ಕಲಾವಿದರ ಪೋಷಣೆಯಲ್ಲಿ ಜಿಲ್ಲೆ ಯಾವಾಗಲೂ ಮುಂದೆ: ವೆಂಕಟರಮಣಸ್ವಾಮಿ

| Published : Apr 07 2025, 12:37 AM IST

ಸಾರಾಂಶ

ಜಿಲ್ಲೆಯು ಕಲೆಗಳ ತವರೂರಾಗಿದ್ದು, ಕಲಾವಿದರ ಪೋಷಣೆಯಲ್ಲಿ ಯಾವಾಗಲೂ ಮುಂದಿದೆ ಎಂದು ದಲಿತ ಮಹಾಸಭಾ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಹೇಳಿದರು.

ಚಾಮರಾಜನಗರ: ಜಿಲ್ಲೆಯು ಕಲೆಗಳ ತವರೂರಾಗಿದ್ದು, ಕಲಾವಿದರ ಪೋಷಣೆಯಲ್ಲಿ ಯಾವಾಗಲೂ ಮುಂದಿದೆ ಎಂದು ದಲಿತ ಮಹಾಸಭಾ ಉಪಾಧ್ಯಕ್ಷ ವೆಂಕಟರಮಣಸ್ವಾಮಿ (ಪಾಪು) ಹೇಳಿದರು. ನಗರದ ವರನಟ ಡಾ. ರಾಜ್ ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಮೈಸೂರಿನ ಜಗ್ಗು ಜಾದೂಗಾರ್ ನಿರಂತರ ಕಲಾ ವೇದಿಕೆ ವತಿಯಿಂದ ಸಹಾಯಾರ್ಥ ಪ್ರದರ್ಶನದ ಜಾದೂ ಹಾಗೂ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸುಮಾರು 50 ವರ್ಷಗಳ ಹಿಂದೆ ರಾಜ್ಯದಲ್ಲಿ ನಷ್ಟ ಹೊಂದಿದ್ದ ನಾಟಕ ಕಂಪನಿಗಳು ಚಾ.ನಗರಕ್ಕೆ ಬಂದು ತಿಂಗಳುಗಟ್ಟಲೇ ಉಳಿದುಕೊಳ್ಳುತ್ತಿದ್ದವು. ಚಾಮರಾಜನಗರದ ಜನರು ಹೃದಯ ವೈಶಾಲ್ಯತೆಯಿಂದ ಕಲಾವಿದರನ್ನು ಪೋಷಣೆ ಮಾಡುತ್ತಿದ್ದರು. ಜಗ್ಗು ಜಾದೂಗಾರ್ ಅವರು ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಜಾದೂ ಪ್ರದರ್ಶನ ಆಯೋಜಿಸಿದ್ದು ಪೇಕ್ಷರರ ಸಹಕಾರದಿಂದ ಅವರಿಗೆ ಒಳ್ಳೆಯದಾಗಲಿದೆ ಎಂದರು. ರೋಮಾಂಚನ ಜಾದೂ ಪ್ರದರ್ಶನ ಮೈಸೂರಿನ ಜಗ್ಗು ಜಾದೂಗಾರ್ ನಿರಂತರ ಕಲಾ ವೇದಿಕೆ ಪ್ರದರ್ಶಸಿದ ಜಾದೂ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ರೋಟರಿ ಅಧ್ಯಕ್ಷ ರಾಮಸಮುದ್ರ ನಾಗರಾಜು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಂಜಯ್ಯ, ಜಾನಪದ ಗಾಯಕ ಸಿ.ಎಂ.ನರಸಿಂಹಮೂರ್ತಿ, ಸುರೇಶ್, ಗುತ್ತಿಗೆದಾರರ ಎಂ.ಎಸ್.ಮಾದಯ್ಯ, ಡಿಎಸ್ಎಸ್ ಜಿಲ್ಲಾ ಸಂಯೋಜಕ ಸಿ.ಎಂ.ಶಿವಣ್ಣ, ಕಲೆ ನಟರಾಜು, ಶಿವಣ್ಣ ಹಾಜರಿದ್ದರು.