ಗೋಮಾತೆಗೆ ಹಾಲುಣಿಸಿದ ನಾಯಿ !

| Published : Feb 16 2024, 01:45 AM IST

ಸಾರಾಂಶ

ಈ ಮೂಕ ಪ್ರಾಣಿಗಳು ಪರಸ್ಪರ ಅನ್ಯೋನ್ಯತೆಯಿಂದ ಇದ್ದು ನಾಯಿ ಕರುವಿಗೆ ಹಾಲು ಉಣಿಸುತ್ತಿರುವುದನ್ನು ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ.

ರಾಮನಗರ: ನಾಯಿಯೊಂದು ಗೋಮಾತೆಗೆ ಹಾಲುಣಿಸಿದ ವಿಚಿತ್ರ ಘಟನೆಯೊಂದು ತಾಲೂಕಿನ ಯರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಸಾವಿತ್ರಮ್ಮ ಎಂಬುವರಿಗೆ ಸೇರಿದ ಕರು ಮತ್ತು ನಾಯಿ ಇದಾಗಿದೆ. ಈ ಮೂಕ ಪ್ರಾಣಿಗಳು ಪರಸ್ಪರ ಅನ್ಯೋನ್ಯತೆಯಿಂದ ಇದ್ದು ನಾಯಿ ಕರುವಿಗೆ ಹಾಲು ಉಣಿಸುತ್ತಿರುವುದನ್ನು ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ನಾಯಿ ಬಳಿ ಕರು ಹಾಲು ಕುಡಿಯುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.