ಶಿಕ್ಷಣ ಕ್ಷೇತ್ರಕ್ಕೆ ನೀಡಿದ ದಾನ ಸರ್ವಶ್ರೇಷ್ಠ. ಡಾ. ಕಾಶಿನಾಥ ಪೈ

| Published : Oct 05 2024, 01:32 AM IST

ಶಿಕ್ಷಣ ಕ್ಷೇತ್ರಕ್ಕೆ ನೀಡಿದ ದಾನ ಸರ್ವಶ್ರೇಷ್ಠ. ಡಾ. ಕಾಶಿನಾಥ ಪೈ
Share this Article
  • FB
  • TW
  • Linkdin
  • Email

ಸಾರಾಂಶ

ಗಂಗೊಳ್ಳಿ ಟೌನ್ ಸೌಹಾರ್ದ ಕೊ-ಆಪರೇಟಿವ್ ಸೊಸೈಟಿಯ ಬೈಲೂರು ಮಂಜುನಾಥ ಶೆಣೈ ಸಭಾಭವನದಲ್ಲಿ ಸಂಘದ ಸಾರ್ವಜನಿಕ ಉಪಕಾರ ನಿಧಿಯಿಂದ ಸರಸ್ವತಿ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಅಕ್ಷರ ದಾಸೋಹ ಕಾರ್ಯಕ್ಕೆ ಕೊಡುಗೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ದಾನಗಳಲ್ಲಿ ಅನ್ನದಾನ ಶ್ರೇಷ್ಟವೆಂಬ ಪ್ರತೀತಿ ಇದ್ದರೂ ಇಂದಿನ ದಿನಗಳಲ್ಲಿ ಶಿಕ್ಷಣ ಕ್ಷೇತ್ರಕ್ಕೆ ನೀಡುವ ಕೊಡುಗೆ ನಿಜವಾಗಿಯೂ ಸರ್ವಶ್ರೇಷ್ಟವಾದುದು ಎಂದು ಗಂಗೊಳ್ಳಿ ಸರಸ್ವತಿ ವಿದ್ಯಾಲಯ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಗಂಗೊಳ್ಳಿಯ ಪ್ರಸಿದ್ಧ ವೈದ್ಯ ಡಾ. ಕಾಶೀನಾಥ ಪೈ ಹೇಳಿದರು.

ಶುಕ್ರವಾರ ಗಂಗೊಳ್ಳಿ ಟೌನ್ ಸೌಹಾರ್ದ ಕೊ-ಆಪರೇಟಿವ್ ಸೊಸೈಟಿಯ ಬೈಲೂರು ಮಂಜುನಾಥ ಶೆಣೈ ಸಭಾಭವನದಲ್ಲಿ ಸಂಘದ ಸಾರ್ವಜನಿಕ ಉಪಕಾರ ನಿಧಿಯಿಂದ ಸರಸ್ವತಿ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಅಕ್ಷರ ದಾಸೋಹ ಕಾರ್ಯಕ್ಕೆ ನೀಡಲಾದ ಕೊಡುಗೆಯನ್ನು ಸ್ವೀಕರಿಸಿ ಅವರು ಮಾತನಾಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಸಂಘ ಅಧ್ಯಕ್ಷ ಜಿ. ವೆಂಕಟೇಶ್ ಶೆಣೈ ವಹಿಸಿದ್ದರು.

ಸಹಕಾರಿಯ ಉಪಾಧ್ಯಕ್ಷ ಜಿ. ವಿಶ್ವನಾಥ ಆಚಾರ್ಯ, ಮಾಜಿ ಅಧ್ಯಕ್ಷ ಎಚ್. ಗಣೇಶ್ ಕಾಮತ್, ನಿರ್ದೇಶಕರಾದ ಎನ್. ಮಾಧವ ಕಿಣಿ, ಎಸ್. ವೆಂಕಟರಮಣ ಆಚಾರ್ಯ, ಜಿ. ವೇದವ್ಯಾಸ ಆಚಾರ್ಯ, ಕೆ.ಗೋಪಾಲಕೃಷ್ಣ ನಾಯಕ್, ಕಿರಣ್

ಪಿಲಿಪ್ ಪಿಂಟೊ, ಜಿ. ವೆಂಕಟೇಶ ನಾಯಕ್ ಹಾಗೂ ಗೀತಾ ಜಿ. ನಾಯಕ್‌ ಉಪಸ್ಥಿತರಿದ್ದರು.ಮುಖ್ಯ ಕಾರ್ಯನಿರ್ವಾಹಕ ಗಣೇಶ್ ನಾಯಕ್ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕ ನಾಗಪ್ರಸಾದ ಪೈ ಸ್ವಾಗತಿಸಿದರು. ನಿರ್ದೇಶಕ ರಾಮನಾಥ ನಾಯಕ್ ವಂದಿಸಿದರು.೨.೮೦ ಲಕ್ಷ ರು. ದೇಣಿಗೆ

ಸಮಾರಂಭದಲ್ಲಿ ಸರಸ್ವತಿ ವಿದ್ಯಾಲಯ ಶಿಕ್ಷಣ ಸಂಸ್ಥೆಗೆ ೧.೨೦ ಲಕ್ಷ ರು., ಶಾರದೋತ್ಸವ ಸಮಿತಿಗೆ ೫೫,೫೫೫ ರು., ಗಂಗೊಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಒಂದು ಲ್ಯಾಪ್‌ಟಾಪ್ ಹಾಗೂ ಪ್ರಿಂಟರ್, ಯಳಜಿತ್ ಶಾಲೆಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ೫೦,೦೦೦ ರು., ರಾಷ್ಟ್ರೀಯ ಸೇವಾ ಯೋಜನೆಗೆ ೧೦,೦೦೦ ರು. ಸೇರಿದಂತೆ ಒಟ್ಟು ೨.೮೦ ಲಕ್ಷ ರು. ದೇಣಿಗೆಯನ್ನು ವಿವಿಧ ಸಂಘ ಸಂಸ್ಥೆಗಳಿಗೆ ನೀಡಲಾಯಿತು.