಬಗ್ಗೆ ಮಾಹಿತಿ ಪಡೆದರು. ಒಳ ಮೀಸಲಾತಿಗಾಗಿ ಜಾತಿ ಗಣತಿ ನಡೆಯುತ್ತಿದ್ದು, ಯಾರೊಬ್ಬರು ಅದರಿಂದ ವಂಚಿತವಾಗಬಾರದು. ಗಣತಿ ಮಾಡುವ ಸಿಬ್ಬಂದಿ ಹಾಗೂ ಮೇಲ್ವಿಚಾರಕರು ಕೈಗೊಂಡಿರುವ ಕ್ರಮಗಳನ್ನು ಖುದ್ದಾಗಿ ಪರಿಶೀಲನೆ ನಡೆಸಿದರು. ಗಣತಿಕಾರ್ಯ ದಲ್ಲಿ ಆಧಾರ್‌ ಕಾರ್ಡ ಇಲ್ಲದವರು, ಶಾಲಾ ಮಕ್ಕಳು ಉಳಿದು ಬಿಡುತ್ತಾರೆ ಎಂಬ ದೂರುಗಳು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪರಿಶೀಲಿಸಿ ಮಾಹಿತಿ ಪಡೆದರು. ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ, ತಹಸೀಲ್ದಾರ ಸದಾಶಿವ ಮಕ್ಕೊಜಿ, ಪೌರಾಯುಕ್ತ ಜ್ಯೋತಿ ಗಿರೀಶ, ಸಮಾಜಕಲ್ಯಾಣ ಇಲಾಖೆಯ ಅಧಿಕಾರಿ ಜಗದೇವ ಪಾಸೋಡೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.